Home » Anna bhagya scheme money: ‘ಅನ್ನಭಾಗ್ಯ’ದ ಅಕ್ಕಿ ಹಣ ಖಾತೆಗೆ ಬಂದಿದೆಯೆಂದು ತಿಳಿಯಬೇಕೆ? ಹಾಗಿದ್ರೆ ಈ ಕೂಡಲೇ ಹೀಗೆ ಮಾಡಿ.

Anna bhagya scheme money: ‘ಅನ್ನಭಾಗ್ಯ’ದ ಅಕ್ಕಿ ಹಣ ಖಾತೆಗೆ ಬಂದಿದೆಯೆಂದು ತಿಳಿಯಬೇಕೆ? ಹಾಗಿದ್ರೆ ಈ ಕೂಡಲೇ ಹೀಗೆ ಮಾಡಿ.

by Mallika
0 comments

Anna bhagya scheme money: ರಾಜ್ಯದಲ್ಲಿ ಈಗಾಗಲೇ ಮೊದಲ ಗ್ಯಾರಂಟಿಯನ್ನು ಜಾರಿಗೊಳಿಸಿದ ಕಾಂಗ್ರೆಸ್‌ ಸರ್ಕಾರಕ್ಕೆ ಮೆಚ್ಚುಗೆ ಮಹಾಪೂರವೇ ವ್ಯಕ್ತವಾಗುತ್ತಿದೆ. ಇನ್ನು ಕಾಂಗ್ರೆಸ್‌ 2ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆಗೆ (Anna bhagya Scheme) ನಿನ್ನೆ (ಸೋಮವಾರ) ಚಾಲನೆ ಸಿಕ್ಕಿದೆ. ರಾಜ್ಯದ ಜನರಿಗೆ ವಿತರಣೆ ಮಾಡಲು ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ನಗದು( Anna bhagya scheme money) ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ. ಇದೀಗ ಆಹಾರ ಇಲಾಖೆಯು ಅನ್ನಭಾಗ್ಯ ಫಲಾನುಭವಿಗಳಿಗೆ ನೆರವಾಗುವ ನಿಟ್ಟಿನಲ್ಲಿ ವೆಬ್‌ಸೈಟ್‌ ಲಿಂಕ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಹೌದು, ಸರಿಯಾದ ಮಳೆ ಇಲ್ಲದ ಕಾರಣ ಬೆಳೆಯಿಲ್ಲದೆ ಅಕ್ಕಿಯ ಪೂರೈಕೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಸರ್ಕಾರವು ನಗದು ವರ್ಗಾವಣೆ ಪ್ರಕ್ರಿಯೆಗೆ ಮುಂದಾಗಿದೆ. ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಕ್ರಮಕ್ಕೆ ಚಾಲನೆ ನೀಡಿ ಫಲಾನುಭವಿಗಳ ಖಾತೆ ಹಣ ವರ್ಗಾವಣೆ ಮಾಡಿದರು. ಸದ್ಯ ಎರಡು ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದೆ. ಮೊದಲ ಹಂತದಲ್ಲಿಯೇ ಕೋಲಾರ ಮತ್ತು ಮೈಸೂರಿನಲ್ಲಿ (mysore) ಪ್ರಾಯೋಗಿಕವಾಗಿ ನಗದು ವರ್ಗಾವಣೆ ಆರಂಭವಾಗಿದೆ. ತಿಂಗಳಾಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.

ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿಯನ್ನು ಈ ರೀತಿಯಾಗಿ ಚೆಕ್ ಮಾಡಿ:

#ಮೊದಲು https://ahara.kar.nic.in/status1/status_of_dbt.aspx ಈ ಲಿಂಕ್‌ ಬಳಸಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ.
# ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ವರ್ಷ, ತಿಂಗಳು ಹಾಗೂ ಪಡಿತರ ಚೀಟಿಯ ಆರ್‌ಸಿ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
#ನಂತರ ‘ಗೋ’ ಎಂಬ ಆಯ್ಕೆಯನ್ನು ಮಾಡಿದರೆ ಅನ್ನಭಾಗ್ಯ ಹಣ ವರ್ಗಾವಣೆ ಮಾಹಿತಿ ಲಭ್ಯವಾಗಲಿದೆ.

ಅನ್ನಭಾಗ್ಯ ಹಣ ವರ್ಗಾವಣೆ ಖಚಿತ ಪಡೆಸಿಕೊಳ್ಳಲು ವೆಬ್‌ಸೈಟ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು, ಕುಟುಂಬ ಸದಸ್ಯರು,ಸದಸ್ಯರ ಯುಐಡಿ, ಪಡಿತರ ಚೀಟಿ ವಿಧಾನ, ಅಕ್ಕಿ ಅರ್ಹತೆ ಪ್ರಮಾಣ (ಇಂತಿಷ್ಟು ಕೆ.ಜಿ) ಹಾಗೂ ಹಣ ವರ್ಗಾವಣೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ ಅನ್ನಭಾಗ್ಯ ಯೋಜನೆಯ ಹಣವು ಕುಟುಂಬ ಮುಖ್ಯಸ್ಥರ ಖಾತೆಗೆ ಜಮೆಯಾದ ಕೂಡಲೇ ಬ್ಯಾಂಕ್‌ನಿಂದ ಸಂದೇಶ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Aadhaar – Pan card Link: ಆಧಾರ್- ಪಾನ್ ಬಗ್ಗೆ ಬಿಗ್ ಅಪ್ಡೇಟ್ – ಇನ್ನೂ ಲಿಂಕ್ ಮಾಡದವರಿಗೆ ಬಂತು ಹೊಸ ರೂಲ್ಸ್ ; ಸರ್ಕಾರದಿಂದ ಮಹತ್ವದ ಆದೇಶ ! 

You may also like

Leave a Comment