Home » ದ.ಕ. : ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ,ನಾಮಪತ್ರ ಸಲ್ಲಿಕೆ

ದ.ಕ. : ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ,ನಾಮಪತ್ರ ಸಲ್ಲಿಕೆ

by Praveen Chennavara
0 comments
puttur

Puttur: ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತರೂ ಅತ್ಯಧಿಕ ಮತಗಳಿಸಿ ರಾಜ್ಯಾದ್ಯಂತ ಹಿಂದೂ ಐಕಾನ್ ಆಗಿ ಹೊರಹೊಮ್ಮಿರುವ ಅರುಣ್‌ ಕುಮಾರ್ ಪುತ್ತಿಲ ಅವರ ನೇತೃತ್ವದ ಪುತ್ತಿಲ ಪರಿವಾರ ಇದೀಗ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು ಸೋಮವಾರ ನಾಮಪತ್ರ ಸಲ್ಲಿಸಿದರು.

ಪುತ್ತಿಲ ಪರಿವಾರದ ಮುಖಂಡರೊಂದಿಗೆ ತೆರಳಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರಮುಖರಾದ ಸುಧೀರ್ ರೈ ನೇಸರ ಕಂಪ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಕುಮಾರ್ ನರಸಿಂಹ ಭಟ್, ದೇವಸ್ಯ ಶ್ರೀನಿವಾಸ್ ಭಟ್, ಸುರೇಶ್, ಸತೀಶ್ ಕೆ, ನಾರಾಯಣ ಪಾಟಾಳಿ ಸಹಿತ ನೂರಾರು ಕಾರ್ಯಕರ್ತರು ನಾಮಪತ್ರ ಸಂದರ್ಭ ಉಪಸ್ಥಿತರಿದ್ದರು.

 

ಇದನ್ನು ಓದಿ: Smartphone Application: ಮೊಬೈಲ್ ಬಳಕೆದಾರರೇ ಎಚ್ಚರ !! ನಿಮ್ಮ ಫೋನ್’ನಲ್ಲೂ ಈ 2 ಅಪ್ಲಿಕೇಶನ್ ಇದೆಯಾ ? ಹಾಗಿದ್ರೆ ಕೂಡಲೇ ಹೀಗೆ ಮಾಡಿ 

You may also like

Leave a Comment