Visishta simha- Haripriya: ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ ವಸಿಷ್ಠ ಸಿಂಹ- ಹರಿಪ್ರಿಯಾ (Visishta simha- Haripriya) ಕಬಿನಿ ಬಳಿ ಸಫಾರಿಗೆ ತೆರಳಿದ್ದಾರೆ. ಈ ವೇಳೆ ಆನೆಯೊಂದು ಇವರಿಬ್ಬರೂ ಇದ್ದ ಜೀಪ್ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಸದ್ಯ ಕೂದಲೆಳೆ ಅಂತರದಲ್ಲಿ ಜೋಡಿ ಪಾರಾಗಿದ್ದಾರೆ.
ಶುಕ್ರವಾರ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ನುರಿತ ತಂಡದ ಜೊತೆಗೆ ಕಬಿನಿ ಫಾರೆಸ್ಟ್‌ನಲ್ಲಿ ಸಫಾರಿಗೆಂದು ತೆರಳಿದ್ದಾರೆ. ಕಾಡಿನ ಹಾದಿಯಲ್ಲಿ ಜೀಪ್‌ನಲ್ಲಿ ಸಾಗುವಾಗ, ಏಕಾಏಕಿ ಬೃಹತ್ ಆನೆ ಎದುರಾಗಿದೆ. ನೋಡ ನೋಡುತ್ತಿದ್ದಂತೆ ಆನೆ (elephant) ಜೀಪ್ ನೋಡಿ ಓಡೋಡಿ ಬಂದಿದೆ. ಘೀಳಿಡುತ್ತ ಜೀಪ್‌ನ್ನು ಅಟ್ಟಿಸಿಕೊಂಡು ಬಂದಿದೆ. ಜೀಪ್ ನಲ್ಲಿದ್ದ ಈ ಜೋಡಿ ಸೇರಿದಂತೆ ಎಲ್ಲರೂ ಹೆದರಿ ಬೆವೆತು ಹೋದರು. ಜೀಪ್ ಓಡಿಸುತ್ತಾ ಹೋದಂತೆ ಆನೆ ಹಿಂದೆಯೇ ಓಡಿ ಬರುತ್ತಿತ್ತು. ಈ ದೃಶ್ಯವನ್ನು ವಿಡಿಯೋ ಮೂಲಕ ಸೆರೆಹಿಡಿದಿದ್ದಾರೆ.
ಈ ಆನೆಯ ದಾಳಿಯ ವಿಡಿಯೋವನ್ನು ನಟ ವಸಿಷ್ಠ ಸಿಂಹ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಚೇಸ್ ಹೇಗಿದೆ ನೋಡಿ ಎಂದು ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ. ವಿಡಿಯೋ ನೋಡಿ ನೆಟ್ಟಗರು ವಿವಿಧ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Rain: ರಾಜ್ಯದ ಜನತೆಗೆ ಸೇರಿ ರೈತರಿಗಿದೆ ಮಳೆಯ ಕುರಿತಾದ ಶಾಕಿಂಗ್ ಮಾಹಿತಿ!!!
