Home » Krithi shetty: ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಮಗನಿಂದ ಕಿರುಕುಳ.. !! ತೆಲುಗು ಇಂಡಸ್ಟ್ರಿಯಲ್ಲಿ ಏನಿದು ಹೊಸ ಸಮಾಚಾರ..?

Krithi shetty: ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಮಗನಿಂದ ಕಿರುಕುಳ.. !! ತೆಲುಗು ಇಂಡಸ್ಟ್ರಿಯಲ್ಲಿ ಏನಿದು ಹೊಸ ಸಮಾಚಾರ..?

by ಹೊಸಕನ್ನಡ
0 comments
Krithi shetty

Krithi shetty: ಉಪ್ಪೇನ(Uppena) ಚಿತ್ರದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಟ್ಟ ಕನ್ನಡದ ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ(Krithi shetty) ಸಿನಿಮಾದ ಯಶಸ್ಸಿನಿಂದಾಗಿ ಸಾಲು ಸಾಲು ಆಫರ್ ಗಳು ಬರುತ್ತಿವೆ. ಆಗಾಗ ಟ್ರೆಡೀಷನಲ್(Traditional) ಆಗಿ, ಮಾರ್ಡನ್(Modern) ಆಗಿ ಫೋಟೋ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವ ಈ ಚೆಲುವೆ ಪಡ್ಡೆ ಹುಡುಗರ ನಿದ್ದೆಗೆಡಿಸಿಬಿಟ್ಟಿದ್ದಾರೆ. ಆದರೆ ಈ ನಡುವೆ ಕೃತಿ ಅವರಿಗೆ ಸ್ಟಾರ್ ನಟನ ಮಗನೊಬ್ಬನಿಂದ ಕಿರುಕುಳ ಉಂಟಾಗುತ್ತಿದೆ ಎಂಬ ಸುದ್ಧಿಯೊಂದು ಹರಿದಾಡುತ್ತಿದೆ.

ಉಪ್ಪೇನ ಚಿತ್ರದ ಮೂಲಕ ಸ್ಟಾರ್ ನಟಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡ ಕನರ್ನಾಟಕದ ಕರಾವಳಿ ಚೆಲುವೆ ಕೃತಿ ಶೆಟ್ಟಿ ಹೀರೋಯಿನ್ ಸಾಲು ಸಾಲು ಚಿತ್ರಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡರೂ ಕೂಡ ಇತ್ತೀಚೆಗಿನ ಅವರ ಎಲ್ಲಾ ಸಿನಿಮಾಗಳು ಫ್ಲಾಪ್(Falp) ಆಗುತ್ತಿವೆ. ತೆಲುಗಿನಲ್ಲಿ ನಾಗ ಚೈತನ್ಯ ಅಭಿನಯದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ನಿರೀಕ್ಷಿತ ರೇಂಜ್ ನಲ್ಲಿ ಹಿಟ್ ಆಗಲಿಲ್ಲ. ಆದರೆ ಈ ನಡುವೆ ಕೃತಿ ಅವರಿಗೆ ಸ್ಟಾರ್ ಹೀರೋ(Star hero) ಪುತ್ರನೊಬ್ಬ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಆ ಸ್ಟಾರ್ ನಟನ ಮಗನೊಬ್ಬ ಕೃತಿ ಶೆಟ್ಟಿ ಜೊತೆ ಸ್ನೇಹ ಬೆಳೆಸಲು ಅವರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ ಕೃತಿಗೆ ಅದು ಇಷ್ಟವಿಲ್ಲ. ಆತ ತನ್ನ ಹುಟ್ಟುಹಬ್ಬದ(Birthday) ಸಂದರ್ಭದಲ್ಲಿ ಕೃತಿ ಶೆಟ್ಟಿ ಬರ್ತ್‌ಡೇ ಪಾರ್ಟಿಗೆ ಬರುವಂತೆ ಕರೆ ಮಾಡಿ ಅಹ್ವಾನ ನೀಡಿದ್ದರು. ಆದರೆ ಕೃತಿ ಅದನ್ನೈ ನಯವಾಗಿ ನಿರಾಕರಿಸಿದರು. ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿಯಲ್ಲಿ ಎಷ್ಟೊಂದು ಸತ್ಯಾಂಶವಿದೆ ಎಂದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಆ ಯಾವ ನಟನ ಪುತ್ರ ಹೀಗೆ ಮೃಡುತ್ತಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.

ಅಂದಹಾಗೆ ಉಪ್ಪೇನ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಕೃತಿ ಶೆಟ್ಟಿ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಆದರೆ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್(Box Office) ನಲ್ಲಿ ಸೋಲುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಈ ನಟಿ. ಅಲ್ಲದೆ ಇತ್ತೀಚೆಗೆ ಕೃತಿ ಮುಖದಲ್ಲಿ ಕೆಲವು ಬದಲಾವಣೆಗಳಾಗಿದ್ದು, ಅವರು ಪ್ಲಾಸ್ಟಿಕ್ ಸರ್ಜರಿ(Plastic surgery)ಮಾಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ.

ಇದನ್ನೂ ಓದಿ: UP bus conductor: ಬಸ್ಸಿನ ಹಿಂದಿನ ಸೀಟಿನಲ್ಲಿ ಕರಿಕಂಬಳಿ ಹೊದ್ದು ಹುಡುಗಿಯ ಜತೆ ಲೈಂಗಿಕ ಕ್ರಿಯೆ ನಡೆಸಿದ ಬಸ್ ಕಂಡಕ್ಟರ್

You may also like

Leave a Comment