Home » Corona: ಕೊರೋನಾ ಎಫೆಕ್ಟ್ ಈಗ ಮಕ್ಕಳಲ್ಲಿ ಪ್ರತ್ಯಕ್ಷ ! ಶಾಕಿಂಗ್ ಶಾಕಿಂಗ್ !

Corona: ಕೊರೋನಾ ಎಫೆಕ್ಟ್ ಈಗ ಮಕ್ಕಳಲ್ಲಿ ಪ್ರತ್ಯಕ್ಷ ! ಶಾಕಿಂಗ್ ಶಾಕಿಂಗ್ !

0 comments

Corona : ಕಳೆದ ವರ್ಷಗಳಲ್ಲಿ ಕೊರೊನಾದಿಂದಾಗಿ (Corona) ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಕೊರೋನಾ ಮಹಾಮಾರಿಯಿಂದ ದೇಶದ ಜನತೆ ಬೆಚ್ಚಿಬಿದ್ದಿದ್ದು, ಕೊರೋನಾ ಸೊಂಕಿನಿಂದ ಬಚಾವಾಗಲು ವ್ಯಾಕ್ಸಿನ್ ಪಡೆದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೀಗ ಕೊರೋನಾವೇನೋ ಹೊರಟು ಹೋಗಿದೆ. ಆದರೆ ಕೊರೋನಾ ಎಫೆಕ್ಟ್ ಈಗ ಮಕ್ಕಳಲ್ಲಿ ಪ್ರತ್ಯಕ್ಷವಾಗಿದೆ.

ಹೌದು, ಕೊರೋನಾ ಬಳಿಕ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳು (School Students) ಅಪೌಷ್ಠಿಕತೆಯಿಂದ (Malnutrition) ಬಳಲುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಾಕಿಂಗ್ ರಿಪೋರ್ಟ್ ನೀಡಿದೆ. ಪುಟಾಣಿ ಮಕ್ಕಳು, 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. ಈ ವಿಚಾರ ಪೋಷಕರು ಸೇರಿದಂತೆ ಎಲ್ಲೆಡೆ ಭೀತಿ ಹುಟ್ಟಿಸಿದೆ.

ಅಪೌಷ್ಠಿಕತೆಯಿಂದಾಗಿ ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ಕಡಿಮೆ ತೂಕ, ರಕ್ತಹೀನತೆ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುತ್ತಿವೆ. ಅಲ್ಲದೆ, ಸಾಕಷ್ಟು ಮಕ್ಕಳು ಸಾವನ್ನಪ್ಪಿರುವುದು ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ 8,711 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದಿದ್ದು, 2,23,221 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

 

ಇದನ್ನು ಓದಿ: LPG Cylinder: ಗ್ಯಾಸ್ ಸಿಲಿಂಡರ್ ಕಸ್ಟಮ್ ಸುಂಕ 200 % ಏರಿಕೆ; ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ! 

You may also like

Leave a Comment