Bigg Offer: ಕೆಲವೊಂದು ತರಕಾರಿಗೆ ದಿಡೀರ್ ಆಗಿ ಬೆಲೆ ಹೆಚ್ಚಳ ಆಗುತ್ತವೆ. ಅದೇ ರೀತಿ ಈಗಾಗಲೇ ಟೊಮೆಟೊ ಬೆಲೆ 150 ರೂಪಾಯಿಯ ಗಡಿ ದಾಟಿದೆ. ಎಲ್ಲಿ ನೋಡಿದರೂ ಟೊಮೆಟೊ ಬೆಲೆ ಏರಿಕೆಯದ್ದೇ (Tomato Price) ಚರ್ಚೆ. ಈ ವಿಚಾರವನ್ನೇ ಬಂಡವಾಳ ಮಾಡಿಕೊಂಡ ಮೊಬೈಲ್ ಶಾಪ್ ಮಾಲೀಕ ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಟೊಮೆಟೊ ಉಚಿತ ಕೊಡುಗೆ (bigg Offer) ನೀಡುತ್ತಿದ್ದಾನೆ. ಮುಂದೇನಾಯಿತು ಬನ್ನಿ ನೋಡೋಣ.
ವಿಶೇಷ ಎಂದರೆ ಇದರಿಂದ ಮೊಬೈಲ್ ಶೋರೂಂ ಮಾಲೀಕರಿಗೆ ಒಳ್ಳೆ ಬ್ಯುಸಿನೆಸ್ ಆಗುತ್ತಿದೆಯಂತೆ. ಅದು ಹೇಗೆ ನೋಡೋಣ.
ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ಅಶೋಕ್ ಅಗರ್ವಾಲ್ ಎಂಬ ಯುವಕ ತನ್ನ ಮೊಬೈಲ್ ಶೋರೂಂನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದರೆ ಎರಡು ಕೆಜಿ ಟೊಮೆಟೊ ಫ್ರೀ ಎಂಬ ಫ್ಲೆಕ್ಸ್ ಹಾಕಿದ್ದಾನೆ. ಇದನ್ನ ಗಮನಿಸಿದ ಮೊಬೈಲ್ ಪ್ರಿಯರು ಅವರ ಶೋರೂಂ ಮುಂದೆ ಕ್ಯೂ ನಿಂತಿದ್ದಾರೆ. ಫೋನ್ ಜೊತೆಗೆ 2 ಕೆಜಿ ಟೊಮೆಟೊವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಈ ಆಫರ್ ಘೋಷಣೆ ಮಾಡಿದ ಬಳಿಕ ಒಳ್ಳೆ ಬ್ಯುಸಿನೆಸ್ ಆಗುತ್ತಿದೆ ಎಂದು ಮೊಬೈಲ್ ಅಂಗಡಿ ಮಾಲೀಕ ಅಶೋಕ್ ಹೇಳಿದ್ದಾನೆ.
ಸದ್ಯ ಟೊಮೊಟೊ ಬಗ್ಗೆ ಸಾಕಷ್ಟು ಹಾಸ್ಯಗಳ ಫೋಟೋಗಳು ಹರಿದಾಡುತ್ತಿದ್ದು, ಬೆಲೆ ಬಾಳುವ ವಸ್ತುಗಳಿಗೆ ಹೋಲಿಸಲಾಗುತ್ತಿದೆ. ಅಷ್ಟರ ಮಟ್ಟಿಗೆ ಟೊಮೆಟೊ ಸುದ್ದಿ ವೈರಲ್ ಆಗುತ್ತಿವೆ. ಇದರ ನಡುವೆ ಕೆಲ ಅಂಗಡಿ ಮಾಲೀಕರು ಟೂಮೆಟೊ ಬೆಲೆಯನ್ನೇ ತಮ್ಮ ಮಾರುಕಟ್ಟೆ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸಿಗರೇಟ್ ಉರಿಸುತ್ತಲೇ ಬಿಗ್ ಬಾಸ್ ಶೋ ನಡೆಸಿದ ಸಲ್ಮಾನ್ ಖಾನ್ !
