Ticket Jackpot Money : ಲಾಟರಿ (lottery ticket) ಟಿಕೆಟ್ ಮಹಿಮೆಯಿಂದ ಲಕ್ಷಾಧಿಪತಿಗಳಾದವರು ಹಲವರಿದ್ದಾರೆ. ಹಾಗೇ ಅದೇ ಟಿಕೆಟ್ ನಿಂದಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಆದರೆ, ಇಲ್ಲಾಗಿದ್ದು ಬೆರೇನೆ. ವ್ಯಕ್ತಿಯೊಬ್ಬ 25 ಕೋಟಿ ಜಾಕ್ ಪಾಟ್ (Ticket Jackpot Money) ಗೆದ್ದಿದ್ದ ಲಾಟರಿಯನ್ನು ಶರಾಬು ಅಂಗಡಿಯಲ್ಲೇ ಮರೆತು ಬಂದಿದ್ದಾನೆ. ಮುಂದೇನಾಯ್ತು ಗೊತ್ತಾ?
ಈ ರೋಚಕ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಎಸ್ಎ ಮ್ಯಾಸಚೂಸೆಟ್ಸ್ ನಿವಾಸಿ, ಕಾರ್ ಮೆಕ್ಯಾನಿಕ್ ಪಾಲ್ ಲಿಟಲ್ ಎಂಬಾತನೇ ಲಾಟರಿ ಟಿಕೆಟ್ ಪಡೆದು, ಕಳೆದುಕೊಂಡಾತ. ಈತ ಜನವರಿಯಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು. ಲಾಟರಿ ಟಿಕೆಟ್ ಖರೀದಿಸಿ, ಮನೆಯ ದಾರಿಯಲ್ಲಿ ಸಿಕ್ಕ ಮದ್ಯದ ಅಂಗಡಿಗೆ ಕಾಲಿಟ್ಟಿದ್ದಾರೆ. ನಶೆ ಏರಿಯೋ, ಮರೆವೋ, ದುರಾದೃಷ್ಟಕ್ಕೆ ಟಿಕೆಟ್ ಅಲ್ಲೆ ಶರಾಬು ಅಂಗಡಿಯಲ್ಲಿ ಬಿಟ್ಟು ಬಂದಿದ್ದಾರೆ.
ಇತ್ತೀಚೆಗಷ್ಟೇ ಈ ಟಿಕೆಟ್‌ನ ಫಲಿತಾಂಶ ಹೊರಬಂದಿದ್ದು, ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿದೆ. ಈ ವೇಳೆ ಪಾಲ್ ಲಿಟಲ್ ಹೆಸರು ಅನೌನ್ಸ್ ಕೂಡಾ ಆಗಿದೆ. ಆದರೆ ಇವರ ಕೈಯ್ಯಲ್ಲಿ ಟಿಕೆಟ್ ಇರಲಿಲ್ಲ. ಟಿಕೆಟ್ ಗಾಗಿ
ಎಲ್ಲಾ ಕಡೆ ಉಸಿರು ಬಿಗಿ ಹಿಡಿದು ಹುಡುಕಾಡಿದ್ದಾರೆ. ಕೊನೆಗೆ ತಾನು
ಶರಾಬು ಅಂಗಡಿಯಲ್ಲಿಯೇ ಟಿಕೆಟ್ ಬಿಟ್ಟು ಬಂದಿರುವುದು ಪಾಲ್ ಲಿಟಲ್ ಅವರಿಗೆ ನೆನಪಾಗಿದೆ.
ತಕ್ಷಣವೇ ಅದೃಷ್ಟ ಲಕ್ಷ್ಮಿಯನ್ನು ಕರೆತರಲು ಶರಾಬು ಅಂಗಡಿಗೆ ಹೋಗಿ ಅಲ್ಲಿದ್ದ ಎಲ್ಲರ ಬಳಿ ವಿಚಾರಿಸಿ, ಕೆಲಸದ ಮಹಿಳೆಯ ಬಳಿಯೂ ವಿಚಾರಿಸಿದರು. ಆದರೆ, ಮಹಿಳೆ ತನಗೆ ಯಾವ ಟಿಕೆಟ್ ಕೂಡಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ನಿಜ ಸಂಗತಿ ಏನೆಂದರೆ, ಮೆಕ್ಯಾನಿಕ್ ಲಾಟರಿ ಟಿಕೆಟ್ ಖರೀದಿಸಿ, ಮನೆಯ ದಾರಿಯಲ್ಲಿ ಸಿಕ್ಕ ಶರಾಬು ಅಂಗಡಿಯಲ್ಲಿ ಟಿಕೆಟ್ ಬಿಟ್ಟು ಬಂದಿದ್ದಾರೆ. ಈ ವ್ಯಕ್ತಿ ಬಿಟ್ಟು ಬಂದಿರುವ ಟಿಕೆಟ್ ಮದ್ಯದಂಗಡಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಸಿಕ್ಕಿದೆ.
ಈ ಟಿಕೆಟ್‌ನ ಫಲಿತಾಂಶ ಹೊರಬಂದಿದಾಗ ಮಹಿಳೆಯೇ ಲಾಟರಿ ಕಚೇರಿಗೆ ಆಗಮಿಸಿ 25 ಕೋಟಿ ರೂ. ಗೆದ್ದ ಲಾಟರಿ ಟಿಕೆಟ್ ಅನ್ನು ತೋರಿಸಿದ್ದಾಳೆ. ಆದರೆ ಅಲ್ಲಿದ್ದವರಿಗೆ ಮಹಿಳೆಯ ಮೇಲೆ ಅನುಮಾನ ಬಂದು ತನಿಖೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ನಂತರ ಪಾಲ್ ಲಿಟಲ್ ಅನ್ನು ಪತ್ತೆ ಹಚ್ಚಿ ಅವರಿಗೆ ಲಾಟರಿ ಹಣವನ್ನು ನೀಡಲಾಯಿತು. ಇತ್ತ ಟಿಕೆಟ್ ಬಚ್ಚಿಟ್ಟಿದ್ದ ಮಹಿಳೆಯ ಮೇಲೆ ವಂಚನೆ ಆರೋಪ ಹೊರಿಸಿ ಜೈಲಿಗೆ ಅಟ್ಟಲಾಯಿತು.
