Home » Rajendra Singh Gudha: ಸೀತಾಮಾತೆ ತುಂಬಾ ಸುಂದರಿ, ರಾಮ ರಾವಣ ಆಕೇನ ನೋಡಿ ಪಾಗಲ್ ಆಗಿದ್ರು – ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ !

Rajendra Singh Gudha: ಸೀತಾಮಾತೆ ತುಂಬಾ ಸುಂದರಿ, ರಾಮ ರಾವಣ ಆಕೇನ ನೋಡಿ ಪಾಗಲ್ ಆಗಿದ್ರು – ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ !

by ಹೊಸಕನ್ನಡ
0 comments
Rajendra Singh Gudha

Rajendra Singh Gudha: ಜನಕ ರಾಜನ ಮಗಳು, ಶ್ರೀ ರಾಮನ ಪತ್ನಿ ಸೀತಾದೇವಿ ಅಪ್ರತಿಮ ಸುಂದರಿ, ಹೀಗಾಗಿ ರಾಮ ಮತ್ತು ರಾವಣ ಇಬ್ಬರೂ ಹುಚ್ಚರಂತೆ ಆಕೆ ಹಿಂದೆ ಬಿದ್ದಿದ್ದರು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಮಂತ್ರಿ ಒಬ್ಬರು ನೀಡಿದ್ದಾರೆ.
“ಜನಕ ಸುತೆ ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಲೆಂದರೆ ರಾಮ ಹಾಗೂ ರಾವಣ ಇಬ್ಬರೂ ಆಕೆಯನ್ನೂ ನೋಡಿ ಪಾಗಲ್ ಆಗಿದ್ದರು. ಸೀತೆ aa ರೀತಿಯಲ್ಲಿ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ದೊಡ್ಡ ಯುದ್ಧ ನಡೆದಿತ್ತು ” ಎಂದು ಈ ಕಾಂಗ್ರೆಸ್ ಮಂತ್ರಿಗಳು ತಿಳಿಸಿದ್ದಾರೆ.

ಈ ಹೇಳಿಕೆ ನೀಡಿರುವುದು ಬೇರೆ ಯಾರು ಅಲ್ಲ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ಸೇನಾ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ. ಅವರು ಈಗಾಗಲೇ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರತಿ ಬಾರಿ ಸುದ್ದಿಯಲ್ಲಿರುತ್ತಾರೆ.

ರಾಜಸ್ಥಾನದ ಜುಂಜುನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಸಚಿವ ರಾಜೇಂದ್ರ ಸಿಂಗ್ ಗುಢಾ,(Rajendra Singh Gudha)  ರಾಮ ಮತ್ತು ರಾವಣ ಇಬ್ಬರೂ ಹುಚ್ಚರಂತೆ ಸೀತಾ ಮಾತೆ ಹಿಂದೆ ಬಿದ್ದಿದ್ದರು. ಯಾಕೆಂದರೆ ಜನಕ ರಾಜನ ಪುತ್ರಿ ಸೀತಾ ಮಾತೆ ಅಷ್ಟೊಂದು ಸುಂದರಿಯಾಗಿದ್ದಳು ಎಂದು ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಳು ಎಂದರೆ ರಾಮ ಹಾಗೂ ರಾವಣ ಆಕೆಯನ್ನು ಹಿಂಬಾಲಿಸಿ ಇಷ್ಟ ಪಡುತ್ತಿದ್ದರು. ಸೀತೆ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ಯುದ್ಧ ನಡೆದಿತ್ತು’ ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

” ರಾಮ ರಾವಣ ಇಬ್ಬರೂ ಉತ್ತಮ ವ್ಯಕ್ತಿಗಳು. ಆದರೆ, ಇಬ್ಬರೂ ಕೂಡ ಸೀತಾ ಮಾತೆಯ ಸೌಂದರ್ಯಕ್ಕೆ ಹುಚ್ಚರಾಗಿದ್ದರು. ಸೀತಾ ಮಾತೆ ನಿಜಕ್ಕೂ ಸುಂದರವಾಗಿದ್ದಳು. ಎಷ್ಟು ಸೌಂದರ್ಯ ಅಂತ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ.” ಆ ನಂತರ ಅವರು ತಮ್ಮನ್ನೇ ಸೀತಾ ಮಾತೆಗೆ ಹೋಲಿಸಿಕೊಂಡಿದ್ದಾರೆ. ನನ್ನಲ್ಲಿರುವ ಗುಣಗಳ ಕಾರಣದಿಂದಾಗಿಯೇ ರಾಜಸ್ತಾನ್ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಹಾಗೂ ಸಚಿನ್ ಪೈಲಟ್‌ ಇಬ್ಬರಿಗೂ ನಾನು ಬೇಕಾಗಿದ್ದೇನೆ ಎಂದಿದ್ದಾರೆ ಶಾಸಕ ರಾಜೇಂಧ್ರ ಸಿಂಗ್‌ ಗುಧಾ ಹೇಳಿದ

” ಕಾಂಗ್ರೆಸ್ಸಿಗರು ಹಿಂದೂಗಳನ್ನು, ಅವರ ದೇವರುಗಳನ್ನು ಗೇಲಿ ಮಾಡಲು ಮತ್ತು ಅವರ ಮತ ಬ್ಯಾಂಕ್ ರಾಜಕೀಯವನ್ನು ಇನ್ನಷ್ಟು ಗಟ್ಟಿಮಾಡಲು ಎಷ್ಟು ಬೇಕಾದರೂ ಕೆಳಮಟ್ಟಕ್ಕೆ ಇಳಿಯುತ್ತಾರೆ. ನಮ್ಮ ಆರಾಧ್ಯ ದೈವ ಭಗವಾನ್ ಶ್ರೀರಾಮನ ಮೇಲಿನ ಭಾರತದ ನಂಬಿಕೆಯನ್ನು ಹುಚ್ಚ ಎಂದು ಬಣ್ಣಿಸಿದ್ದಾರೆ. ರಾಜಸ್ಥಾನ ಸರ್ಕಾರದ ಸಚಿವರಿಗೆ ಸ್ವಂತ ಅಸ್ತಿತ್ವದ ಬಗ್ಗೆ ನಾಚಿಕೆಯಾಗಲಿಲ್ಲವೇ? ಇದು ಉದ್ದೇಶಪೂರ್ವಕ ಹೇಳಿಕೆ. ಇಂತಹ ಹೇಳಿಕೆಗಳಿಂದಾಗಿ ಇಂದು ಕಾಂಗ್ರೆಸ್ ಪರಿಸ್ಥಿತಿ ಶೂರ್ಪನಖಿ ಪರಿಸ್ಥಿತಿಗೆ ಬಂದು ತಲುಪಿದೆ” ಎಂದು ಬಿಜೆಪಿ ಕಾಂಗ್ರೆಸ್ ಮತ್ತು ಸಚಿವರ ಮೇಲೆ ಎಗರಾಡಿದೆ.

 

ಇದನ್ನು ಓದಿ: Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ ಟೊಮ್ಯಾಟೋ ಪ್ರಿಯ ಹೆಂಡತಿ ! 

You may also like

Leave a Comment