Home » Accident: ದೊಡ್ಮನೆ ಕುಟುಂಬದ ಯುವ ನಟನಿಗೆ ಅಪಘಾತ‌ ; ಆಸ್ಪತ್ರೆಗೆ ದಾಖಲು- ಬಲಗಾಲು ಕಳೆದುಕೊಂಡ ನಟ ಸೂರಜ್ !

Accident: ದೊಡ್ಮನೆ ಕುಟುಂಬದ ಯುವ ನಟನಿಗೆ ಅಪಘಾತ‌ ; ಆಸ್ಪತ್ರೆಗೆ ದಾಖಲು- ಬಲಗಾಲು ಕಳೆದುಕೊಂಡ ನಟ ಸೂರಜ್ !

0 comments
Accident

Accident: ಭೀಕರ ರಸ್ತೆ ಅಪಘಾತದಲ್ಲಿ (Accident) ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಮಗ ನಟ ಸೂರಜ್​ಗೆ ಗಂಭೀರ ಗಾಯಗಳಾಗಿದ್ದು, ನಟನ ​ಕಾಲಿಗೆ ಹೆಚ್ಚಿನ ಪೆಟ್ಟು ಬಿದ್ದು ಹಿನ್ನೆಲೆ ಆತನ ಕಾಲು ಕತ್ತರಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ (ಜೂನ್​ 24) ಸಂಜೆ ಸೂರಜ್​ ಅವರು ಬೈಕ್​ನಲ್ಲಿ ಊಟಿಗೆ ತೆರಳುತ್ತಿದ್ದರು. ಬೇಗೂರಿನಿಂದ ಹಿರಿಕಾಟಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿಯೊಂದು ಮೈಸೂರು ಕಡೆಯಿಂದ ಬರುತ್ತಿದ್ದ ಬುಲೆಟ್ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಸೂರಜ್ ಕಾಲಿನ ಮೇಲೆ ಟಿಪ್ಪರ್​ ಹರಿದಿದ್ದು, ಘಟನೆ ಪರಿಣಾಮ ಆತನ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸೂರಜ್ ಕಾಲಿಗೆ ಗಂಭೀರ ಗಾಯವಾದ ಹಿನ್ನೆಲೆ ನಟನ ಬಲಗಾಲು ಕತ್ತರಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಶಿವರಾಜ್​​ಕುಮಾರ್​​ ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ.

ಇದನ್ನೂ ಓದಿ: Viral Timetable: 6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್‌ ; ಓದಿಗೆ 15 ನಿಮಿಷ, ನಿದ್ದೆಗೆ 2 ಗಂಟೆ ! ವೇಳಾಪಟ್ಟಿಯಲ್ಲಿ ಇನ್ನು ಏನೆನೆಲ್ಲಾ ಇದೆ ಗೊತ್ತಾ?

You may also like

Leave a Comment