Snake viral news: ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ. ಹಾವು ಎಂದಾಕ್ಷಣ ಎಂಥವರಿಗೂ ಭಯವಾಗುವುದಂತೂ ಖಂಡಿತ. ನಮ್ಮ ಕಣ್ಣ ಮುಂದೆ ಹಾವು ಸರಿದು ಹೋದರೆ ಸಾಕು ಮೈ ಪೂರ್ತಿ ಬೆವರಿ ಹೋಗುತ್ತೆ. ಆದ್ರೆ, ಅದೇ ಹಾವು ನಮ್ಮ ಪಕ್ಕದಲ್ಲೇ ಇದ್ರೆ ಅಂತೂ ಒಂದು ಕ್ಷಣ ಹೃದಯವೇ ನಿಂತೋದಂತೆ ಅನುಭವ ಆಗೋದಂತೂ ಖಂಡಿತ. ಇತ್ತೀಚೆಗೆ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ಇದರಲ್ಲಿ ಹಾವು ಬೈಕ್ ನಿಂದ ಎದ್ದು ಬರುತ್ತಿರುವ ವಿಡಿಯೋ ವೈರಲ್ ( Snake viral news) ಆಗುತ್ತಿದೆ.
ಬೈಕ್ ಸವಾರನು ತನ್ನದೇ ಲೋಕದಲ್ಲಿ ಅತ್ತ ಇತ್ತ ನೋಡುತ್ತಾ ಬೈಕ್ ರೈಡಿಂಗ್ ಮಾಡುತ್ತಾ ಹಾಯಾಗಿ ಸಾಗುತ್ತಿದ್ದನು. ಬೈಕ್ ಸ್ವಲ್ಪ ದೂರ ಸಾಗುತ್ತಿದ್ದಂತೆ ಹಾವಿನ ಮರಿ ನಿಧಾನಕ್ಕೆ ತಲೆ ಎತ್ತಿ ಬಂದಿದೆ. ಅಬ್ಬಾ..! ಒಂದು ಕ್ಷಣ ಆ ವ್ಯಕ್ತಿಗೆ ಹೇಗಾಗಿರಬೇಡ? ಹಾವನ್ನು ನೋಡಿದ್ದೇ ತಡ ಬೈಕನ್ನು ಚಲಾಯಿಸುತ್ತಿದ್ದಂತೆ ಅಲ್ಲಿಂದಲೇ ಜಿಗಿದಿದ್ದಾನೆ. ಹಾವು ಎಂದು ಕೂಗಾಡಿದ್ದಾರೆ. ಏಕಾಏಕಿ ಬೈಕ್ ಸವಾರನು ಬಿದ್ದುದ್ದನ್ನು ಕಂಡ ಸಾರ್ವಜನಿಕರು ಏನಾಯ್ತು ಎಂದು ಗಾಬರಿಯಿಂದ ಧಾವಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸ್ಥಳೀಯರಿಗೆ ಬೈಕ್‌ನಲ್ಲಿ ಹಾವಿರುವ ವಿಷಯ ತಿಳಿದಿದೆ. ಕೊನೆಗೆ ಎಲ್ಲರೂ ಬಿದ್ದಿದ್ದ ಬೈಕನ್ನು ಎದ್ದು ನಿಲ್ಲಿಸಿದ್ದಾರೆ. ಬೈಕ್ ನಲ್ಲಿ ಅಡಗಿ ಕೂತಿದ್ದ ಹಾವಿನ ಮರಿಯನ್ನು ಹುಡುಕಿ, ಅದನ್ನು ಹೊರಗೆ ತೆಗೆದಿದ್ದಾರೆ. ನಂತರ ಸ್ಥಳೀಯರು ಸುರಕ್ಷಿತವಾಗಿ ಹಾವಿನ ಮರಿಯನ್ನು ಚರಂಡಿಗೆ ಬಿಡಲಾಗಿದೆ. ಈ ಘಟನೆಯು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಮಾಹಿತಿ ಪ್ರಕಾರ, ಬೈಕ್ ಸವಾರನು ತನ್ನ ಊರಿನಿಂದ ಪಟ್ಟಣದ ಕಡೆಗೆ ಆಗಮಿಸುತ್ತಿದ್ದಾಗ, ಬಹುಶಃ ಅವರು ಹಳ್ಳಿಯಲ್ಲಿ ಬೈಕ್ ನಿಲ್ಲಿಸಿದ್ದಾಗಲೇ ಮರಿ ಹಾವೊಂದು ಸೇರಿಕೊಂಡಿತ್ತು. ಆದರೆ, ಅದು ಇವರಿಗೆ ಗೊತ್ತಾಗದೆ ಹಾಗೆಯೇ ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಇದನ್ನು ಓದಿ: Train Accident: ಬಾಲಸೋರ್ ರೈಲು ದುರಂತಕ್ಕೆ ಕಾರಣ ಬಹಿರಂಗ : ತನಿಖಾ ವರದಿಯಲ್ಲಿ ದಾಖಲಾಗಿದೆ ವಾಸ್ತವ ಸತ್ಯ
