Leopard: ಧೈರ್ಯ ಅಂದ್ರೆ ಇದಪ್ಪಾ, ಚಿರತೆಯನ್ನು ಇಲ್ಲೊಬ್ಬ ಮೂಟೆ ಕಟ್ಟಿ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಮನುಷ್ಯರು ಚಿರತೆಯನ್ನು ನೋಡಿದರೆ ಗಡ ಗಡ ನಡುಗುತ್ತಾರೆ. ಆದರೆ ಇಲ್ಲೊಬ್ಬ ಹೊಲದಲ್ಲಿ ಕಣ್ಣಿಗೆ ಬಿದ್ದ ಚಿರತೆಯನ್ನು ತಾನೇ ಸೆರೆ ಹಿಡಿದು, ತನ್ನದೇ ಬೈಕಿನಲ್ಲಿ ಕಟ್ಟಿ ಸಾಗಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ಮಾಹಿತಿ ಬೆಳಕಿಗೆ ಬಂದಿದೆ.
ಹೌದು, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮದಲ್ಲಿ ವೇಣು ಗೋಪಾಲ್ ಉರುಫ್ ಮುತ್ತು ಎಂಬ ವರು ಶುಕ್ರವಾರ ಬೆಳಗ್ಗೆ ಜಮೀನಿಗೆ ಹೋಗಿದ್ದಾಗ ಚಿರತೆ ಕಾಣಿಸಿ ಕೊಂಡಿತ್ತು.
ಎದೆಗುಂದದೆ ಹರಸಾಹಸಪಟ್ಟು ಚಿರತೆಯನ್ನು ಹಿಡಿದು ಅದರ ಕಾಲು ಗಳನ್ನು ಕಟ್ಟಿಹಾಕಿದರು. ಆದರೆ ಮರಿ ಚಿರತೆ ಯಾಗಿದ್ದು, ಅಸ್ವಸ್ಥವಾಗಿದ್ದ ಚಿರತೆಯನ್ನು ವೇಣುಗೋಪಾಲ್ ತಮ್ಮ ಬೈಕಿನ ಹಿಂಬದಿಗೆ ಕಟ್ಟಿಕೊಂಡು, ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಇವರ ಸಾಹಸ ಮೆಚ್ಚಲೇ ಬೇಕು.
