Intersting news: ನಿಜವಾದ ಪ್ರೀತಿಗೆ ಬೆಲೆ ಇಲ್ಲ, ಯಾರಿಗೇ ಸಹಾಯ ಮಾಡಲಿ ಸಹಾಯ ಪಡೆದು ಕೊಂಡ ನಂತರ ಎದೆಗೇ ಒದ್ದು ಹೋಗುವವರ ಕಥೆಯನ್ನು ನಾವು ಕೇಳುತ್ತಲೇ ಬರುತ್ತಿದ್ದೇವೆ, ಇದು ಅಂತದ್ದೇ ಇನ್ನೊಂದು ಪ್ರೀತಿ ದ್ರೋಹ ವಂಚನೆಯ ಕಥೆ. ರಾತ್ರಿ ಹಗಲು ಕಷ್ಟಪಟ್ಟು ದುಡಿದು ಪತ್ನಿಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮಾಡಲು ತನ್ನ ಸಮಯ ಮತ್ತು ಹಣವನ್ನು ಹೂಡಿದ ಗಂಡನನ್ನೇ ತ್ಯಜಿಸಿದ್ದಾಳೆ ಆ ಪತ್ನಿ. ಅಷ್ಟೇ ಅಲ್ಲದೆ ಗಂಡನನ್ನು ಜೈಲಿಗೆ ಕೂಡಾ ಹಾಕಿಸಿದ್ದಾಳೆ.
ಅಲೋಕ್ ಮೌರ್ಯ ಎಂಬುವರು ತಮ್ಮ ಪತ್ನಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಜ್ಯೋತಿ ಮೌರ್ಯ ವಿರುದ್ಧ ಆರೋಪ ಮಾಡಿದ್ದಾರೆ. ‘ ಮದುವೆ ಬಳಿಕ ನಾವಿಬ್ಬರೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೆವು. ಆದರೆ, ನಾನು ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ ಕೊಡಿಸಿದೆ. ಪ್ರಯಾಗ್ರರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ಆಕೆಯನ್ನು ಸೇರಿಸಿದೆ. ಹಾಗೆ ದುಡಿದು ಕಷ್ಟಪಟ್ಟು ಓದಿಸಿದೆ, ಆಕೆ ಕೂಡಾ ಚೆನ್ನಾಗಿ ಓದಿದಳು. ಕೊನೆಗೆ 2016 ರಲ್ಲಿ ಆಕೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಳು.’
‘ ಇಲ್ಲಿಯತನಕ ಕಷ್ಟದ ದಿನಗಳು. ಆಗ ಎಲ್ಲವೂ ಚೆನ್ನಾಗಿಯೇ ಇತ್ತು. ಮುಂದೆ ಯಶಸ್ಸನ್ನು ತಲೆಗೆ ತುಂಬಿಸಿಕೊಂಡ ಪತ್ನಿ ನನಗೆ ವಂಚನೆ ಮಾಡಲು ಮುಂದಾದಳು. ಈಗ ಬೇರೆ ಅಧಿಕಾರಿಯ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ. ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿರುವ ಸಂಗತಿ ಗೊತ್ತಾದ ಬಳಿಕವೂ ನಾನು ತನ್ನ ಮದುವೆ ಉಳಿಸಿಕೊಳ್ಳಲು ಯತ್ನಿಸಿದ್ದೇನೆ. ಆದರೆ, ಪತ್ನಿ ಜ್ಯೋತಿಯು, ನನ್ನ ವಿರುದ್ಧವೇ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದಾಳೆ” ಇದು ಗಂಡ ಅಲೋಕ್ ನ ಆರೋಪ. ಈಗ ಅಲೋಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಮತ್ತು ತನ್ನ ಬದುಕಿಗೆ ತೀರಾ ಅತ್ಯಗತ್ಯವಾದ ಕೆಲಸವನ್ನು ಕೂಡಾ ಕಳೆದುಕೊಂಡಿದ್ದಾನೆ. ಇದರಿಂದ ಸಂಕಷ್ಟಕ್ಕಿಡಾಗಿದ್ದು, ಮಾಧ್ಯಮಗಳ ಮುಂದೆ ಬಂದು ಅಲವತ್ತು ಕೊಂಡು ಅಲೋಕ್ ಕಣ್ಣೀರು ಹಾಕಿದ್ದಾರೆ.
ತನ್ನ ಹೆಂಡತಿಯ ಶಿಕ್ಷಣಕ್ಕಾಗಿ ಹಲವು ವರ್ಷಗಳ ಕಾಲ ದುಡಿದು ಹಣ ವ್ಯಯಿಸಿ, ಕೊನೆಗೆ ಆಕೆಯನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮಾಡಿದರೂ ಒಂದು ಚೂರೂ ಹಳೆಯದನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಪತ್ನಿ ಕೊಡವಿಕೊಂಡು ಹೋಗಿದ್ದಾಳೆ. ಇದೀಗ ನಿರುದ್ಯೋಗಿಯಾಗಿರುವ ಆತ ಸಂಪೂರ್ಣ ಅಸಹಾಯಕನಾಗಿದ್ದಾನೆ. ಅಲ್ಲದೆ, ಪತ್ನಿಗೆ ವಿಚ್ಛೇದನ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಲೋಕ್ ಆರೋಪಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಆಡಳಿತ ವರ್ಗದ ಬೆಂಬಲ ಕೂಡಾ ತನಗೆ ಸಿಗುತ್ತಿಲ್ಲ ಎಂದು ಅಲೋಕ್ ಆರೋಪಿಸಿದ್ದಾರೆ. ಒಟ್ಟಾರೆ ಇದು ನಡೆದು ಬಂದ ದಾರಿ ಮರೆತು ದಾರಿ ತಪ್ಪಿದವರ ಕಥೆ.
