Husband And Wife: ಪತ್ನಿಯ ಸಾಧನೆಗೆ ಪತಿ ಬೆಂಗಾವಲಾಗಿ ನಿಂತು ಕೊನೆಗೆ ಪತಿ ಮೋಸ ಹೋಗಿದ್ದಾನೆ. ಹೌದು, ಪತ್ನಿಯನ್ನು ಓದಿಸಿ ಆಕೆಯನ್ನು ಸರ್ಕಾರಿ ಅಧಿಕಾರಿಯನ್ನಾಗಿ ಮಾಡಿದ ಪತಿಗೆ, ಪತ್ನಿ (Husband And Wife) ಮೋಸ ಮಾಡಿದ್ದಾಳೆ.
ಪ್ರಯಾಗ್‌ರಾಜ್ ನ ಮೇಜಾದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿ ರೇಷ್ಮಾ ಯುಪಿ ಪೊಲೀಸ್ ನಲ್ಲಿ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾದ ಬಳಿಕ ತನ್ನನು ತೊರೆದಿದ್ದಾಳೆ ಎಂದು ಪತಿ ರವೀಂದ್ರ ಆರೋಪಿಸಿದ್ದಾರೆ.
2017ರಲ್ಲಿ ರವೀಂದ್ರ – ರೇಷ್ಮಾ ಮದುವೆ (Marriage)ಯಾದರು. ಮದುವೆಯಾಗಿ ಅವರ ಸಂಬಂಧ (Relationship) ಒಂದು ವರ್ಷದವರೆಗೂ ಚೆನ್ನಾಗಿಯೇ ಇತ್ತು. ಈ ಸಂದರ್ಭದಲ್ಲಿ ರವೀಂದ್ರ ಉತ್ತರ ಪ್ರದೇಶದ ಹೊರಗಿರುವ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಆದರೆ
ಪತ್ನಿ ರೇಷ್ಮಾಳಿಗೆ ಯುಪಿ ಪೊಲೀಸ್ ನಲ್ಲಿ ಕಾನ್ಸ್‌ಟೇಬಲ್ ಆಗುವ ಕನಸು ಇತ್ತು. ಅದಕ್ಕಾಗಿ ನಾನು ಆಕೆಯ ಶಿಕ್ಷಣಕ್ಕಾಗಿ ನನ್ನ ಒಂದು ಪಾಲು ಜಮೀನು ಮಾರಿದೆ. ಪದವಿ ಶುಲ್ಕ ಪಾವತಿಸಿ ಆಕೆಯ ಶಿಕ್ಷಣಕ್ಕೆ (Education) ಬೆಂಬಲ ನೀಡಿದ್ದೆ. ಆದರೆ ಕಾನ್ಸ್‌ಟೇಬಲ್ ಕೆಲಸ ಸಿಕ್ಕ ಬಳಿಕ ಆಕೆ ನನಗೆ ದ್ರೋಹ ಮಾಡಿರುವುದಾಗಿ ರವೀಂದ್ರ ಹೇಳಿದ್ದಾರೆ.
ಮಾತ್ರವಲ್ಲ ರೇಷ್ಮಾ ಯುಪಿ ಪೊಲೀಸ್ ನಲಿ ಆಯ್ಕೆಯಾದ ಬಳಿಕ ಆಕೆ ನನ್ನಿಂದ ಅಂತರ ಕಾಯ್ದುಕೊಂಡಳು ಎಂದು ರವೀಂದ್ರ ತಿಳಿಸಿದ್ದಾರೆ. ಪತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರೇಷ್ಮಾ, ‘ರವೀಂದ್ರ ನನ್ನ ಮೇಲೆ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೈದಿದ್ದಾರೆ. ಅವಮಾನ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾರಿಗೂ ಹೇಳದೆ ಸುಮ್ಮನಿದ್ದೆ’ ಎಂದಿದ್ದಾರೆ.
ಈ ಬಗ್ಗೆ ರವೀಂದ್ರ ಅವರ ತಾಯಿ ಮಾತನಾಡಿ, ‘ ರೇಷ್ಮಾ ಹಿಂತಿರುಗಲು ನಿರ್ಧರಿಸಿದರೆ ಭವಿಷ್ಯದ ಯಾವುದೇ ಕೌಟುಂಬಿಕ ಸಮಸ್ಯೆಗಳನ್ನು ತಪ್ಪಿಸಲು ಸಿದ್ಧವಿದ್ದೇವೆ’ ಎಂದಿದ್ದಾರೆ. ರವೀಂದ್ರ ಸಹ, ‘ಇದೀಗ ಪತ್ನಿಯನ್ನು ನಾನು ಕ್ಷಮಿಸಲು ಸಿದ್ದನಾಗಿದ್ದೇನೆ. ಆಕೆ ನನ್ನೊಂದಿಗೆ ಮತ್ತೆ ಬರಲಿ’ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರೇಷ್ಮಾ ಬಳಿ, ಪತಿಯೊಂದಿಗೆ ಮತ್ತೆ ಒಂದಾಗಲು ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ರವೀಂದ್ರ ತನಗೆ ಮಾಡಿದ ಅವಮಾನಕ್ಕೆ ಕ್ಷಮೆ ಕೇಳಿ ಗೌರವದಿಂದ ನಡೆದುಕೊಂಡರೆ ಆತನೊಂದಿಗೆ ಹೋಗಲು ಸಿದ್ದಳೆಂದು ರೇಷ್ಮಾ ತಿಳಿಸಿದ್ದಾರೆ.
ಇದನ್ನು ಓದಿ: Bengaluru News: ತಪ್ಪಿದ ಭಾರೀ ವಿಮಾನ ದುರಂತ, ತುರ್ತು ಭೂ ಸ್ಪರ್ಶ !
