Intresting news: ಕೆಲವೊಮ್ಮೆ ಅಂದುಕೊಳ್ಳುವುದು ಒಂದು ಆಗುವುದು ಇನ್ನೇನೋ ಏಕೆಂದರೆ ನಾವು ಅಂದುಕೊಂಡ ಹಾಗೆ ಎಲ್ಲವೂ ನಡೆಯಲು ಸಾಧ್ಯವಿಲ್ಲ ಎಂಬುದನ್ನು ಜೀವನ ನಮಗೆ ಕಲಿಸುತ್ತದೆ. ದಿನಂಪ್ರತಿ ಅನೇಕ ಘಟನೆಗಳು ನಡೆದರೂ ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳುತ್ತದೆ.ಛತ್ತೀಸ್‌ಗಢದ ಸೂರಜ್‌ಪುರ ಎಂಬಲ್ಲಿ ಹರಕೆ ತೀರಿಸುವ ಸಲುವಾಗಿ ಬಲಿಕೊಟ್ಟ ಮೇಕೆ ಯಿಂದಲೆ ವ್ಯಕ್ತಿಯೊಬ್ಬ ಸಾವಿನ ದವಡೆಗೆ ಸಿಲುಕಿದ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಬಗರ್ ಸಾಯಿ (50) ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ನಾವು ಏನಾದರು ಪ್ರಾರ್ಥನೆ ಮಾಡಿ ಅಂದುಕೊಂಡದ್ದು ಆದಾಗ ಹರಕೆ ತೀರಿಸುವುದು ಸಹಜ. ಅದೇ ರೀತಿ, ಬಗರ್ ಸಾಯಿ ಅವರ ಇಷ್ಟಾರ್ಥ ಈಡೇರಿದ ಹಿನ್ನೆಲೆಯಲ್ಲಿ ಮೇಕೆಯನ್ನು ಬಲಿ ಕೊಡುವುದಾಗಿ ದೇವಸ್ಥಾನದಲ್ಲಿ ಹರಕೆ ಹೊತ್ತು ಕೊಂಡಿದ್ದರಂತೆ.
ಹೀಗಾಗಿ, ಜುಲೈ.2 ರಂದು ಗ್ರಾಮಸ್ಥರ ಜೊತೆಗೆ ಬಂದು ಬಗರ್ ಸಾಯಿ ಮೇಕೆಯನ್ನು ಬಲಿ ನೀಡಿದ್ದು, ಮೇಕೆ ಬಲಿ ನೆರವೇರಿಸಿದ ನಂತರ ಗ್ರಾಮಸ್ಥರು ಅದರ ಮಾಂಸವನ್ನು ಬೇಯಿಸಿ ಊಟ ಮಾಡಿದ್ದಾರೆ.ಇದೆ ಸಂದರ್ಭ ಬಗರ್ ಸಾಯಿ ಅವರಿಗೆ ಮೇಕೆಯ ಮಾಂಸದಿಂದ ಮೇಕೆಯ ಕಣ್ಣು ಸಿಕ್ಕಿದ್ದು ಇದನ್ನು ನುಂಗುವ ಪ್ರಯತ್ನ ಮಾಡಿದ್ದಾರೆ. ಆದರೆ ಬೇಯಿಸಿದ ಮೇಕೆಯ ಕಣ್ಣು ಅವರ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಬಗರ್ ಸಾಯಿ ಅವರಿಗೆ ಉಸಿರಾಡಲು ಆಗದೇ ಉಸಿರುಗಟ್ಟಿದ ಅನುಭವವಾಗಿದೆ. ತಕ್ಷಣವೇ ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದರು ಕೂಡ ಬಗರ್ ಸಾಯಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: Intresting news: ಬಲಿ ಕೊಟ್ಟ ಮೇಕೆಯ ಆಹಾರ ಸೇವನೆ! ಕೂಡಲೇ ಮೃತಪಟ್ಟ ವ್ಯಕ್ತಿ!!!
