Home » Congress Government: ಅನ್ನಭಾಗ್ಯ ಜಾರಿ ದಿನವೇ BPL ಕಾರ್ಡ್ ದಾರರಿಗೆ ಬಿಗ್ ಶಾಕ್ !! ಇಂತವರಿಗೆ ಅಕ್ಕಿ ಹಣದ ವರ್ಗಾವಣೆ ಇಲ್ಲ ಎಂದ ಸರ್ಕಾರ !!

Congress Government: ಅನ್ನಭಾಗ್ಯ ಜಾರಿ ದಿನವೇ BPL ಕಾರ್ಡ್ ದಾರರಿಗೆ ಬಿಗ್ ಶಾಕ್ !! ಇಂತವರಿಗೆ ಅಕ್ಕಿ ಹಣದ ವರ್ಗಾವಣೆ ಇಲ್ಲ ಎಂದ ಸರ್ಕಾರ !!

0 comments
Congress Government

Congress Government: ಕಾಂಗ್ರೆಸ್ ಪಕ್ಷ 5ಗ್ಯಾರಂಟಿ ಯೋಜನೆಗಳಲ್ಲಿ ಒಂದೊಂದೇ ಯೋಜನೆಗಳ ಜಾರಿಗೆ ಕ್ರಮ ಕೈಗೊಂಡಿದ್ದು, ಇದೀಗ ಸರಕಾರವು (Congress Government) ಅನ್ನಭಾಗ್ಯ ಯೋಜನೆ ಜಾರಿ ತರಲು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ನೇರ ನಗದು ವರ್ಗಾವಣೆಗೆ (ಡಿಬಿಟಿ) ಚಾಲನೆ ನೀಡಲಿದ್ದಾರೆ. ಆದರೆ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಸುಮಾರು 22 ಲಕ್ಷ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳಿಲ್ಲದ ಕಾರಣ ತಕ್ಷಣವೇ ನೆರವು ಸಿಗುವುದಿಲ್ಲ.

ಕರ್ನಾಟಕವು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ 1.28 ಕೋಟಿ ಪಡಿತರ ಚೀಟಿಯನ್ನು ಹೊಂದಿದೆ. ಇವುಗಳಲ್ಲಿ ಶೇ 99 ರಷ್ಟು ಕಾರ್ಡ್‌ಗಳು ಆಧಾರ್ ಸಂಖ್ಯೆಗಳೊಂದಿಗೆ ಸೀಡ್ ಆಗಿವೆ. ಅವುಗಳಲ್ಲಿ, 1.06 ಕೋಟಿ ಕಾರ್ಡ್‌ಗಳನ್ನು ಹೊಂದಿರುವ ಶೇ 82 ರಷ್ಟು ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿದೆ. ಅಂತವರಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಉಳಿದವರಿಗೆ ಹೊಸ ಖಾತೆಗಳನ್ನು ತೆರೆಯಲು ತಿಳಿಸಲಾಗುವುದು ಎಂದು ಭಾನುವಾರ ತಿಳಿಸಿದೆ.

ಒಟ್ಟು 1.27 ಕೋಟಿ ಪಡಿತರ ಚೀಟಿಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರಾಗಿ (ಎಚ್ಒಎಚ್) ಪರಿಗಣಿಸಲಾಗಿದೆ. ‘ಈ ಎಚ್‌ಒಎಚ್‌ಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಅವರಲ್ಲಿ ಶೇ 94 ರಷ್ಟು ಮಹಿಳೆಯರು ಮತ್ತು ಶೇ 5ರಷ್ಟು ಪುರುಷರು ಇದ್ದಾರೆ’ ಎಂದು ತಿಳಿದು ಬಂದಿದೆ.

ಸದ್ಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಪ್ರಕಾರ, ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ಹದಿನೈದು ದಿನಗಳಲ್ಲಿ ವರ್ಗಾಯಿಸಲಾಗುವುದು. ಈ ಯೋಜನೆಯಡಿ ರಾಜ್ಯದಲ್ಲಿ 4.41 ಕೋಟಿ ಫಲಾನುಭವಿಗಳಿದ್ದಾರೆ ಎಂದಿದ್ದಾರೆ.

 

ಇದನ್ನು ಓದಿ: Chaluvaraya Swamy: ದೇವೇಗೌಡ್ರ ಹೆಸರೆತ್ತದೆ ರಾಜಕೀಯ ಮಾಡೋ ತಾಕತ್ತಿಲ್ಲ, ಯಾವುದೇ ಒಕ್ಕಲಿಗರ ಬೆಳವಣಿಗೆ ಸಹಿಸಲ್ಲ- ‘ಕುಮಾರಣ್ಣ’ನ ವಿರುದ್ಧ ‘ಚೆಲುವಣ್ಣ’ ಆಕ್ರೋಶ !! 

You may also like

Leave a Comment