Home » Snake smuggling: ಅಬ್ಬಬ್ಬಾ..! ಮಹಿಳೆಯ ಎದೆಯ ಮಿದುವಿನಲ್ಲಿ 5 ಜೀವಂತ ಹಾವು ಪತ್ತೆ !

Snake smuggling: ಅಬ್ಬಬ್ಬಾ..! ಮಹಿಳೆಯ ಎದೆಯ ಮಿದುವಿನಲ್ಲಿ 5 ಜೀವಂತ ಹಾವು ಪತ್ತೆ !

0 comments
Snake smuggling

Snake smuggling: ಕಳ್ಳತನದ ಕೆಲವೊಂದು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಕೆಲವೊಂದು ಕಳ್ಳರ ಕಳ್ಳತನದ ಚೌರ್ಯಚಾತುರ್ಯ ಅಚ್ಚರಿ ಮೂಡಿಸುವಂತಿರುತ್ತದೆ. ಕಳ್ಳಸಾಗಾಣಿಕೆ ಮಾಡಲು ಜನರು ವಿವಿಧ ರೀತಿಯ ತಂತ್ರಗಳನ್ನು ಉಪಯೋಗಿಸುತ್ತಾರೆ. ಇವರು ಭದ್ರತಾ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ಎಷ್ಟೇ ಮಾಸ್ಟರ್ ಪ್ಲಾನ್ ಮಾಡಿದ್ದರು ಕೂಡ ಆಗೊಮ್ಮೆ ಈಗೊಮ್ಮೆ ಸಿಕ್ಕಿಹಾಕಿರುವ ಪ್ರಕರಣಗಳು ದಾಖಲಾಗಿದೆ. ಇದೀಗ ಇಂಥದ್ದೇ ಒಂದು ಪ್ರಕರಣದ ಹಾಕಲಾಗಿದ್ದು, ಮಹಿಳೆಯೊಬ್ಬಳು ತನ್ನ ಎದೆಯ ಮಿದುವಿನಲ್ಲಿ ಬರೋಬ್ಬರಿ 5 ಜೀವಂತ ಹಾವನ್ನು ಹುದುಗಿಸಿಟ್ಟುಕೊಂಡು ಕಳ್ಳಸಾಗಾಣಿಕೆ (snake smuggling) ಮಾಡುತ್ತಿದ್ದವಳನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ.

ಹೌದು, ಇದೀಗ ವೈರಲ್ ಆಗುತ್ತಿರುವ ಈ ಪ್ರಕರಣವು ಚೀನಾದ ಗುವಾಂಗ್‌ಡಾಂಗ್ (Guangdong) ಪ್ರಾಂತ್ಯದ ಶೆನ್‌ಝೆನ್​ನ ಫ್ಯೂಟಿಯನ್ ಬಂದರಿನಲ್ಲಿ (Futian Port, Shenzhen) ಗಡಿ ದಾಟುತ್ತಿದ್ದ ವೇಳೆಯಲ್ಲಿ ಈಕೆಯನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಕಳ್ಳರು ಎಷ್ಟೇ ತಂತ್ರಗಳನ್ನು ಉಪಯೋಗಿಸಿದರೂ, ಬಾರ್ಡರ್​ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿರುವುದರಿಂದ ಅಷ್ಟು ಸುಲಭವಾಗಿ ಪ್ರಾಣಿಗಳನ್ನಾಗಲೀ ಅಥವಾ ವ್ಯಕ್ತಿಗಳನ್ನಾಗಲೀ ಕಳ್ಳ ಸಾಗಾಣಿಕೆ ಮಾಡಲು ಸಾಧ್ಯವಿಲ್ಲ.

ವರದಿ ಪ್ರಕಾರ, ಮಹಿಳೆಯ ದೇಹದ ಆಕಾರ ಅಸಹಜ ರೀತಿಯಲ್ಲಿದ್ದುದನ್ನು ಗಮನಿಸಿದ ಅಧಿಕಾರಿಗಳಿಗೆ ಅನುಮಾನ ಉಂಟಾಗಿ ಈಕೆಯನ್ನು ಗಡಿಭಾಗದಲ್ಲಿ ತಡೆಹಿಡಿದಿದ್ದಾರೆ. ತಕ್ಷಣವೇ ಈಕೆಯ ಇಡೀ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ಸ್ಟಾಕಿಂಗ್ಸ್​ನಲ್ಲಿ ಐದು ಜೀವಂತ ಹಾವುಗಳನ್ನು(live snake)ಸುತ್ತಿಕೊಂಡು ತನ್ನ ಎದೆಯ ಭಾಗದಲ್ಲಿ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಹಾವುಗಳನ್ನು ಕಾರ್ನ್​ ಹಾವುಗಳು (Corn Snakes) ಎಂದು ಗುರುತಿಸಲಾಗಿದ್ದು ಸಂಬಂಧಿಸಿದ ಇಲಾಖೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

 

https://twitter.com/globaltimesnews/status/1677941928195952640/photo/1

 

 

ಇದನ್ನು ಓದಿ: U. T. Khader-Araga Jnanendra: ಸ್ವಾರಸ್ಯಕರ ವಿಷ್ಯಕ್ಕೆ ಸಾಕ್ಷಿಯಾಯ್ತು ವಿಧಾನಸೌಧ ; ‘ ನನ್ನ ಕುರ್ಚಿ ವಾಸ್ತು ಸರಿ ಉಂಟಾ ? ’ – ಸ್ಪೀಕರ್ ಖಾದರ್ , ‘ ಡೌಟಾದ್ರೆ ರೇವಣ್ಣನ ಕೇಳಿ ’ ಅಂದ ಅರಗ ! 

You may also like

Leave a Comment