Plastic Bottle: ದಿನದ 24 ಗಂಟೆಯೂ ನೀರಿನ ಅವಶ್ಯಕತೆ ಇದ್ದೇ ಇದೆ. ಪ್ರಯಾಣ ಮಾಡುವಾಗ, ವಾಕಿಂಗ್ ಹೋಗುವಾಗ, ಆಹಾರ ಸೇವಿಸುವಾಗ ಹೀಗೆ ನೀರಿನ ಅಗತ್ಯತೆ ಎಲ್ಲೆಡೆ ಇರುತ್ತದೆ. ಹೀಗೆ ನೀರನ್ನು ಕುಡಿಯಲು ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯ ವರೆಗೂ ಪ್ಲಾಸ್ಟಿಕ್ ಬಾಟಲ್ (Plastic Bottle) ಬಳಕೆ ಸಾಮಾನ್ಯ ಆಗಿದೆ.
ಆದರೆ ಹೀಗೆ ಎಲ್ಲೆಂದರಲ್ಲಿ ನಾವು ಕುಡಿಯುವ ನೀರು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿರುತ್ತೆ. 10 ರೂ ಕೊಟ್ಟರೆ ಎಲ್ಲಿ ಬೇಕಾದರೂ ನೀರು ಸಿಗುತ್ತೆ. ಅದುವೇ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುವ ಬದಲಿಗೆ ಸಣ್ಣ ಲೋಹದ ಬಾಟಲಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ಅದನ್ನು ಮರುಬಳಕೆ ಮಾಡಿ.
ಪ್ಲಾಸ್ಟಿಕ್ ಬಾಟಲ್ ನಲ್ಲಿ ಕೇವಲ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ. ಒಂದು ರಿಸರ್ಚ್ ನ ಪ್ರಕಾರ ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದರಿಂದಲೇ ಮಹಿಳೆಯರು ಮಧುಮೇಹ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಸಧ್ಯಕ್ಕೆ ಭಾರತದಲ್ಲಿ ಸುಮಾರು ಎಂಟು ಕೋಟಿ ಜನರು ಇದಕ್ಕೆ ಬಲಿಯಾಗಿದ್ದಾರೆ. 2045ರ ಸುಮಾರಿಗೆ ಇದು ಹದಿಮೂರು ಕೋಟಿಗೆ ಏರಲಿದೆ ಎಂದು ಅಧ್ಯಯನ ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ನೀರಿನ ಬಾಟಲಿಗಳನ್ನು ತಯಾರಿಸಲು ಬಳಸುವ ವಸ್ತುವು ಪಾಲಿಮರ್ ಆಗಿದೆ. ಪಾಲಿಮರ್ ಎಂದರೆ ಕಾರ್ಬನ್, ಆಮ್ಲಜನಕ, ಹೈಡ್ರೋಜನ್ ಮತ್ತು ಕ್ಲೋರೈಡ್‌ನಿಂದ ಮಾಡಲ್ಪಟ್ಟಿರುತ್ತದೆ.
ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್ ಅನ್ನು ಹೆಚ್ಚಿನ ನೀರಿನ ಬಾಟಲಿಗಳಲ್ಲಿ ಬಳಸಲಾಗುತ್ತದೆ. ನೀರಿನ ಬಾಟಲಿಗಳು ಸ್ವಲ್ಪ ಮೃದುವಾಗಿರುತ್ತವೆ ಮತ್ತು ಅದರಲ್ಲಿ ಥಾಲೇಟ್ಸ್ ಮತ್ತು ಬಿಸಾಫೆನಾಲ್-ಎ (ಬಿಪಿಎ) ಎಂಬ ರಾಸಾಯನಿಕವನ್ನು ಬಳಸುವುದನ್ನು ನೀವು ಗಮನಿಸಿರಬಹುದು. ಇವು ಹೃದಯ ಸಂಬಂಧಿ ಕಾಯಿಲೆಗಳು ಅಥವಾ ಮಧುಮೇಹಕ್ಕೆ ಕಾರಣವಾಗಬಹುದು.
ಅಲ್ಲದೆ ನಮಗೆಲ್ಲ ತಿಳಿದಿರುವಂತೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ತಿಳಿದೋ ತಿಳಿಯದೆಯೋ ಮೈಕ್ರೊಪ್ಲಾಸ್ಟಿಕ್‌ಗಳು ದೇಹದಲ್ಲಿ ಕರಗುತ್ತಿವೆ.
Frontiers.org ನ ವರದಿಯ ಪ್ರಕಾರ, ಬೀದಿಗಳಲ್ಲಿ ಕಂಡುಬರುವ ಮುಚ್ಚಿದ ಬಾಟಲಿಯ ನೀರು ಬಿಸಿ ವಸ್ತುಗಳ ಸಂಪರ್ಕಕ್ಕೆ ಬಂದ ನಂತರ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ.
ಬಿಸಿಲಿನಲ್ಲಿ ಇರಿಸಲಾದ ಪ್ಲಾಸ್ಟಿಕ್ ಬಾಟಲಿಗಳ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಈ ಬಾಟಲಿಗಳ ಕಾರಣದಿಂದಾಗಿ, ಮೈಕ್ರೋಪ್ಲಾಸ್ಟಿಕ್ಗಳು ನೀರಿನಲ್ಲಿ ಬಿಡಲು ಪ್ರಾರಂಭಿಸುತ್ತವೆ. ಈ ನೀರು ಕುಡಿದ ತಕ್ಷಣ ದೇಹದಲ್ಲಿ ಹಾರ್ಮೋನ್ ಸಮತೋಲನ ಕಾಪಾಡುವ ಎಂಡೋಕ್ರೈಮ್ ಸಿಸ್ಟಂ ಅನ್ನು ಹಾಳು ಮಾಡುತ್ತದೆ. ನೀವು ನಿರಂತರವಾಗಿ ಇಂತಹ ನೀರನ್ನು ಸೇವಿಸಿದರೆ, ಅದು ಬಂಜೆತನ, ಆರಂಭಿಕ ಪ್ರೌಢಾವಸ್ಥೆ, ಹಾರ್ಮೋನ್ ಅಸಮತೋಲನ ಮತ್ತು ಯಕೃತ್ತಿಗೆ ಹಾನಿಯನ್ನು ಉಂಟುಮಾಡಬಹುದು.
ಇನ್ನು ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಕೊಂಡು ಬಿಸಿಲಿಗೆ ಹೋಗುವುದರಿಂದ ನೀರಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗಿ ನೀರು ಕಲುಷಿತಗೊಳ್ಳುತ್ತದೆ. ಇದನ್ನು ಸೇವಿಸಿದರೆ ವಾಂತಿ, ತಲೆನೋವಿನಂತಹ ಅನಾರೋಗ್ಯ ಕಾಡುತ್ತದೆ. ಅಲ್ಲದೆ ಪ್ಲಾಸ್ಟಿಕ್ ಬಾಟಲಿಗಳು ಹಲವು ಬಣ್ಣಗಳಲ್ಲಿರುತ್ತದೆ. ಈ ಬಣ್ಣಗಳು ಬಿಸಿಲಿನ ತಾಪಕ್ಕೆ ನೀರಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯಕ್ಕೆ ಇನ್ನಷ್ಟು ಹಾನಿಯನ್ನು ಉಂಟು ಮಾಡುತ್ತವೆ.
ಪ್ಲಾಸ್ಟಿಕ್‌ನಲ್ಲಿನ ಡಯಾಕ್ಸಿನ್ ಎನ್ನುವ ವಿಷಕಾರಿ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ಇದು ಸ್ತನ ಕ್ಯಾನ್ಸರ್‌ಗೂ ಕಾರಣವಾಗುವಂತೆ ಮಾಡುತ್ತದೆ. ನೀರು ದೇಹಕ್ಕೆ ಅವಶ್ಯಕ ಆದರೆ ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು ಅಪಾಯವನ್ನೇ ತಂದೊಡ್ಡುತ್ತದೆ.
ಸಾಮಾನ್ಯವಾಗಿ ಪ್ಲಾಸ್ಟಿಕ್ ಬಾಟಲಿಗಳು ಒಂದು ಬಾರಿ ಬಳಕೆಗೆ ಯೋಗ್ಯವಾಗಿರುತ್ತದೆ. ಅದನ್ನೇ ಪದೇ ಪದೇ ಬಳಸಿದರೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಬೊಜ್ಜಿನ ಸಮಸ್ಯೆಗಳು ಕೂಡ ಕಾಲಕ್ರಮೇಣ ದೇಹವನ್ನು ಆಕ್ರಮಿಸಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಶೇಖರಣೆ ಮಾಡಿದ ನೀರನ್ನು ಕುಡಿಯುವ ಮುನ್ನ ಎಚ್ಚರ.
ಇದನ್ನೂ ಓದಿ: Heat Wave: ಈ ರಾಜ್ಯದ ಶಾಲಾ ಕಾಲೇಜುಗಳಿಗೆ ಜೂ.28 ರವರೆಗೆ ರಜೆ ಘೋಷಣೆ!
