Suicide: ಹದಿಹರೆಯದ ಮಕ್ಕಳಲ್ಲಿ ನಾವು ಏನನ್ನು ಹೇಳಿಕೊಡುತ್ತೇವೆ, ಹೇಗೆ ನಡೆಸಿಕೊಳ್ಳುತ್ತೇವೆ ಅನ್ನೋದು ಕೆಲವೊಮ್ಮೆ ಬಹುದೊಡ್ಡ ಪ್ರಶ್ನೆಗೆ ಗುರಿ ಮಾಡುತ್ತವೆ. ಅಂತೆಯೇ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ಆಕೆಯ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಹೇಳಲಾಗುತ್ತಿದೆ.
ಹೌದು, ಹೊಸಕೋಟೆ ನಗರದ ಪಾರ್ವತಿಪುರ ನಿವಾಸಿ ಸಾರಾ (16) ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಈಕೆಗೆ ಅದೇ ಶಾಲೆಯ ಶಿಕ್ಷಕಿಯೊಬ್ಬರ ಮಗ ಪ್ರೀತಿಸುವಂತೆ ಪೀಡಿಸಿದ ಕಾರಣ, ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ತಮ್ಮ ಮಗಳ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.
ಮಗಳು ಆತ್ಮಹತ್ಯೆ ಮಾಡಿಕೊಂಡ ಒಂದು ವಾರದ ನಂತರ ಶಿಕ್ಷಕಿ ವಿರುದ್ಧ ಹೊಸಕೋಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಗಳ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಆರೋಪಿಸಲಾಗಿದೆ. ಆತ ಪ್ರಪೋಸ್ ಮಾಡಿದ್ದನ್ನು ನಿರಾಕರಿಸಿದ್ದಕ್ಕೆ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಸಾರಾ ಆತ್ಮಹತ್ಯೆ ಬಳಿಕ ತಮ್ಮ ಪುತ್ರನ ವಿಚಾರ ಎಲ್ಲೂ ಹೇಳಬಾರದು ಎಂದು ಶಿಕ್ಷಕಿ ಶಾಲಾ ಮಕ್ಕಳಿಗೆ ತಾಕೀತು ಮಾಡಿದ್ದರು ಎಂದೂ ಹೇಳಲಾಗುತ್ತಿದೆ.
ಆದರೆ, ಸಾರಾ ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ಬಳಿಕ ಸಹಪಾಠಿಗಳು ಆಕೆಯ ಪಾಲಕರಿಗೆ ಈ ವಿಷಯವನ್ನೆಲ್ಲ ತಿಳಿಸಿದ್ದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಮೇರೆಗೆ ಹೊಸಕೋಟೆ ಪೊಲೀಸರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಮಗಳ ಸಾವಿಗೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಾಲಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದು, ಇನ್ನಷ್ಟೇ ಈ ಬಗೆಗಿನ ಹೆಚ್ಚಿನ ತನಿಖೆ ನಡೆಯಬೇಕಿದೆ.
ಇದನ್ನು ಓದಿ: Nicotine: ಆಗ ತಾನೇ ಹುಟ್ಟಿದ ಮಗುವಿನ ದೇಹದಲ್ಲಿ ಸಿಕ್ತು 60 ಮಿ.ಲೀ. ನಿಕೋಟಿನ್ ! ಅದು ಹೇಗೆ ಬಂತು ಅನ್ನೋದೇ ಸಸ್ಪೆನ್ಸ್ ?
