Home » Accident: ಬೆಳ್ಳಂಬೆಳಗ್ಗೆ ಭೀಕರ ದುರಂತ!! ಮನೆ ಮೇಲೆ ಬಿದ್ದ ಕೋಳಿ ಸಾಗಾಟದ ವಾಹನ-ಗಾಯಾಳುವನ್ನು ಹೊರತೆಗೆಯಲು ಹರಸಾಹಸ

Accident: ಬೆಳ್ಳಂಬೆಳಗ್ಗೆ ಭೀಕರ ದುರಂತ!! ಮನೆ ಮೇಲೆ ಬಿದ್ದ ಕೋಳಿ ಸಾಗಾಟದ ವಾಹನ-ಗಾಯಾಳುವನ್ನು ಹೊರತೆಗೆಯಲು ಹರಸಾಹಸ

0 comments

ಅತೀವೇಗವಾಗಿ ಬಂದ ಕೋಳಿ ಸಾಗಾಟದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಮನೆಯೊಂದರ ಮೇಲೆ ಬಿದ್ದ ಘಟನೆಯೊಂದು ವಿಟ್ಲದ ಪರಿಯಲ್ಲಡ್ಕ-ಸಾರಡ್ಕ ರಸ್ತೆಯ ಕೂರೆಲು ಎಂಬಲ್ಲಿ ನಡೆದಿದೆ.

ಘಟನೆಯಿಂದ ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯೊಳಗೆ ಮಲಗಿದ್ದ ಮಹಿಳೆಯೋರ್ವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುವನ್ನು ಹೊರತೆಗೆಯಲು ಹರಸಾಹಸ ಉಂಟಾಗಿದ್ದು, ನಜ್ಜುಗುಜ್ಜಾದ ವಾಹನವನ್ನು ಮಹಡಿ ಮೇಲಿಂದ ಸರಿಸಿದ ಬಳಿಕವಷ್ಟೇ ಮಹಿಳೆಯನ್ನು ಹೊರತೆಗೆಯಬೇಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಲಕನ ಅತೀ ವೇಗ ಘಟನೆಗೆ ಕಾರಣ ಎನ್ನಲಾಗಿದ್ದು,ನೂರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದೆ ಎಂದು ತಿಳಿದು ಬಂದಿದ್ದು,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

ಇದನ್ನು ಓದಿ: Daily horoscope: ಸಮಾಜದಲ್ಲಿ ಖ್ಯಾತಿ ಹೆಚ್ಚುತ್ತೆ ಈ ರಾಶಿಯವರಿಗೆ! 

You may also like

Leave a Comment