Free Ticket: ಕಾಂಗ್ರೆಸ್ ಗ್ಯಾರಂಟಿ(Congress guarantee)”ಶಕ್ತಿ ಯೋಜನೆ”(Shakti scheme) ಯಿಂದ ಮಹಿಳೆಯರ ಸಂಭ್ರಮಕ್ಕೆ ಎಲ್ಲೇ ಮೀರಿದಂತಾಗಿದೆ. ಆದರೆ ಇದರಿಂದ ಸಂಕಷ್ಟ ಎದುರಾಗಿರುವುದು ಕಂಡಕ್ಟರ್ ಗೆ ಅಂದರೆ ತಪ್ಪಾಗಲಾರದು. ಏಕೆಂದರೆ ಕೆಲ ಪುರುಷರು ಉಚಿತ ಪ್ರಯಾಣದ ಆಸೆಗಾಗಿ ಹೆಣ್ಣಿನಂತೆ ಉಡುಗೆ ತೊಡುಗೆಗಳನ್ನು ಧರಿಸಿ ಬಸ್ ನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಹಾಗಾಗಿ ಕಂಡಕ್ಟರ್ ಗಳು ಎಚ್ಚರಿಕೆಯಿಂದ ಟಿಕೆಟ್ ನೀಡಬೇಕಾಗುತ್ತದೆ. ಇದೀಗ ಬಸ್ ಕಂಡಕ್ಟರೊಬ್ಬರು ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು (Conductor) ಪರದಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ರಾಯಚೂರಿನಿಂದ ಯಾದಗಿರಿಗೆ ಬಸ್‌ನಲ್ಲಿ (Bus) ಪ್ರಯಾಣಿಸುತ್ತಿದ್ದರು. ಇವರು ಫ್ರೀ ಟಿಕೆಟ್ (Free ticket) ಎಂದು ಕಂಡಕ್ಟರ್ ಬಳಿ ಕೇಳಿದರು. ಪುರುಷರ ಅಂಗಿ ತೊಟ್ಟಿರುವ ಇವರನ್ನು ಕಂಡ ಕಂಡಕ್ಟರ್ ಕಂಪ್ಲೀಟ್ ಕನ್ಪ್ಯೂಸ್ ಆಗಿದ್ದರು. ಆಮೇಲೆ ಆಧಾರ್ ಕಾರ್ಡ್ ನೋಡಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.
ಆಧಾರ್ ಕಾರ್ಡ್‌ನಲ್ಲಿ(Aadhaar Card) ಲಕ್ಷ್ಮೀ ಎಂಬ ಹೆಸರಿದ್ರೂ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಕಂಡಕ್ಟರ್ ಫ್ರೀ ಟಿಕೆಟ್ ಕೊಡಲೋ? ಬೇಡ್ವೋ? ಎಂಬ ಗೊಂದಲಕ್ಕೊಳಗಾದರು. ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ಪ್ರಶ್ನಿಸಿದ ಕಂಡಕ್ಟರ್‌ಗೆ ಸಿಕ್ಕ ಉತ್ತರ “ತೃತೀಯ ಲಿಂಗಿ” ಎನ್ನೋದು.
ನಾನು ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ, ಮಹಿಳೆಯರ ಬಟ್ಟೆ ಧರಿಸುವುದಿಲ್ಲ ಎಂದು ಹೇಳಿದ್ದು, ಕೊನೆಗೂ ಅರಿತುಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ (Shakti scheme) ಫ್ರೀ ಟಿಕೆಟ್ ಕೊಟ್ಟು ಲಕ್ಷ್ಮಿಯವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಇದನ್ನು ಓದಿ: PM Kisan Yojana: ಕಿಸಾನ್ ಸಮ್ಮಾನ್ ಈ ಕೆವೈಸಿ ಬಗ್ಗೆ ಬಂದಿದೆ ಲೇಟೆಸ್ಟ್ ಅಪ್ಡೇಟ್ !
