Home » HD Kumaraswamy: ಸಮ್ಮಿಶ್ರ ಸರ್ಕಾರದಲ್ಲಿ ಡಮ್ಮಿ ಆಗಿದ್ರಾ ಕುಮಾರಣ್ಣ?! ಮಾಜಿ ಸಿಎಂ ಕುಮಾರಸ್ವಾಮಿಯಿಂದ ಬಿಗ್ ಹೇಳಿಕೆ !

HD Kumaraswamy: ಸಮ್ಮಿಶ್ರ ಸರ್ಕಾರದಲ್ಲಿ ಡಮ್ಮಿ ಆಗಿದ್ರಾ ಕುಮಾರಣ್ಣ?! ಮಾಜಿ ಸಿಎಂ ಕುಮಾರಸ್ವಾಮಿಯಿಂದ ಬಿಗ್ ಹೇಳಿಕೆ !

0 comments
HD Kumaraswamy

HD Kumaraswamy: ಮಾಜಿ ಸಿಎಂ (HD. Kumaraswamy) ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಆರಂಭಿಸಿದ್ದು, ಸಿದ್ದರಾಮಯ್ಯ ಅವರು ನೆನಪು ಮಾಡಿಕೊಳ್ಳಬೇಕಿದ್ದು, ನಾನು ಸಿಎಂ ಆಗಿದ್ದಾಗ ನಿಮ್ಮ ಮಂತ್ರಿಗಳು ನನ್ನನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಅನ್ನೋದನ್ನ ಒಮ್ಮೆ ನೆನಪು ಮಾಡಿಕೊಳ್ಳಬೇಕು. ಮುಖ್ಯವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ ಎಂದು ನೇರವಾಗಿ ಹೇಳಿದ್ದಾರೆ

ಹೌದು, ಸಿ ಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ಎಂದು ಆರೋಪ ಮಾಡಿದ್ದ ಕುಮಾರಸ್ವಾಮಿಗೆ ತಮ್ಮ ಅವಧಿಯಲ್ಲಿ ಆಗಿದ್ದನ್ನೇ ಈಗ ಹೇಳಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಿಮ್ಮ ಪಕ್ಷ ಸಚಿವರು ದಬ್ಬಾಳಿಕೆ ಇಲಾಖೆ ಇಟ್ಟುಕೊಂಡಿದ್ರು ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್ ಪಕ್ಷದವರು ಹೇಳಿದಂತೆ ನಾನು ವರ್ಗಾವಣೆ ಮಾಡಬೇಕಿತ್ತು. ಜನರ ಕೆಲಸ ಮಾಡಲಿಕ್ಕೆ ಇಟ್ಟುಕೊಂಡಿಲ್ಲ, ಕೇವಲ ಅವರ ಅವಶ್ಯಕತೆ ಈಡೇರಿಕೆಗಾಗಿ, ತೋರ್ಪಡಿಕೆಯ ಆಳ್ವಿಕೆ ನನ್ನದಾಗಿತ್ತು ಎಂದು ಪರೋಕ್ಷವಾಗಿ ಕುಮಾರಣ್ಣ ಹೇಳಿದ್ದಾರೆ.

ಇನ್ನು ಅನ್ನಭಾಗ್ಯ ಯೋಜನೆಗೆ ಹಣ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಈ ಸರ್ಕಾರದಲ್ಲಿ ಎಷ್ಟೋ ಜನ ಸಿಎಂ ಇದ್ದಾರೆ ಸಿದ್ದರಾಮಯ್ಯ ಒಬ್ಬರೇ ಈ ಸರ್ಕಾರದ ಸಿಎಂ ಅಲ್ಲ. ಹಲವಾರು ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಅವರು 15 ದಿನಗಳಲ್ಲಿ ಹಣ ಕೊಡ್ತೀನಿ ಎಂದಿದ್ದರು ಆದ್ರೆ ಸಚಿವ ಸತೀಶ್ ಜಾರಕಿಹೊಳಿ ಆಗಸ್ಟ್ ಅಂತ ಹೇಳಿದ್ದಾರೆ. ಯಾರ ಮಾತು ನಂಬಬೇಕು ಈ ಸರ್ಕಾರದಲ್ಲಿ ಎಷ್ಟು ಜನ ಸಿಎಂ ಇದ್ದಾರೆ? ಇವರ ಹೈಕಮಾಂಡ್ ಯಾರ್ಯಾರಿಗೆ ಮಾತನಾಡುವ ಅಧಿಕಾರ ಕೊಟ್ಟಿದೆ ಎಂದು ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

 

ಇದನ್ನು ಓದಿ: Suicide: ‘ಲವ್ ಮಾಡು ಮಗನೇ ‘ ಅಂದ್ಲಾ ಶಿಕ್ಷಕಿ ಅಮ್ಮ?; ಸಾವಿಗೆ ಶರಣು ಬಿದ್ದ ಸಾರಾ ! 

You may also like

Leave a Comment