7
Kodagu: ಕೊಡಗು: ಪೆರಾಜೆ ಗ್ರಾಮದ ನಿಡ್ಯಮಲೆ ಹಾಲೆಕಾಡು ಪ್ರದೇಶದಲ್ಲಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಕೃಷಿಯನ್ನು ನಾಶಪಡಿಸಿದೆ.

ಪಕ್ಕದ ಕೋಳಿಕ್ಕಮಲೆ ಬೆಟ್ಟದ ಕೆಳಭಾಗದ ಕಾಡಿನಿಂದ ಬರುವ ಆನೆಗಳು ಬೆಳ್ಳಿಪ್ಪಾಡಿ ತಿಮ್ಮಪ್ಪ ಕುಡಿಯರ ಸುಂದರ, ಚಾಮಕಜೆ ಲಿಂಗಯ್ಯ, ಚಾಮಕಜೆ ದುಗ್ಗಪ್ಪ, ಚಾಮಕಜೆ ನಾರಾಯಣ, ಹೊದ್ದೆಟ್ಟಿ ಗೋಪಾಲಕೃಷ್ಣ ಕುತ್ಯಾಳ ಜನಾರ್ದನ ಅವರ ತೋಟಕ್ಕೆ ದಾಳಿಯಿಟ್ಟಿವೆ. ಆನೆಗಳನ್ನು ಓಡಿಸುವ ಪ್ರಯತ್ನವನ್ನು ಊರವರು ಮಾಡಿದರೂ ಮತ್ತೆ ಮತ್ತೆ ನುಗ್ಗಿ ಬರುತ್ತಿವೆ.
ಕಾಡಾನೆಗಳನ್ನು ಸ್ಥಳಾಂತರಿಸುವಂತೆ ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ.
ಇದನ್ನು ಓದಿ: Kundapur: ಪ್ರಸಿದ್ದ ಕ್ಷೇತ್ರ ಕಮಲಶಿಲೆ ದೇವಸ್ಥಾನದ ಪ್ರಧಾನ ಅರ್ಚಕ ನದಿಗೆ ಬಿದ್ದು ಸಾವು
