Home » Actor Shah Rukh khan: ನಯನತಾರಾ ಪತಿ ವಿಘ್ನೇಶ್​ ಶಿವನ್​ಗೆ ‘ಹುಷಾರ್’ ಎಂದು ವಾರ್ನಿಂಗ್ ಕೊಟ್ಟ ಶಾರುಖ್ ಖಾನ್ !

Actor Shah Rukh khan: ನಯನತಾರಾ ಪತಿ ವಿಘ್ನೇಶ್​ ಶಿವನ್​ಗೆ ‘ಹುಷಾರ್’ ಎಂದು ವಾರ್ನಿಂಗ್ ಕೊಟ್ಟ ಶಾರುಖ್ ಖಾನ್ !

0 comments
Actor Shah Rukh khan

Actor Shah Rukh khan: ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನ ಮಾಡಿದ ಜವಾನ್ ಸಿನಿಮಾದ ಮೂಲಕ ನಯನತಾರಾ (Actress Nayanathara) ಕೂಡಾ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ (Dipika Padukone) ಹಾಗೂ ನಯನತಾರಾ, ವಿಜಯ್ ಸೇತುಪತಿ (Vijay Setupathi) ಜೊತೆ ನಟಿಸಲಿದ್ದಾರೆ. ಸದ್ಯ ಜವಾನ್ ಸಿನಿಮಾದ ಟೀಸರ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ ಶಾರುಖ್ ಖಾನ್ (Actor Shah Rukh khan) ನಯನತಾರಾ ಪತಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ.

‘ಜವಾನ್’ ಸಿನಿಮಾದಲ್ಲಿ (Jawan Movie) ನಯನತಾರಾ ಅವರು ಆ್ಯಕ್ಷನ್ ಮೆರೆದಿದ್ದಾರೆ. ಈ ವಿಚಾರದಲ್ಲಿ ನಟಿ ನಯನತಾರಾ ಪತಿ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಗೆ ಶಾರುಖ್ ಖಾನ್ ಎಚ್ಚರಿಕೆಯ ಮಾತನ್ನಾಡಿದ್ದಾರೆ. ‘ನಯನತಾರಾ ಬಗ್ಗೆ ಹುಷಾರಾಗಿರಿ’ ಎಂದಿದ್ದಾರೆ.

ವಿಘ್ನೇಶ್ ಶಿವನ್ ಅವರು ಅಟ್ಲಿ, ನಯನತಾರಾ ಹಾಗೂ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಬಗ್ಗೆ ಮೆಚ್ಚುಗೆ ಸೂಚಿಸಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ನ ಸ್ಕ್ರೀನ್​​ಶಾಟ್ ಹಂಚಿಕೊಂಡು ಟ್ವೀಟ್ ಮಾಡಿರುವ ಶಾರುಖ್, “ಎಲ್ಲಾ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅವರು ಅದ್ಭುತ. ಆದರೆ ಅವರ ಬಗ್ಗೆ ನೀವು ಹುಷಾರಾಗಿರಿ. ಅವರು ಈಗ ಕೆಲವು ಪ್ರಮುಖ ಫೈಟ್​ಗಳನ್ನು ಕಲಿತಿದ್ದಾರೆ” ಎಂದು ಶಾರುಖ್ ಬರೆದುಕೊಂಡಿದ್ದಾರೆ.

ಇದಕ್ಕೆ ವಿಘ್ನೇಶ್ ಶಿವನ್, “ಧನ್ಯವಾದಗಳು ಸರ್. ಸಿನಿಮಾದಲ್ಲಿ ನಿಮ್ಮ ಮಧ್ಯೆ ತುಂಬಾ ಒಳ್ಳೆಯ ರೊಮ್ಯಾನ್ಸ್ ಇದೆ ಎಂದು ನಾನು ಕೇಳಿದ್ದೇನೆ. ಇದನ್ನು ಅವಳು ಪ್ರಣಯ ರಾಜನಿಂದ ಕಲಿತಿದ್ದಾಳೆ. ಜವಾನ್ ಸೂಪರ್ ಹಿಟ್ ಆಗಲಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಶಾರುಖ್ ಹಾಸ್ಯಪ್ರಜ್ಞೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ: Dio 125 Scooter: ಬಂದಿದೆ ‘ ಡಿಯೋ 125 ’ ಎಂಬ ಸುನಾಮಿ ಸ್ಕೂಟರ್ ! ಇನ್ನು ಹುಡುಗ್ರಿಗೆ ಬ್ಯಾಕ್ ಸೀಟೇ ಫಿಕ್ಸ್ ! 

You may also like

Leave a Comment