Home » Terrorists: ವಿದ್ವಂಸಕ ಕೃತ್ಯಕ್ಕೆ ರೋಬೋಟ್ ಬಳಕೆ: ಕರಾಳ ಸತ್ಯ ಹೊರಕ್ಕೆ !

Terrorists: ವಿದ್ವಂಸಕ ಕೃತ್ಯಕ್ಕೆ ರೋಬೋಟ್ ಬಳಕೆ: ಕರಾಳ ಸತ್ಯ ಹೊರಕ್ಕೆ !

0 comments
Terrorists

Terrorists: ಈಗಾಗಲೇ ನಡೆದಿರುವ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ NIA ಅಧಿಕಾರಿಗಳಿಗೆ, ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿದ್ವಂಸಕ ಕೃತ್ಯ ನಡೆಸಲು ಐಸಿಸ್ ಸಂಚು ರೂಪಿಸಿತ್ತು ಎಂಬ ಸ್ಪೋಟಕ ಮಾಹಿತಿ ಚಾರ್ಜ್ ಶೀಟ್ ನಿಂದ ತಿಳಿದು ಬಂದಿದೆ.

ಈ ಹಿನ್ನೆಲೆ ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (Electronic Engineering ) ವಿದ್ಯಾರ್ಥಿಗಳಾಗಿರುವ ಬಂಧಿತ ಶಂಕಿತ ಉಗ್ರರಾಗಿರುವ (Terrorists) ಮೊಹಮ್ಮದ್ ಶಾರಿಕ್ (25), ಮಾಜ್ ಮುನೀರ್ ಅಹ್ಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹ್ಮದ್ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಇವರುಗಳು ತೀವ್ರ ವಿಚಾರಣೆ ವೇಳೆ ಈ ಸತ್ಯ ಬಾಯಿಬಿಟ್ಟಿದ್ದು, 9 ಜನರ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಮಾಹಿತಿ ಪ್ರಕಾರ, ಐಸಿಸ್(ISIS Terrorists) ಹ್ಯಾಂಡ್ಲರ್ ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಿದ್ದರು. ಈ ಮೂಲಕ ಭವಿಷ್ಯದ ಭಯೋತ್ಪಾದಕ ಚಟುವಟಿಕೆಗಳಿಗೆ ತಯಾರಾಗುವಂತೆ ತಿಳಿಸಿದ್ದರು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಮೂಲಕ ವಿದೇಶದಲ್ಲಿರುವ ಐಸಿಸ್ ಭಯೋತ್ಪಾದಕ ರೊಂದಿಗೆ‌ ನೇರ ಸಂಪರ್ಕದಲ್ಲಿದ್ದ ಶಂಕಿತರು ಇದ್ದರು ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಗಳೆಲ್ಲರೂ ಕರ್ನಾಟಕಕ್ಕೆ ಸೇರಿದವರಾಗಿದ್ದು, ಇವರು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಪಿತೂರಿಯ ಭಾಗವಾಗಿ ಜನರಲ್ಲಿ ಭಯವನ್ನು ಹರಡಲು, ಮತ್ತು ಆಸ್ತಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಶಿವಮೊಗ್ಗದಲ್ಲಿ ಐಇಡಿ ಸ್ಫೋಟವನ್ನು ನಡೆಸಿದ್ದರು.

ಈ ಹಿನ್ನೆಲೆ ಇವರ ವಿರುದ್ಧ ಯುಎ(ಪಿ) ಆಕ್ಟ್ 1967, ಐಪಿಸಿ ಮತ್ತು ಕೆಎಸ್ ಪ್ರಿವೆನ್ಶನ್ ಆಫ್ ಡಿಸ್ಟ್ರಕ್ಷನ್ ಅಂಡ್ ಲಾಸ್ ಆಫ್ ಪ್ರಾಪರ್ಟಿ ಆಕ್ಟ್, 1981 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅದಲ್ಲದೆ ರೊಬೊಟಿಕ್ಸ್ ಕೋರ್ಸ್‌ಗಳನ್ನು ಮುಂದುವರಿಸಲು, ಭವಿಷ್ಯದಲ್ಲಿ ಭಾರತಕ್ಕಾಗಿ ಐಎಸ್ ಅಜೆಂಡಾವನ್ನು ಮುಂದುವರಿಸಲು ಭಯೋತ್ಪಾದಕ ದಾಳಿಗಳನ್ನು ನಡೆಸುವ ಕೌಶಲ್ಯಗಳನ್ನು ತೆಗೆದುಕೊಳ್ಳಲು ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ನಿಂದ ಅವರಿಗೆ ವಹಿಸಲಾಗಿತ್ತು.

ಇನ್ನು ಆನ್‌ಲೈನ್ ಹ್ಯಾಂಡ್ಲರ್ ಕ್ರಿಪ್ಟೋ ಕರೆನ್ಸಿಗಳ ಮೂಲಕ ಆರೋಪಿಗಳಿಗೆ ಹಣವನ್ನು ನೀಡಿದ್ದರು ಎಂದು ಎನ್‌ಐಎ ತನಿಖೆ (RC-46/2022/NIA/DLI) ಪ್ರಕರಣದಲ್ಲಿ ತಿಳಿದಿದೆ.

ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ಅವರು ವಿದ್ವಂಸಕ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಎಸ್ ನಿರ್ದೇಶನದ ಮೇರೆಗೆ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಕೊಟ್ಟ ಕೊಟ್ಟ ಗುಡುವು ಅಂತ್ಯ, ತನಿಖಾ ಸಂಸ್ಥೆಯ ಮುಂದಿನ ನಡೆ ಏನು?

You may also like

Leave a Comment