Kisan Samman: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಅಲ್ಲದೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಮ್ಮ 14ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ (Karnataka Budget 2023) ವಿವಿಧ ಇಲಾಖೆಗಳಿಗೆ ಅನುದಾನ ಘೋಷಿಸಿದ್ದಾರೆ. ಈ ಎಲ್ಲಾ ಹೊರೆಗಳ ಮಧ್ಯೆ ಇದೀಗ ರಾಜ್ಯ ಸರ್ಕಾರ ರೈತರಿಗೆ ಶಾಕಿಂಗ್ ನ್ಯೂಸ್ ನೀಡಿದೆ.
ಕಿಸಾನ್ ಸಮ್ಮಾನ್ (Kisan Samman) ಯೋಜನೆಯಡಿ ರೈತರಿಗೆ ನೀಡುವ ನೆರವನ್ನು ಕೈಬಿಡಲು ನಿರ್ಧರಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಹಿಡುವಳಿದಾರರಿಗೆ ರಾಜ್ಯ ಸರಕಾರದಿಂದ ವಾರ್ಷಿಕವಾಗಿ ನೀಡುತ್ತಿರುವ 4,000 ರೂ. ನೆರವು ಬಹುತೇಕ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.
2019 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ರಾಜ್ಯ ಸರಕಾರದಿಂದ ವಾರ್ಷಿಕ 4,000 ರೂ. ನೆರವು ಘೋಷಿಸಿದ್ದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ವಾರ್ಷಿಕ 6,000 ರೂ. ನೆರವು ನೀಡುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ವಾರ್ಷಿಕ 4,000 ರೂ. ಸೇರಿ ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 10,000 ರೂ. ನೆರವು ಸಿಗುತ್ತಿತ್ತು.
ಆದರೆ, ಗಾರಂಟಿ ಹೊರೆಯಿಂದಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರಿಗೆ ನೀಡುವ ವಾರ್ಷಿಕ 4,000 ರೂ ಯೋಜನೆಯು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆದರೆ, ಅನುದಾನ ನೀಡಿಕೆ ಮುಂದುವರಿಸುವ ಇಲ್ಲವೇ ಸ್ಥಗಿತಗೊಳಿಸುವ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾತ್ರೋರಾತ್ರಿ 6000 ಕೆಜಿ ತೂಕದ ಸೇತುವೆಯೇ ಕಳವು!
