ಇದೊಂದು ಹೊಸ ವಿಷ್ಯ. ಇದೊಂದು ಹೊಸ ಬಿಸಿನೆಸ್. ಈ ಬಿಸಿನೆಸ್ ಗೆ ನಯಾ ಪೈಸಾ ಹೂಡಿಕೆ ಬೇಕಿಲ್ಲ. ಈ ಬಿಸಿನೆಸ್ ಬಗ್ಗೆ ತಿಳಿದರೆ, ಹೀಗೂ ಉಂಟಾ ಅಂತ ನಿಮಗೆ ಅನ್ನಿಸಬಹುದು. ಹೀಗೂ ಬಿಸಿನೆಸ್ ಮಾಡಬಹುದಾ ಅಂತ ಕೇಳೋ ರೀತಿಯ ಹೊಸ ಬಿಸಿನೆಸ್ ಐಡಿಯಾ ಇದು ಎಂದು ನಿಮಗೆ ಅನ್ನಿಸಬಹುದು. ಏನೂ ಇನ್ವೆಸ್ಟ್ ಮೆಂಟ್ ಇಲ್ಲದೆ ಇರೋ ವಿಚಿತ್ರ ಬಿಸಿನೆಸ್ ಏನು ಅಂತ ನಾವು ಹೇಳ್ತೇವೆ, ಇಲ್ಲಿ ಕೇಳಿ.
ಐ ವೇರ್ ಯುವರ್ ಟೀ ಶರ್ಟ್ ( I Wear Your Shirt) ಕಂಪನಿಯ ಓನರ್ ಬೇರೆ ಯಾರದಾದರೂ ಟಿ ಶರ್ಟ್ ಹಾಕಿಕೊಳ್ಳಬೇಕು. ಹಾಗೆ ಈ ಕಂಪನಿಯ ಓನರ್ ಆ ಶರ್ಟ್ ಹಾಕಿಕೊಂಡು ಅದರ ಫೋಟೋ ಕ್ಲಿಕ್ಕಿಸಿಕೊಂಡು, ನಂತರ ಅದನ್ನು I Wear Your Shirt ವೆಬ್ಸೈಟ್ ನಲ್ಲಿ ಪಬ್ಲಿಷ್ ಮಾಡಲಾಗುತ್ತದೆ. ಅಂದ್ರೆ ಐ ವೇರ್ ಯುವರ್ ಶರ್ಟ್ ವೆಬ್ಸೈಟ್ನ ಮಾಲೀಕನಿಗೆ ನೀವು ಅಥವಾ ಯಾರಾದರೂ ಗ್ರಾಹಕರು ನಮ್ಮ ಟೀಶರ್ಟ್ ಕಳಿಸಿದರೆ ಸಾಕು. ಆ ಕಂಪನಿಯ ಮಾಲೀಕನು ಅದನ್ನು ಹಾಕಿಕೊಂಡು, ಟೀ ಶರ್ಟ್ ಜೊತೆಗಿನ ತನ್ನ ಫೋಟೋ ತೆಗೆದುಕೊಂಡು ನಂತರ ತನ್ನ ವೆಬ್ಸೈಟ್ನಲ್ಲಿ ಪಬ್ಲಿಶ್ ಮಾಡುತ್ತಾನೆ. ಹಾಗೆ ಇನ್ನೊಬ್ಬರ ಟೀ ಶರ್ಟ್ ಹಾಕಿಕೊಂಡ ಸರ್ವೀಸ್ ಗೆ ಯಾರದ್ದು ಟಿ ಶರ್ಟುವೊ ಆತ/ ಆಕೆ ( ಟಿ ಶರ್ಟ್ ಮಾಲೀಕ) ಇಂತಿಷ್ಟು ಅಂತ ದುಡ್ಡು ಕೊಡಬೇಕು. ಇದೇ ಈ ವ್ಯಾಪಾರದ ರೂಲು.
ಇಂತಹ ” ಐ ವೇರ್ ಯುವರ್ ಶರ್ಟ್ ‘ ಎನ್ನುವ ವೆಬ್ ಸೈಟ್ ಅನ್ನು ತೆರೆದು ಈ ವಿಚಿತ್ರ ಬಿಜಿನೆಸ್ ಅನ್ನು ಶುರು ಮಾಡಿದವನ ಹೆಸರು ಜಾಸನ್ ಸಾಡ್ಲಾರ್. ಜಾಕ್ಸನ್ ಈ ಬಿಜಿನೆಸ್ ಸ್ಟಾರ್ಟ್ ಮಾಡಿ ಇದೀಗ ನಾಲ್ಕು ವರ್ಷ ಆಗುತ್ತಿದ್ದು ಆತ ಅದರಿಂದ ಬರೋಬ್ಬರಿ $1,000,000 ಡಾಲರ್ ದುಡಿದಿದ್ದಾನೆ. ಅಂದರೆ ಭಾರತದ ಲೆಕ್ಕದಲ್ಲಿ 8 ಕೋಟಿ 10 ಲಕ್ಷಕ್ಕೂ ಅಧಿಕ ದುಡ್ಡು ಗಳಿಸಿದ್ದಾನೆ ಈ ಕಂಪನಿಯ ಮಾಲೀಕ. ನೀವು ಮಾಡಬೇಕಾದ್ದು ಇಷ್ಟೇ, ನಿಮ್ಮ ಟೀಶರ್ಟ್ ಬಿಚ್ಚಿ ಕಂಪನಿಯ ಓನರ್ ಜಾಸನ್ ಗೆ ಕಳಿಸಿದರೆ ಸಾಕು. ಆತ ಅದನ್ನು ತೊಟ್ಟುಕೊಂಡು ಒಂದು ಫೋಟೋ ತೆಗೆದು ತನ್ನ ವೆಬ್ಸೈಟ್ನಲ್ಲಿ ಹಾಕುತ್ತಾನೆ. ಈ ರೀತಿ ಪ್ರತಿ ಟಿ ಶರ್ಟ್ ಹಾಕಿಕೊಳ್ಳಲು ನೀವು ಅಗತ್ಯ ಫೀ ತೆರಬೇಕು.
ಇಂಥ ಬಿಸಿನೆಸ್ ಮಾಡಿದ್ರೆ ವರ್ಕೌಟ್ ಆಗುತ್ತಾ ಅಂತ ನಿಮಗೆ ಡೌಟ್ ಬರಬಹುದು. ಏನೂ ಡೌಟ್ ಬೇಡ, ಏಕೆಂದರೆ ಇದು ಈಗಾಗಲೇ ಸಕ್ಸಸ್ ಫುಲ್ ಆದ ಬಿಸಿನೆಸ್. 2009 ರಲ್ಲಿ ಶುರುವಾದ ಈ ಬಿಸಿನೆಸ್ 2013 ತನಕ ನಡೆದಿದ್ದು ಅಷ್ಟರೊಳಗೆ ಸಾಕಷ್ಟು ದುಡ್ಡು ಬಾಚಿಕೊಂಡಿತ್ತು. ಅಷ್ಟೇ ಅಲ್ಲ ಹಲವು ಮಾರ್ಕೆಟಿಂಗ್ ಕಂಪನಿಗಳು ತಮ್ಮ ಟೀಶರ್ಟ್ ಅನ್ನು ಜಾಸನ್ ಗೆ ನೀಡಿ ಆ ಮೂಲಕ ಕೂಡ ತಮ್ಮ ಉತ್ಪನ್ನಗಳ ಪ್ರಚಾರ ಮಾಡಿದ್ದವು. ಈಗ, ದುರದೃಷ್ಟವಶಾತ್ ಈ ಬಿಸಿನೆಸ್ ಅಸ್ತಿತ್ವದಲ್ಲಿ ಇಲ್ಲ. ಕಂಪನಿಯ ಓನರ್ ಜಾಸನ್ ಇದೀಗ ಇಂತಹದೇ ಇನ್ನೊಂದು ಹೊಸ ಕ್ರಿಯೇಟಿವ್ ಬಿಸಿನೆಸ್ ಗೆ ಕೈ ಹಾಕಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇನ್ನೊಂದು ಬಾರಿ ನೀಡಲಿದ್ದೇವೆ. ಒಟ್ಟಾರೆಯಾಗಿ ಕ್ರೇಜಿ ಐಡಿಯಾಗಳನ್ನು ಉಪಯೋಗಿಸಿ ಹೇಗೆ ದುಡ್ಡು ಮಾಡಬಹುದು ಎನ್ನುವುದನ್ನು ತೋರಿಸುತ್ತದೆ I Wear Your Shirt ಬ್ಯುಸಿನೆಸ್ ಮಾಡೆಲ್.
