Narendra Modi: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು 67 % ಮುಸ್ಲಿಂ ಮಹಿಳೆಯರು ಬೆಂಬಲಿಸಲಿದ್ದಾರೆ. ಇದಕ್ಕೆ ಒಂದು ಭದ್ರ ಕಾರಣ ಇದೆ. ಏನದು ?! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ !.
ಮೋದಿ ನೇತೃತ್ವದ ‘ಏಕರೂಪ ನಾಗರಿಕ ಸಂಹಿತೆ’ಯನ್ನು
ಕೇಂದ್ರ ಸರ್ಕಾರ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ ದೇಶಾದ್ಯಂತ 67% ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಶೇ.67 ಮುಸ್ಲಿಂ ಮಹಿಳೆಯರು, ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೆ ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ
67% ಮಹಿಳೆಯರು-5,403- ಹೌದು ಹಾಗೂ 2,039 (25%) ಜನರು ಇಲ್ಲ ಎಂದು ಹೇಳಿದರು.
14 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇಕಡಾ 60 ರಷ್ಟು (1,037) ಅವರು ಕಾನೂನನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. 515 (30%) ಜನರು ಬೆಂಬಲಿಸೋದಿಲ್ಲ ಮತ್ತು ಶೇಕಡಾ 11 (188) ಜನರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 18-44 ವರ್ಷ ವಯಸ್ಸಿನ 4,366 (69%) ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತೇವೆ ಎಂದರು. ಹಾಗೂ ಶೇಕಡಾ 24(1,524) ಜನರು ಇಲ್ಲ ಎಂದು ಹೇಳಿದರು. 6% ರಷ್ಟು (405 ಜನರು) ತಮಗೆ ಗೊತ್ತಿಲ್ಲ ಎಂದರು.
