Home » Big Boss Lip Lock: ಬಿಗ್ ಬಾಸ್ ಮನೆಯಲ್ಲಿ ಅರ್ಧ ನಿಮಿಷ ಚೀಪಿ ಕಚ್ಚಿ ಲಿಪ್ ಕಿಸ್ ಆಕಾಂಕ್ಷಾ – ಜದ್ ! ಜಡ್ಜ್ಸ್ ನಿಲ್ಸಿ ಅಂದ್ರೂ ಬಿಟ್ಟಿಲ್ಲ !

Big Boss Lip Lock: ಬಿಗ್ ಬಾಸ್ ಮನೆಯಲ್ಲಿ ಅರ್ಧ ನಿಮಿಷ ಚೀಪಿ ಕಚ್ಚಿ ಲಿಪ್ ಕಿಸ್ ಆಕಾಂಕ್ಷಾ – ಜದ್ ! ಜಡ್ಜ್ಸ್ ನಿಲ್ಸಿ ಅಂದ್ರೂ ಬಿಟ್ಟಿಲ್ಲ !

0 comments

Bigg Boss OTT 2: ‘ಬಿಗ್ ಬಾಸ್’ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರುವ ರಿಯಾಲಿಟಿ ಶೋ. ಮಲಯಾಳಂ, ಕನ್ನಡ, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಈಗಾಗಲೇ ‘ಹಿಂದಿ ಬಿಗ್ ಬಾಸ್ ಒಟಿಟಿ 2’ (Bigg Boss OTT 2) ಆರಂಭ ಆಗಿದೆ. ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಜಗಳಗಳು, ಕಿತ್ತಾಟಗಳು, ಲವ್ ಕಹಾನಿಗಳು ಕಾಮನ್. ಆದರೆ, ಪ್ರೇಕ್ಷಕರಿಗೆ ಶಾಕಿಂಗ್ ಅನ್ನಿಸೋ ರೀತಿಯಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ವರ್ತಿಸಿದ್ದಾರೆ.

ಈ ಹಿಂದೆ ಜದ್ ಹದೀದ್ ಆಕಾಂಕ್ಷಾ ಅವರ ಖಾಸಗಿ ಭಾಗವನ್ನು ಮುಟ್ಟಿದ ವಿಡಿಯೋ ಸಖತ್ ವೈರಲ್ ಆಗಿ, ಪ್ರೇಕ್ಷಕರು ಕುಪಿತಗೊಂಡಿದ್ದರು. ಈ ಬೆನ್ನಲ್ಲೇ ಇದೀಗ ಇವರಿಬ್ಬರು ಲಿಪ್ ಲಾಕ್ ಮಾಡಿರುವ ವಿಚಾರ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿದೆ. ಅವಿನಾಶ್ ಸಚ್​​ದೇವ್ ಅವರು ‘ಜದ್​​ಗೆ ಆಕಾಂಕ್ಷಾ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಹಾಗಾಗಿ ಇಬ್ಬರೂ ಲಿಪ್ ಲಾಕ್ (bigboss liplock) ಮಾಡಿಕೊಂಡಿದ್ದಾರೆ.

ಆಕಾಂಕ್ಷಾ ಪುರಿ ಹಾಗೂ ಜದ್ ಹದೀದ್ ಅವರು ಲಿಪ್ ಲಾಕ್ ಮಾಡುತ್ತಿದ್ದರೆ ಮನೆಮಂದಿ 30 ನಿಮಿಷವನ್ನು ಕೌಂಟ್ ಮಾಡುತ್ತಿದ್ದಾರೆ. ಆದರೆ, 30 ನಿಮಿಷ ಕಳೆದರೂ ಇವರಿಬ್ಬರೂ ಲಿಪ್ ಕಿಸ್ ಮಾಡೋದನ್ನ ಮುಂದುವರೆಸಿದ್ದಾರೆ. ಇವರು ಲಿಪ್ ಲಾಕ್ ವೇಳೆ ಪೂಜಾ ಭಟ್ ಇರಿಸು ಮುರುಸುಗೊಂಡರೆ, ಉಳಿದವರೆಲ್ಲರೂ ಇದನ್ನು ಎಂಜಾಯ್ ಮಾಡುತ್ತಿದ್ದರು. ಸದ್ಯ ವಿಡಿಯೋ ನೋಡಿದ ನೆಟ್ಟಿಗರು ಟೀಕೆ ಮಾಡಿದ್ದಾರೆ. ‘ಇದೇನಾ ಸಭ್ಯತೆ’ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಜದ್ ಹದೀದ್ ಅವರ ವರ್ತನೆ ಬಗ್ಗೆ ಸೋಷಿಯಲ್ಸ್ ಕಿಡಿಕಾರಿದ್ದರು. ಮನೆಯಲ್ಲಿ ಜದ್ ಹಾಗೂ ಆಕಾಂಕ್ಷಾ ಮಧ್ಯೆ ಯಾವುದೋ ವಿಚಾರಕ್ಕೆ ಮಾತುಕತೆ ನಡೆಯುತ್ತಾ ಇತ್ತು. ಈ ವೇಳೆ ಆಕಾಂಕ್ಷಾ ಅವರನ್ನು ಜದ್ ಎಳೆದುಕೊಂಡಿದ್ದು, ಜದ್ ಅವರ ಕೈ ಎಲ್ಲೆ ಮೀರಿ ಆಕಾಂಕ್ಷಾಳ ಖಾಸಗಿ ಭಾಗಗಳನ್ನು ಟಚ್ ಮಾಡಿದ್ದರು. ಈ ವೇಳೆ ಆಕಾಂಕ್ಷ ‘ಆ ರೀತಿ ಮಾಡಬೇಡಿ. ನನಗೆ ಯಾರಾದರೂ ಮುಟ್ಟಿದರೆ ಆಗುವುದಿಲ್ಲ’ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿ ಜದ್ ಮೇಲೆ ಸೋಷಿಯಲ್ಸ್ ಕಿಡಿಕಾರಿದ್ದರು. ಇದೀಗ ಇವರಿಬ್ಬರ ಲಿಪ್ ಲಾಕ್ ವಿಡಿಯೋ ವೈರಲ್ ಆಗಿ ನೆಟ್ಟಿಗರು ಇನ್ನಷ್ಟು ಕುಪಿತಗೊಂಡಿದ್ದಾರೆ.

ಅನೇಕರು ಬಿಗ್ ಬಾಸ್ ಶೋ ವಿರುದ್ಧ ಕೋಪಗೊಂಡಿದ್ದಾರೆ. ಶೋ ಆರಂಭಕ್ಕೂ ಮೊದಲು ಮಾತನಾಡಿದ್ದ ಸಲ್ಮಾನ್ ಖಾನ್ ಯಾವುದೂ ಮಿತಿ ಮೀರದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪ್ರೇಕ್ಷಕರನ್ನು ಸೆಳೆಯಲು ಈ ರೀತಿಯ ತಂತ್ರ ಮಾಡಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ವಿವಾದ ಒಂದಲ್ಲಾ ಒಂದು ರೀತಿಯಲ್ಲಿ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ನಾನಾ ರೀತಿಯ ವ್ಯಕ್ತಿತ್ವ ಹೊಂದಿರುವ
ಮಂದಿ ಒಂದೇ ಮನೆಯಲ್ಲಿ ಅಡ್ಜೆಸ್ಟ್ ಆಗಲು ಶತ ಪ್ರಯತ್ನ ಮಾಡಿದರೂ ತಾಳ್ಮೆ ಕೆಡದೆ ಇರಲು ಸಾಧ್ಯವೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ವಿವಿಧ-ವಿಭಿನ್ನ ನಡವಳಿಕೆಯ ಜನರು ಮನೆಯಲ್ಲಿ ಇದ್ದಾರೆ. ಆದರೆ, ನಡವಳಿಕೆ ಮಿತಿ ಮೀರಿದರೆ ಪ್ರೇಕ್ಷಕರಿಗೂ ಇರಿಸುಮುರಿಸು ಉಂಟಾಗುವುದು ಸುಳ್ಳಲ್ಲ.

 

You may also like

Leave a Comment