Viral vedio: ಸೋಷಿಯಲ್ ಮೀಡಿಯಾಗಳಲ್ಲಿ(Social media) ದಿನಂಪ್ರತಿ ಕೆಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ತಮಾಷೆಯದ್ದಾದರೆ ಇನ್ನು ಕೆಲವು ಗಂಭೀರ ವಿಚಾರಗಳದ್ದಾಗಿರುತ್ತವೆ. ಇನ್ನು ಕೆಲವು ವಿಡಿಯೋಗಳು ಶಾಕ್(Shock) ಆಗುವಂತೆ ಮಾಡುತ್ತವೆ. ಅಂತೆಯೇ ಮಹಿಳೆಯೊಬ್ಬಳು ಲೈವ್ ಬಂದು ಮಾತನಾಡುತ್ತಿರುವಾಗ ಓರ್ವ ವ್ಯಕ್ತಿ ಆಕೆಯ ಒಳ ಉಡುಪಿನ ಕುರಿತು ಕಾಮೆಂಟ್ (comment) ಮಾಡಿದ್ದಕ್ಕೆ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ (Viral vedio ) ವೈರಲ್ ಆಗ್ತಿದೆ.
ಬಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಯುವತಿ ಒಬ್ಬಳು ಸಾಮಾಜಿಕ ಜಾಲತಾಣ ದ ಲೈವ್(live) ಗೆ ಬಂದು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದಂತಹ ಸಂದರ್ಭದಲ್ಲಿ ಆಕೆ ಟಿ-ಶರ್ಟ್(T Shirt) ಒಳಗೆ ಧರಿಸಿದಂತಹ ಬ್ರಾ ಸ್ಟಾಪ್ ಕಾಣಿಸುತ್ತಿರುತ್ತದೆ. ಅದನ್ನು ಕಂಡಂತಹ ವ್ಯಕ್ತಿಯೊಬ್ಬ ‘ಬ್ರಾ(Bra) ಹಾಕಿದ್ದೀರಾ’? ಎಂದು ಕಮೆಂಟ್ ಮಾಡುತ್ತಾನೆ. ಇದರಿಂದ ರೊಚ್ಚಿಗೆದ್ದ ಯುವತಿ ತಾನು ಬ್ರಾ ಹಾಕಿದ್ದೇನೆಂಬುದನ್ನು ಟೀ ಶರ್ಟ್ ಅನ್ನು ಸರಿಸಿ ತೋರಿಸಿ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಹೌದು, ಇದನ್ನು ಕಂಡು ಕೋಪಗೊಂಡಂತಹ ಯುವತಿ ಹೌದು “ನಾನು ಬ್ರಾ ಹಾಕಿಕೊಂಡಿದ್ದೇನೆ, ಅದಕ್ಕೆನೀಗ? ಎಲ್ಲರೂ ಬ್ರಾ ಹಾಕಿಕೊಳ್ಳುತ್ತಾರೆ. ಪ್ರತಿ ಲೇಡೀಸ್ (ladies) ಕೂಡ ಬ್ರಾ ದರಿಸುತ್ತಾರೆ ನಿನಗೆ ಅದು ಗೊತ್ತಿಲ್ವಾ? ನಾನು ಇಲ್ಲಿ ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ. ನಿನ್ನ ಗಮನ ಹಾಗೂ ನಿನ್ನ ಬುದ್ಧಿ ಯಾವ ಕಡೆ ಇದೆ? ಹೋಗಿ ನಿನ್ನ ಅಕ್ಕ ತಂಗಿಯರ ಬಳಿಯೂ ಈ ರೀತಿ ಕೇಳು ಅವರು ಯಾವ ಉತ್ತರ ಕೊಡುತ್ತಾರೆ ನೋಡೋಣ” ಎಂದು ಲೈವ್ನಲ್ಲಿ ಸರಿಯಾದ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಅಂದಹಾಗೆ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದನ್ನು ಹಲವರು ಶೇರ್ ಮಾಡಿ ಯುವತಿ ಸರಿಯಾಗಿ ಮಾಡಿದ್ದಾಳೆ, ಇಂತಹ ಅವಿವೇಕಿಗಳಿಗೆ ಹೀಗೆ ಉತ್ತರಿಸಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಈ ಒಂದು ವಿಡಿಯೋವನ್ನು ಸಾಕಷ್ಟು ಪೇಜ್ ಗಳು ರಿಪೋಸ್ಟ್ repost ಮಾಡುವ ಮುಖಾಂತರ ಅರಿವು ಮೂಡಿಸಿದ್ದಾರೆ.
https://www.instagram.com/reel/CsIcqmjNGy6/?igshid=MTc4MmM1YmI2Ng==
ಇದನ್ನು ಓದಿ: Daily horoscope: ಮಿತ್ರರೊಂದಿಗೆ ಸಾಮರಸ್ಯದಿಂದ ಇರುವಿರಿ, ಆಸ್ತಿ ವಿವಾದ ಬಗೆಹರಿಯುತ್ತೆ ಈ ರಾಶಿಯವರಿಗೆ!
