Election: ಚುನಾವಣೆ 16 ಮಂದಿ ಸಾವು. ಹಿಂಸಚಾರಗಳ ನಡುವೆ ಮುಗಿದ , ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ.
ಕಳೆದ ಕೆಲವು ದಿನಗಳಿಂದ ಬಂಗಾಳದಲ್ಲಿ ಬಾರಿ ಹಿಂಸಾಚಾರಗಳ ನಡುವೆ ಪಂಚಾಯತ್ ಚುನಾವಣೆ( Election)ಇದೀಗ ಮುಗಿದಿದೆ. 16 ಮಂದಿ ಮತದಾನದ ದಿನ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಸಿಕೊಳ್ಳುವ ಚುನಾವಣೆಯು ಬಂಗಾಳದಲ್ಲಿ ರಕ್ತದೋಕಳಿಯನ್ನು ಹರಿಸಿದೆ. ರಾಜಕೀಯ ವಿಚಾರದಲ್ಲಿ ಸದಾ ಜಿದ್ದಾಜಿದ್ದಿಗೆ ಹೆಸರುವಾಸಿಯಾದ ಪಶ್ಚಿಮ ಬಂಗಾಳದಲ್ಲಿ ಕೊನೆಗೂ ಪಂಚಾಯತ್ ಚುನಾವಣೆ ಮುಗಿದಿದೆ. 40 ಮಂದಿ ಪ್ರಾಣ ಕಳೆದುಕೊಂಡಿದ್ದು , 50ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಈ ಭಯ ಆತಂಕದ ನಡುವೆಯೂ ಜನ ಮತದಾನ ಮಾಡಿದ್ದಾರೆ. ಶನಿವಾರ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದೇ ದಿನ 16 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಬೆಂಕಿ ಹಚ್ಚುವುದು ನೀರು ಸುರಿದು ಮತದಾನಕ್ಕೆ ಅಡ್ಡಪಡಿಸುವುದು ಮತಗಟ್ಟೆಗಳಲ್ಲಿ ಬೂತ್ಗಳ ಕಳ್ಳತನ ಮಾಡುವಂತಹ ಘಟನೆಗಳು ದಾಖಲಾಗಿವೆ.
ಪಂಚಾಯತ್ ಚುನಾವಣೆ ಒಂದೇ ದಿನ 16 ಮಂದಿ ಜೀವ ಬಿಟ್ಟಿದ್ದಾರೆ. ಇದರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಕಾರ್ಯಕರ್ತರೇ. ಕಾಂಗ್ರೆಸ್‌ನ ಒಂಬತ್ತು ಮಂದಿ ಕಾರ್ಯಕರ್ತರು ಇದರಲ್ಲಿ ಸೇರಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಐದು ಮಂದಿ ಮೃತಪಟ್ಟಿದ್ದಾರೆ. ಉತ್ತರ ದಿನಜಪುರ್ ಜಿಲ್ಲೆಯಲ್ಲಿ ನಾಲ್ವರು , ಕೂಚ್ ಬೆಹಾರ್ ಜಿಲ್ಲೆಯಲ್ಲಿ ಮೂವರ ಹತ್ಯೆಯಾಗಿದೆ. ಮಾಲ್ದಾ, ದಕ್ಷಿಣ 24 ಪರಗಣ , ನಾಡಿಯಾ ಹಾಗೂ ಪಶ್ಚಿಮ ಬುರ್ಡವಾನ್ ಜಿಲ್ಲೆಯಲ್ಲೂ ತಲಾ ಒಬ್ಬರು ಮೃತಪಟ್ಟಿದ್ದಾರೆ.
*ಚುನಾವಣೆ ಸಂದರ್ಭ ಇಂತಹ ಘಟನೆಗಳು ಹೊಸದೇನಲ್ಲ*
ಅಸಲಿಗೆ ಪಶ್ಚಿಮ ಬಂಗಾಳಕ್ಕೂ ಚುನಾವಣೆ ಘರ್ಷಣೆಗೂ ಸುಧೀರ್ಘ ನಂಟಿದೆ. ಹಿಂಸಾಚಾರವಿಲ್ಲದೇ ಚುನಾವಣೆಯೇ ಮುಗಿಯೋಲ್ಲ ಎನ್ನುವಷ್ಟರ ಮಟ್ಟಿಗೆ ಅಲ್ಲಿನ ಗಲಾಟೆ , ಗದ್ದಲಗಳು ದಾಖಲಾಗುತ್ತವೆ. ಭೀಕರವಾಗಿ ರಾಜಕೀಯ ಎದುರಾಳಿಯನ್ನು ಕೊಲ್ಲುವ ಹಂತಕ್ಕೂ ಬೆಳೆದಿದೆ.
ಐದು ವರ್ಷದ ಹಿಂದೆ ನಡೆದಿದ್ದ ಪಂಚಾಯತ್ ಚುನಾವಣೆ ವೇಳೆಯೂ ಇದೇ ರೀತಿ ಹಿಂಸಾಚಾರಗಳು ನಡೆದಿದ್ದವು . ಆಗಲೂ ಇಷ್ಟೇ ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿತ್ತು . ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ 2003 ರಲ್ಲಿ ಪಂಚಾಯತ್ ಚುನಾವಣೆಗಳು ನಡೆದಾಗ ಇದಕ್ಕಿಂತ ಹೆಚ್ಚಿನ ಹಿಂಸಾಚಾರ ನಡೆದಿತ್ತು. ಆಗ 76 ಮಂದಿ ಜೀವ ಕಳೆದುಕೊಂಡಿದ್ದರು. ಪ್ರತಿ ಬಾರೀ ಚುನಾವಣೆಯಲ್ಲಿ ಆಡಳಿತರೂಢ ಹಾಗೂ ಎದುರಾಳಿ ಪಕ್ಷಗಳ ಕಾರ್ಯಕರ್ತರು ಬಡಿದಾಡಿಕೊಳ್ಳುವ ಸನ್ನಿವೇಶಗಳು ಪಶ್ಚಿಮ ಬಂಗಾಳದಲ್ಲಿ ಸೃಷ್ಟಿಯಾಗುತ್ತಿವೆ.
