Prabhas : ಪ್ರಭಾಸ್ (Prabhas) ಭಾರತದ ಅತ್ಯಂತ ಜನಪ್ರಿಯ ಬಹುಮುಖ ನಟರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಇಡೀ ಪ್ರಪಂಚಕ್ಕೆ ಪರಿಚಿತರಗಿದ್ದಾರೆ. ಒಟ್ಟಿನಲ್ಲಿ ‘ರೆಬೆಲ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯಲಾಗುವ ಪ್ರಭಾಸ್ ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿರುವುದು ನೂರಕ್ಕೆ ನೂರು ಸತ್ಯ.
ಬಾಹುಬಲಿ ನಂತರ ಅವರು ಸಾಹೋ ಮತ್ತು ರಾಧೆ ಶ್ಯಾಮ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸಿದರು. ನಂತರ ಪ್ರಭಾಸ್ ರಾಮಾಯಣ ಆಧಾರಿತ ಸಿನಿಮಾ ಆದಿಪುರುಷದಲ್ಲಿ ರಾಮನಾಗಿ ಪಾತ್ರ ಮಾಡಿದ್ದಾರೆ. ಇನ್ನೊಂದೆಡೆ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇನ್ನು ಓಂ ರಾವುತ್ ನಿರ್ದೇಶನ ಆದಿಪುರಷ ಸಿನಿಮಾ ಸೋಲು ಕಂಡ ನಂತರ ಪ್ರಭಾಸ್ ಇದರ ಬೆನ್ನಲ್ಲೆ ಶ್ರೀಮಹಾ ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು, ಈ ಪ್ರತಿಷ್ಠಿತ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಂತಾದ ತಾರೆಯರು ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ ಸಿ. ಅಶ್ವಿನಿ ದತ್ ಸುಮಾರು ರೂ. 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಕಮಲ್ ಹಾಸನ್ ಈ ಸಿನಿಮಾದ ಭಾಗವಾಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಅಲ್ಲದೇ ಕಮಲ್ ಇದರಲ್ಲಿ ವಿಲನ್ ಪಾತ್ರ ಮಾಡಲಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ಮತ್ತು ಕಮಲ್ ಅವರನ್ನು ಒಂದೇ ಸ್ಕ್ರೀನ್ ಮೇಲೆ ನೋಡಲು ಡಾರ್ಲಿಂಗ್ ಮತ್ತು ಉಳಗನಾಯಕನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದು ಮುಖ್ಯವಾಗಿ ವೈಜ್ಞಾನಿಕ ಕಥೆಯಾಗಿದ್ದರೂ, ತಯಾರಕರು ಇದಕ್ಕೆ ಫ್ಯಾಂಟಸಿ ಸ್ಪರ್ಶವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಡುಕಿನ ಮೇಲೆ ಒಳಿತಿನ ಗೆಲುವಿನ ಸಾರ್ವತ್ರಿಕ ಬಿಂದುವನ್ನು ಈ ಚಿತ್ರ ಆಧರಿಸಿದೆಯಂತೆ. ವೈಜ್ಞಾನಿಕ ಕಾದಂಬರಿ ಮತ್ತು ಭಾರತೀಯ ಪುರಾಣಗಳನ್ನು ಬೆರೆಸಿರುವುದು ಈ ಸಿನಿಮಾದ ಹೈಲೈಟ್ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದಲ್ಲಿ ಅಮಿತಾಬ್, ಪ್ರಭಾಸ್, ಕಮಲ್ ವಿಜ್ಞಾನಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಾಜೆಕ್ಟ್ ಕೆ ನಲ್ಲಿ ಪ್ರಭಾಸ್ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಈ ಕಥೆಯನ್ನು ಪುರಾಣಗಳೊಂದಿಗೆ ಜೋಡಿಸುವ ಅನುಕ್ರಮದಲ್ಲಿ ಕಾಣಿಸಿಕೊಳ್ಳುವ ವಿಷ್ಣುವಿನ ಅವತಾರದಲ್ಲಿ ರೆಬೆಲ್ ಸ್ಟಾರ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ಅದ್ಧೂರಿ ಬಜೆಟ್ ಮತ್ತು ತಾರಾಬಳಗದಲ್ಲಿ ತಯಾರಾಗುತ್ತಿರುವ ಈ ಚಿತ್ರ ಈಗ ಪ್ಯಾನ್ ಇಂಡಿಯಾದಲ್ಲಿ ಬಹುನಿರೀಕ್ಷಿತ ಚಿತ್ರವಾಗಿದೆ.
ಇದನ್ನೂ ಓದಿ: Bigg Offer: ಸ್ಮಾರ್ಟ್ ಫೋನ್ ಖರೀದಿಸಿದರೆ ಟೊಮೆಟೊ ಫ್ರೀ ಎಂದು ಬೋರ್ಡ್ ಹಾಕಿದ ಮಾಲೀಕ, ಆಮೇಲೆ ಏನಾಯ್ತು ನೋಡಿ !
