Home » 7th pay commission: 7ನೇ ವೇತನ ಸಮಿತಿ ಜಾರಿ ಅಸ್ಥಿರತೆಯಲ್ಲಿ, ಸಿಎಂ ಹೇಳಿಕೆಯಿಂದ ಸರ್ಕಾರಿ ನೌಕರರಿಗೆ ಭಾರೀ ನಿರಾಸೆ

7th pay commission: 7ನೇ ವೇತನ ಸಮಿತಿ ಜಾರಿ ಅಸ್ಥಿರತೆಯಲ್ಲಿ, ಸಿಎಂ ಹೇಳಿಕೆಯಿಂದ ಸರ್ಕಾರಿ ನೌಕರರಿಗೆ ಭಾರೀ ನಿರಾಸೆ

by Mallika
0 comments
7th pay commission

7th pay commission: 7ನೇ ವೇತನ ಆಯೋಗದ ಶಿಫಾರಸು ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ಗುರುವಾರ ಹೇಳಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ 7ನೇ ವೇತನದ ಆಯೋಗದ( 7th pay commission) ಗ್ಯಾರಂಟಿ ಮರೆಯಬಾರದು ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಏಳನೇ ವೇತನ ಆಯೋಗ ಜಾರಿಮಾಡಬೇಕೆಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ, ಕೇಂದ್ರದಲ್ಲಿ ಹತ್ತು ವರ್ಷಕ್ಕೆ ಒಮ್ಮೆ ವೇತನ ಆಯೋಗ ಮಾಡಲಿದ್ದಾರೆ. ನಾವು ಐದು ವರ್ಷಕ್ಕೆ ಮಾಡುತ್ತಿದ್ದೇವೆ, ಕೆಲವೊಮ್ಮೆ ಒಂದೆರಡು ವರ್ಷ ವ್ಯತ್ಯಾಸ ಆಗಿದೆ, ಆಯೋಗ ರಚನೆಗೂ ಮೊದಲು ವೇತನ ಸಮಿತಿ ಇತ್ತು. ಅದರ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಆಗುತ್ತಿತ್ತು.

ಆದರೆ, ಇದೀಗ ಏಳನೇ ವೇತನ ಆಯೋಗವು ರಾಜ್ಯ ಸರ್ಕಾರಿ(government employees) ನೌಕರರಿಗೆ ವೇತನ ಪರಿಷ್ಕರಣೆ ಕುರಿತು ರಚಿಸಿರುವ ಅಂತಿಮ ವರದಿ ನೀಡಲು ಆರು ತಿಂಗಳ ಕಾಲಾವಕಾಶ ಕೋರಿದ್ದು, ಅಂತಿಮ ವರದಿ ಪರಿಶೀಲಿಸಿ ರಾಜ್ಯದ ಹಣಕಾಸು ಸ್ಥಿತಿಗತಿ ನೋಡಿಕೊಂಡು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.ಈಗಾಗಲೇ ಸರ್ಕಾರಿ ನೌಕರರಿಗೆ ಪೂರ್ವಾನ್ವಯವಾಗುವಂತೆ ಮೂಲ ವೇತನದ ಶೇ 17ರಷ್ಟು ಮಧ್ಯಂತರ ಪರಿಹಾರ ಕೊಡಲಾಗಿದೆ. ಈಗ ಅಂತಿಮ ವರದಿ ನೋಡಿ ಅನುಷ್ಠಾನ ಮಾಡಲಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಖಾಲಿ ಇರುವ 2.55 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಕಾಲಮಿತಿ ಒಳಗೆ ಭರ್ತಿ ಮಾಡಲಾಗುವುದು. ತುರ್ತು ಅಗತ್ಯವಿರುವ ಇಲಾಖೆಗಳಿಗೆ ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ 75 ಸಾವಿರ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

 

ಇದನ್ನು ಓದಿ: Congress: ಜೆಡಿಎಸ್, ಬಿಜೆಪಿಯ ಹೊಸ ಆಪರೇಷನ್: ಸಿದ್ದರಾಮಯ್ಯ ಸ್ವಪಕ್ಷದ ಶಾಸಕರಿಗೆ ನೀಡಿದ್ರು ರೆಡ್ ಅಲರ್ಟ್ 

You may also like

Leave a Comment