Home » Intresting news: ಆರ್ಮಿಯೇ ಮುಗಿಬಿದ್ದು ಕೊಳ್ಳುವ ಈ ಕಾರಿನ ಪವರ್ ಏನು ಗುರೂ?: 130 ಕುದುರೆ ಶಕ್ತಿಗೂ ಜಗ್ಗದ ಈ ಕಪ್ಪುಕುದುರೆ ಯಾವುದು ಗೊತ್ತಾ ?

Intresting news: ಆರ್ಮಿಯೇ ಮುಗಿಬಿದ್ದು ಕೊಳ್ಳುವ ಈ ಕಾರಿನ ಪವರ್ ಏನು ಗುರೂ?: 130 ಕುದುರೆ ಶಕ್ತಿಗೂ ಜಗ್ಗದ ಈ ಕಪ್ಪುಕುದುರೆ ಯಾವುದು ಗೊತ್ತಾ ?

by ಹೊಸಕನ್ನಡ
1 comment

Intresting news: ಭಾರತೀಯ ಆರ್ಮಿ ಕೂಡಾ ಮುಗಿಬಿದ್ದು ಕೊಳ್ಳುತ್ತಿದೆ ಈ ಒಂದು ಕಾರನ್ನು, ಅಬ್ಬಾ, ಏನು ಪವರ್ ? 130 ಕುದುರೆಗಳು ಜಗ್ಗಿದರೂ ಎಳೆದುಕೊಂಡು ಹೋಗಬಲ್ಲ ಈ ಕಾರ್ ಯಾವುದು ಗೊತ್ತಾ ?

ನಿಮಗೆಲ್ಲಾ ಗೊತ್ತೇ ಇದೆ, ಭಾರತೀಯರಲ್ಲಿ ನಿಧಾನಕ್ಕೆ ಆದರೂ, ಬಲವಾಗಿ ಈಗ ಸುರಕ್ಷತಾ ಪ್ರಜ್ಞೆ ಹೆಚ್ಚುಹೆಚ್ಚು ಮೂಡಿ ಬರುತ್ತಿದೆ. ಅದಕ್ಕೆ ತಕ್ಕಂತೆ ಭಾರತೀಯರು ಸುರಕ್ಷತೆಯುಳ್ಳ ಗಟ್ಟಿಮುಟ್ಟಾದ ವಾಹನಗಳನ್ನು ಕೊಳ್ಳಲು ಬಯಸುತ್ತಿದ್ದಾರೆ. ಈ ಹಿಂದೆ ಫೋರ್ಡ್ ಮುಂತಾದ ಕಂಪನಿಗಳು ಮಾತ್ರ ಒಳ್ಳೆಯ ಬಿಲ್ಡ್ ಕ್ವಾಲಿಟಿ ಉಳ್ಳ ಕಾರುಗಳನ್ನು ತಯಾರಿಸುತ್ತಿದ್ದರೆ, ಇದೀಗ ಅವಕ್ಕೆ ಸಡ್ಡು ಹೊಡೆಯುವಂತೆ ಟಾಟಾ ಮೋಟಾರ್ಸ್ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಸ್ಪರ್ಧೆಗೆ ಬಿದ್ದು ಗಟ್ಟಿಯಾದ ಬಿಲ್ಡ್ ಕ್ವಾಲಿಟಿ ಕಾರುಗಳನ್ನು ತಯಾರಿಸಿ ನೀಡಲು ತೊಡಗಿವೆ. ಈಗ ಮಹಿಂದ್ರ ಕಂಪನಿಯ ಕಾರು ಒಂದರ ಮೇಲೆ ಭಾರತೀಯ ಸೈನ್ಯದ ಕಣ್ಣು ಬಿದ್ದಿದೆ.

ಹೌದು ಭಾರತೀಯ ಸೈನ್ಯಕ್ಕೆ ದೊಡ್ಡ ಶಕ್ತಿಯಾಗಿ ಸೇರಲಿದೆ ಇದೊಂದು ಕಾರು. ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯ ಉಕ್ಕಿನಿಂದ ನಿರ್ಮಿಸಲಾದ ಸೈನ್ಯದ ಟ್ಯಾಂಕ್ ನಂತೆ ಬಲಿಷ್ಠವಾದ ಈ ಕಾರು ಇದೀಗ ಸೈನ್ಯದ ಗಮನ ಸೆಳೆದಿದೆ. ಅದುವೇ ಮಹಿಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ !

ಸ್ಕಾರ್ಪಿಯೋ ಕ್ಲಾಸಿಕ್‌ನ 1,850 ಯುನಿಟ್‌ಗಳ ಭಾರತೀಯ ಸೇನೆಯಿಂದ ಆದೇಶವನ್ನು ಸ್ವೀಕರಿಸಿರುವುದಾಗಿ ಮಹೀಂದ್ರಾ ಮತ್ತು ಮಹೀಂದ್ರಾ ಘೋಷಿಸಿದೆ. ಇದಕ್ಕೂ ಮೊದಲು, ಭಾರತೀಯ ಸೇನೆಯು ಕಳೆದ ಜನವರಿಯಲ್ಲಿ ಸ್ಕಾರ್ಪಿಯೋ ಕ್ಲಾಸಿಕ್‌ನ 1,470 ಯುನಿಟ್‌ಗಳ ಆರ್ಡರ್ ಅನ್ನು ನೀಡಿತ್ತು. ಭಾರತೀಯ ಸೇನೆಯ 12 ಘಟಕಗಳಿಗೆ ಎಸ್‌ಯುವಿಗಳನ್ನು ನಿಯೋಜಿಸಬೇಕಿತ್ತು. ಸ್ಕಾರ್ಪಿಯೋ ಕ್ಲಾಸಿಕ್ ಸ್ಕಾರ್ಪಿಯೋದ ನವೀಕರಿಸಿದ ಆವೃತ್ತಿಯಾಗಿದ್ದು ಇದೀಗ ಅತ್ಯಂತ ಬಲಿಷ್ಠ ವಾಹನಗಳ ಹುಡುಕಾಟದಲ್ಲಿರುವ ಭಾರತೀಯ ಆರ್ಮಿ ಕೊನೆಗೂ ಮಹೀಂದ್ರ ಕಂಪನಿಯ ಉಕ್ಕಿನ ಶಕ್ತಿಯ ವಾಹನದ ಆರ್ಡರ್ ಫೈನಲ್ ಗೊಳಿಸಿದೆ.

ಮಹೀಂದ್ರಾ ಕಂಪೆನಿ ತನ್ನ ಬ್ರ್ಯಾಂಡ್ ಹೊಸ ಸ್ಕಾರ್ಪಿಯೋ ಎನ್ ಅನ್ನು ಸಹ ಮಾರಾಟ ಮಾಡುತ್ತಿದೆ. ಇದು ಆಲ್ ನ್ಯೂ ಮಾದರಿಯಾಗಿದೆ. ಭಾರತೀಯ ಸೇನೆಯು ಈಗಾಗಲೇ ಟಾಟಾ ಸಫಾರಿ, ಟಾಟಾ ಕ್ಸೆನಾನ್, ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಪ್ಸಿ ಇತ್ಯಾದಿಗಳನ್ನು ಬಳಸುತ್ತಿದೆ. ಸ್ಕಾರ್ಪಿಯೋ ಕ್ಲಾಸಿಕ್ ಸೇರ್ಪಡೆಯು ಭಾರತೀಯ ಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

ಮಹೀಂದ್ರಾ 4×4 ಪವರ್‌ಟ್ರೇನ್‌ನೊಂದಿಗೆ ಸ್ಕಾರ್ಪಿಯೋ ಕ್ಲಾಸಿಕ್‌ ಅನ್ನು ಸಜ್ಜುಗೊಳಿಸಿದೆ ಎನ್ನಲಾಗಿದೆ. ಇದರರ್ಥ ಡ್ಯೂಟಿಯಲ್ಲಿರುವ ಎಂಜಿನ್ ಸುಮಾರು 140 ಅಶ್ವ ಶಕ್ತಿಯನ್ನು ಉತ್ಪಾದಿಸುವ 2.2-ಲೀಟರ್ ಎಂಜಿನ್‌ನ ಹಿಂದಿನ ಪೀಳಿಗೆಯದ್ದು.
ಈ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಪ್ರಸ್ತುತ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ ಅದು 130 ಅಶ್ವಶಕ್ತಿ ಮತ್ತು 300 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ 6 ಸ್ಪೀಡ್ ಗೇರ್‌ ಬಾಕ್ಸ್ ಬಳಸಿದ್ದು, ಸ್ಕಾರ್ಪಿಯೊ ಕ್ಲಾಸಿಕ್‌ನೊಂದಿಗೆ ಯಾವುದೇ ಸ್ವಯಂಚಾಲಿತ ಪ್ರಸರಣ ಅಂದರೆ ಗೇರ್ ಲೆಸ್ ವರ್ಷನ್ ಇಲ್ಲ.

 

You may also like

Leave a Comment