Dating App: ನಗರದಲ್ಲಿ ಡೇಟಿಂಗ್ ಅನ್ನೋ ವರ್ಶನ್ ತುಂಬಾ ಪ್ರೇಮಸ್ ಆಗಿದೆ. ಬಹುತೇಕರು ತಮ್ಮ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ (Dating App) ಮೊರೆ ಹೋದರೆ, ಅದರ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದೆ ಈ ಸ್ಪೀಡ್ ಡೇಟಿಂಗ್.
ಕಾಲ ಬದಲಾಗಿದೆ ಎಷ್ಟು ಅಂದರೆ, ದುಡ್ಡು ಒಂದು ಇದ್ದರೆ ಸಾಕು ಎಲ್ಲವನ್ನು ಪಡೆದುಕೊಳ್ಳಬಹುದು. ಮಾನ ಮರ್ಯಾದೆ ಎಂಬುದು ಕೇವಲ ಪರಿಕಲ್ಪನೆ ಅಷ್ಟೇ. ಹೌದು, ಮೊದಲೆಲ್ಲಾ ಒಂದು ಗಂಡು ಹೆಣ್ಣು ಜೊತೆಯಾಗಿ ಕಾಣಬೇಕಾದರೆ ಸಾವಿರಾರು ಸಂಬಂಧಿಕರ ಒಪ್ಪಿಗೆ ಇರಬೇಕು. ಒಂದು ವೇಳೆ ಪ್ರೀತಿ ಎಂದು ಹೋದಲ್ಲಿ ಕುಟುಂಬದಿಂದಲೇ ದೂರವಿಡುತ್ತಿದ್ದರು. ಆದರೆ ಈಗ ಹುಡುಗ – ಹುಡುಗಿ ಸಮಾನರು. ಹಾಗೂ ವಯಸ್ಕರಾದ ಮೇಲೆ ಮಕ್ಕಳನ್ನು ಹೆತ್ತವರನ್ನು ಪ್ರಶ್ನೆ ಮಾಡುವಂತಿಲ್ಲ ಎಂಬ ಸ್ಥಿತಿಗೆ ಬಂದು ತಲುಪಿದೆ.
ಇದೀಗ ರಾಜ್ಯ ರಾಜಧಾನಿಗೆ ಸ್ಪೀಡ್ ಡೇಟಿಂಗ್ (speed Dating) ಕಾಲಿಟ್ಟಿದ್ದು, ಇದರ ಹವಾ ಕೂಡ ಜೋರಾಗಿಯೇ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಾಕಷ್ಟು ಕಂಪೆನಿಗಳು ಯುವ ಸಮೂಹವನ್ನು ಡೇಟಿಂಗ್ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡುತ್ತಿವೆ. ಇದಕ್ಕೆ ಈ ಹಿಂದೆ ಸಾಕಷ್ಟು ಸಾಕ್ಷಿಗಳೂ ಲಭ್ಯವಾಗಿವೆ.
ಯುವಕ-ಯುವತಿಯರಿಗೆ ಪರಸ್ಪರ ಭೇಟಿಯಾಗಿ ಪರಿಚಿತರಾಗುವ ಅವಕಾಶ ಕಲ್ಪಿಸಿಕೊಡುವ ಈ ಸ್ಪೀಡ್ ಡೇಟಿಂಗ್, ಹಲವಾರು ಕಂಪೆನಿಗಳು ಪ್ರಮುಖ ನಗರಗಳ ರೆಸ್ಟೋರೆಂಟ್, ಕೆಫೆ, ಬಾರ್, ಉದ್ಯಾನವನಗಳಂತಹ ಸ್ಥಳಗಳಲ್ಲಿ ಈವೆಂಟ್‌ಗಳನ್ನು ಆಯೋಜಿಸುತ್ತಿವೆ.
ಹೆಸರು ನೋಂದಾಯಿಸಿಕೊಂಡ ಯುವಕ-ಯುವತಿಯರಿಗೆ ಅಭಿರುಚಿ ಮತ್ತು ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತಹ ವ್ಯಕ್ತಿಗಳನ್ನು ಆರಿಸಿಕೊಳ್ಳುವ ಅವಕಾಶವನ್ನು ಸ್ಪೀಡ್ ಡೇಟಿಂಗ್ ಮಾಡಿಕೊಡುತ್ತದೆ. ಹೆಚ್ಚು ಸಮಯ ಕಾಯದೆ ಯುವಕ-ಯುವತಿಯನ್ನು ಆಯ್ಕೆ ಮಾಡಿಕೊಂಡು ಬೇಗನೇ ಡೇಟಿಂಗ್ ಶುರು ಮಾಡುವುದೇ ಫಾಸ್ಟ್ ಡೇಟಿಂಗ್ ಕಲ್ಪನೆ.
ಮುಖ್ಯವಾಗಿ ಸ್ಪೀಡ್ ಡೇಟಿಂಗ್ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಯುವಕರಿಗೆ 1499 ರೂ. ನಿಗದಿಯಾಗಿದ್ದರೆ, ಯುವತಿಯರಿಗೆ ಕೇವಲ 99 ರೂ. ಬುಕ್ ಮೈ ಶೋ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಆಯೋಜನೆಯಾಗಿರುವ ಈವೆಂಟ್ ಕುರಿತ ಜಾಹೀರಾತಿನ ಇನ್ಸ್ಟಾಗ್ರಾಂ ಪೋಸ್ಟ್, ಟ್ವಿಟ್ಟರ್, ಮುಂತಾದ ಸಾಮಾಜಿಕ ಜಾಲತಾಣ ಆಪ್ ಗಳಲ್ಲಿ ವೈರಲ್ ಆಗಿದ್ದು, ಫಾಸ್ಟ್ ಡೇಟಿಂಗ್ನಲ್ಲಿ ಭಾಗವಹಿಸಲು ಯುವಕ-ಯುವತಿಯರಿಗೆ ನಿರ್ಧರಿಸಲಾಗಿರುವ ಟಿಕೆಟ್ ದರದ ಬಹಳ ವ್ಯತ್ಯಾಸ ಇದೆ ಎಂಬ ಕಾರಣಕ್ಕೆ ಸಾಕಷ್ಟು ಚರ್ಚೆಯಾಗುತ್ತಿದೆ.
ಒಟ್ಟಿನಲ್ಲಿ ಹೆಣ್ಣು-ಗಂಡಿನ ಸಂಬಂಧದ ಪರಿಕಲ್ಪನೆಯೇ ಬದಲಾಗಿರುವ ಈ ಕಾಲದಲ್ಲಿ ಡೇಟಿಂಗ್ ಎನ್ನುವುದು ಕೇವಲ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಎನ್ನುವ ಮಟ್ಟಿಗೆ ಬಂದು ನಿಂತಿದೆ. ಇದರ ಇನ್ನು ಒಂದು ಮುಂದುವರೆದ ಭಾಗವಾಗಿ ಬಂದಿರೋದೇ ಸ್ಪೀಡ್ ಡೇಟಿಂಗ್.
ಇದನ್ನು ಓದಿ: Tamilnadu: ಸಂಸದರಿಗೆ ಬಸ್ ಟಿಕೆಟ್ ನೀಡಿದ್ದು ಯಾಕೆಂದು ಪ್ರಶ್ನಿಸಿ ಮಹಿಳಾ ಬಸ್ ಚಾಲಕಿ ರಾಜೀನಾಮೆ !
