Home » Anna Bhagya guarantee: ಪಡಿತರದಾರರಿಗೆ ಸಿಹಿ ಸುದ್ದಿ : ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ ರಾಗಿ, ಜೋಳ ಕೂಡಾ ಫ್ರೀ !!

Anna Bhagya guarantee: ಪಡಿತರದಾರರಿಗೆ ಸಿಹಿ ಸುದ್ದಿ : ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ ರಾಗಿ, ಜೋಳ ಕೂಡಾ ಫ್ರೀ !!

0 comments

Anna Bhagya guarantee: ರೇಷನ್ ಕಾರ್ಡ್ (Ration Card) ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಮಹತ್ವದ ಮಾಹಿತಿ (Ration Card Updates) ಇಲ್ಲಿದೆ. ಇನ್ನು ಮುಂದೆ ಬಿಪಿಎಲ್ ಸದಸ್ಯರಿಗೆ ಅಕ್ಕಿ ಜೊತೆ ರಾಗಿ, ಜೋಳ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಕನಿಷ್ಠ ಬೆಂಬಲ ಬೆಲೆ ಯಡಿ ಅಕ್ಕಿ ಜೊತೆ ರಾಗಿ ಅಥವಾ ಜೋಳವನ್ನೂ ಸೇರಿಸಿ ಕೊಡಲು ಮುಖ್ಯಮಂತ್ರಿಗಳು( CM Siddaramaiah)ಸಲಹೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮುಂದೆ 8 ಕೆಜಿ ಅಕ್ಕಿಯ ಜೊತೆಗೆ ಎರಡು ಕೆಜಿ ರಾಗಿ ಅಥವಾ ಜೋಳ ನೀಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ (k h Muniyappa) ತಿಳಿಸಿದ್ದಾರೆ.

ಇಂದಿನಿಂದ ಅನ್ನಭಾಗ್ಯ (Anna Bhagya guarantee) ಗ್ಯಾರಂಟಿ ಯೋಜನೆ ಅಧಿಕೃತವಾಗಿ ಜಾರಿ ಆಗಲಿದೆ. ಬಿಪಿಎಲ್ ಕುಟುಂಬದ ಒಬ್ಬೊಬ್ಬರಿಗೂ ತಲಾ 5 ಕೆ.ಜಿ ಅಕ್ಕಿ ಹಾಗೂ ಬಾಕಿ 5 ಕೆ.ಜಿ ಅಕ್ಕಿ ಬದಲು ₹170 ಅನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಶನಿವಾರದಿಂದಲೇ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಹಣ ನೀಡಲಾಗುತ್ತದೆ. ಎಂದು ಕೆ ಎಚ್ ಮುನಿಯಪ್ಪ ಮಾಹಿತಿ ನೀಡಿದರು.

ನಗರದಲ್ಲಿ ಮಾತನಾಡಿದ ಸಚಿವ ಮುನಿಯಪ್ಪ, “ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪಡಿತರರ ಅಕೌಂಟ್ ಗೆ ಹಣ ರವಾನೆಯಾಗುತ್ತದೆ. ಶೇ. 90 ಅಕೌಂಟ್ ಇರುವ ಬಗ್ಗೆ ಮಾಹಿತಿ ಇದೆ. ಒಬ್ಬರಿಗೆ ಪ್ರತಿ ಕೆಜಿಗೆ 34 ರೂ ನಂತೆ 170 ರೂಪಾಯಿ ಕೊಡುತ್ತೇವೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆಯಾಗಲಿದೆ. ಬಳಿಕ ಅಕ್ಕಿ ಕೊಡುತ್ತೇವೆ. ಸಿಎಂ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡಲು ನಿರ್ಧರಿಸಿದ್ದೇವೆ. ಸದ್ಯ ರಾಗಿ ದಾಸ್ತಾನು ಇದ್ದು, ಜೋಳದ ದಾಸ್ತಾನು ಇಲ್ಲ. ಜೋಳ ದಾಸ್ತಾನು ಮಾಡಿದ ನಂತರ ರಾಗಿ, ಜೋಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ವಿವರಿಸಿದರು.

 

ಇದನ್ನು ಓದಿ: Alcohol in Metro: ಮೆಟ್ರೋದಲ್ಲಿ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ, ಕಂಡೀಷನ್ಸ್ ಅಪ್ಲೈ! 

You may also like

Leave a Comment