Love Jihad: ಇತ್ತೀಚೆಗೆ ಲವ್ ಜಿಹಾದ್ (Love Jihad) ಬೇರೆ ಬೇರೆ ರೂಪ ಪಡೆಯುವುದಲ್ಲದೆ, ಇತರ ರಾಜ್ಯ ದಲ್ಲಿ ಕೂಡ ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬರುತ್ತಿದೆ. ಇದೀಗ ಮಧ್ಯಪ್ರದೇಶದ ಮಹಿಳೆಯೊಬ್ಬರಿಗೆ ಕರ್ನಾಟಕದ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬ ತನ್ನ ಧರ್ಮದ ಗುರುತು ಮುಚ್ಚಿಟ್ಟು ಮದುವೆಯಾಗುವ ಭರವಸೆ ನೀಡಿ, ಲೈಂಗಿಕವಾಗಿ ದುರುಪ ಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಹೌದು, ದಮೋಹ್ ಪ್ರದೇಶದ ಮಹಿಳೆಯೊಬ್ಬರು, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಓಮರ್ ಫಾರುಖ್ ಎಂಬಾತ, ತನ್ನ ಹೆಸರನ್ನು ರಾಜೀವ್ ಎಂಬುದಾಗಿ ಹೇಳಿಕೊಂಡು, ಮಹಿಳೆ ಜತೆಗೆ ಸ್ನೇಹ ಬೆಳೆಸಿ , ಸ್ನೇಹವನ್ನು ಪ್ರೀತಿಗೆ ತಿರುಗಿಸಿ, ಮದುವೆಯಾಗುವ ಆಶ್ವಾಸನೆ ನೀಡಿ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ.
ಕೆಲವು ಸಮಯದ ಬಳಿಕ ಆತ ಮುಸ್ಲಿಂ ಎಂದು ತಿಳಿದುಬಂದಿದೆ. ಆದರೆ, ಮದುವೆ ಯಾಗುವಂತೆ ಕೇಳಿದರೆ ಖಾಸಗಿ ಚಿತ್ರ, ವೀಡಿಯೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಹೀಗೆಂದು ಆರೋಪಿಸಿ ಮಹಿಳೆ ದಮೋಹ್‌ನಲ್ಲಿ ಕೇಸು ದಾಖಲಿಸಿದ್ದಾರೆ. ಇದೀಗ ಪ್ರಕರಣದ ತನಿಖೆಗಾಗಿ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ.
ಈ ಘಟನೆ ಬಗ್ಗೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ನಾನೂ ಮಹಿಳೆ ನಮಗೆ ಹೋರಾಡುವುದು ಗೊತ್ತಿದೆ ಎಂದಿದ್ದರು. ಈಗ ನಮ್ಮ ರಾಜ್ಯದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಆರೋಪಿಯನ್ನು ಅವರದ್ದೇ ಸರಕಾರ ಹುಡುಕಿಕೊಡಲಿ. ಅವನ ಲವ್ ಜೆಹಾದ್ ಮದವನ್ನು ನಾವು ಇಳಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಸದ್ಯ ಈ ಲವ್ ಜಿಹಾದ್ ಸಂಬಂಧಿಸಿದಂತೆ ಮಧ್ಯಪ್ರದೇಶ ಸರಕಾರ, ಕರ್ನಾಟಕದಲ್ಲಿ ಆಳ್ವಿಕೆಯಲ್ಲಿರುವ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ರಾಜ್ಯದ ಮಹಿಳೆಗೆ ನ್ಯಾಯ ಕೊಡಿಸಲು ಬೇಕಾದ ಕ್ರಮ ಶೀಘ್ರದಲ್ಲಿ ಕೈಗೆತ್ತಿಕೊಳ್ಳುವುದು ಸೂಕ್ತ ಎಂದು ಸೂಚನೆ ನೀಡಿದ್ದಾರೆ.
