Home » Rashmika -Vijay Deverakonda: ರಶ್ಮಿಕಾ-ವಿಜಯ್ ಡೇಟಿಂಗ್ ಗೆ ಪ್ರೂಫ್ ಕೊಟ್ಟ ಫ್ಯಾನ್ಸ್!

Rashmika -Vijay Deverakonda: ರಶ್ಮಿಕಾ-ವಿಜಯ್ ಡೇಟಿಂಗ್ ಗೆ ಪ್ರೂಫ್ ಕೊಟ್ಟ ಫ್ಯಾನ್ಸ್!

0 comments
Rashmika -Vijay Deverakonda

Rashmika -Vijay Deverakonda: ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ(Rashmika Mandanna) ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ರಶ್ಮಿಕಾ ಮಂದಣ್ಣ(Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಇಬ್ಬರ ನಡುವೆ ಲವ್ ಕಹಾನಿ ನಡೆಯುತ್ತಿದೆ ಎಂಬ ಸುದ್ದಿ ವರ್ಷಗಳಿಂದಲೂ ಹರಿದಾಡುತ್ತಿದೆ. ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದರು ಕೂಡ ಜೊತೆಯಾಗಿ ಆಗಾಗ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಲೆ ಇರುತ್ತಾರೆ.

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ, ಡಿಯರ್ ಕಾಮ್ರೆಡ್​ ಸಿನಿಮಾಗಳಲ್ಲಿ​ ಇಬ್ಬರು ತೆರೆ ಹಂಚಿಕೊಂಡಿದ್ದು, ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇಬ್ಬರಿಗೂ ಕೂಡ ದೊಡ್ಡ ಮಟ್ಟದ ನೇಮ್ ಫೇಮ್ ತಂದು ಕೊಟ್ಟಿದೆ. ‘ಗೀತಾ ಗೋವಿಂದಂ’ (Geetha Govindam) ಸಿನಿಮಾ ಸಿನಿ ರಸಿಕರ ಪಾಲಿನ ನೆಚ್ಚಿನ ಸಿನಿಮಾವಾಗಿ ವಿಜಯ್ ದೇವರಕೊಂಡ ಹಾಗೂ ನ್ಯಾಶನಲ್ ಕ್ರಷ್ ಜೋಡಿಯ ಮೋಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿಬಿಟ್ಟಿದ್ದರು. ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಶ್ಮಿಕಾ ಅವರು ವಿಜಯ್ ಜೊತೆ ಲಂಚ್ ಡೇಟ್ ತೆರಳಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಹೌದು, ವಿಜಯ್ ಹಾಗೂ ರಶ್ಮಿಕಾ( Rashmika -Vijay Deverakonda) ರೆಸ್ಟೋರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಲಂಚ್ ಡೇಟ್ ತೆರಳಿದ್ದು, ಅಲ್ಲಿ ವಿಜಯ್ ಹಾಗೂ ರಶ್ಮಿಕಾ ಕುಟುಂಬದವರು ಕೂಡ ಇದ್ದರು ಅನ್ನೋದು ಮತ್ತೊಂದು ವಿಶೇಷ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷಿಪಟ್ಟಿದ್ದಾರೆ.

Vijay D and Rashmika spotted with their friends & family. So they are actually dating.
by u/Muted-Expression-109 in BollyBlindsNGossip

ವಿಜಯ್ ಹಾಗೂ ರಶ್ಮಿಕಾ ಸಂಬಂಧ ಮುರಿದು ಬಿದ್ದ ಬಗ್ಗೆ ಈ ಮೊದಲು ವರದಿ ಆಗಿತ್ತು. ಬಳಿಕ ಮತ್ತೆ ಒಂದಾಗಿದ್ದಾರೆ ಎನ್ನಲಾಯಿತು. ಈಗ ವಿಜಯ್-ರಶ್ಮಿಕಾ ಮಧ್ಯೆ ಎಲ್ಲವೂ ಸರಿಯಾಗಿದೆ. ಸಿನಿ ಇಂಡಸ್ಟ್ರಿಯಲ್ಲಿ ರಶ್ಮಿಕಾ ಹಾಗೂ ವಿಜಯ್ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ‘ಲೈಗರ್’ ಬಳಿಕ ವಿಜಯ್ ಅವರು ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗೂ ರಶ್ಮಿಕಾ ಮಂದಣ್ಣ ಕೈಯಲ್ಲಿ ‘ಪುಷ್ಪ 2’ ಸೇರಿ ಕೆಲವು ಮಹತ್ವದ ಪ್ರಾಜೆಕ್ಟ್​ಗಳಿವೆ.

 

ಇದನ್ನು ಓದಿ: Mangalore: ಮಂಗಳೂರು ಪಿಲಿಕುಳದ ಮೃಗಾಲಯಕ್ಕೆ ಹೊಸ ಗರಿಮೆ: ಸಂತಾನೋತ್ಪತ್ತಿಯಲ್ಲಿ ದೇಶದ ಟಾಪ್ 1ಸ್ಥಾನ ಪಡೆದ ಪಿಲಿಕುಳ

You may also like

Leave a Comment