China: ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳನ್ನು ಚೀನಾ (China) ಗಲ್ಲಿಗೇರಿಸಿದೆ. ಅಷ್ಟಕ್ಕೂ ಗಲ್ಲಿಗೇರಿಸುವಂತ ದೊಡ್ಡ ತಪ್ಪು ಆಕೆ ಏನು ಮಾಡಿದ್ದಳು?!. ಆಕೆಯನ್ನು ಗಲ್ಲಿಗೆ ಹಾಕಿರುವ ಹಿಂದೆ ಬಲವಾದ ಕಾರಣ ಇದೆ.
ಶಿಕ್ಷಕಿ ವಾಂಗ್ ಯುನ್ (39) ತನ್ನ ಸಹೋದ್ಯೋಗಿ ಜೊತೆಯಲ್ಲಿ ಜಗಳವಾಡಿದ್ದಳು. ಜಗಳದ ಕೋಪವನ್ನು ಮನಸ್ಸಲ್ಲೇ ಇಟ್ಟುಕೊಂಡು ಸೇಡು ತೀರಿಸಿಕೊಂಡಿದ್ದಾಳೆ. ಅದಕ್ಕಾಗಿ ವಾಂಗ್ ತನ್ನ ಸಹೋದ್ಯೋಗಿಯ ವಿದ್ಯಾರ್ಥಿಗಳ ಉಪಹಾರವನ್ನು ಸೋಡಿಯಂ ನೈಟ್ರೈಟ್‌ನೊಂದಿಗೆ ಕಲಬೆರಕೆ ಮಾಡಿದ್ದಾಳೆ. ಬರೋಬ್ಬರಿ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಹಾಗೂ ಒಬ್ಬರನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ಇದೀಗ ಆರೋಪಿಗೆ ಗಲ್ಲುಶಿಕ್ಷೆಯಾಗಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಯಾರುವೊದಲ್ಲಿನ ಮೆಂಗ್‌ಮೆಂಗ್ ಪ್ರೀ ಸ್ಕೂಲ್ ಶಿಕ್ಷಣದ ಯುವ ವಿದ್ಯಾರ್ಥಿಗಳಿಗೆ ವಿಷ ನೀಡಿದ ಆರೋಪದ ಅಡಿಯಲ್ಲಿ ವಾಂಗ್ ಯುನ್ ಬಂಧಿಯಾಗಿದ್ದಳು. ಪ್ರಕರಣ ಸಂಬಂಧಿಸಿ ಆರೋಪಿ ಶಿಕ್ಷಕಿಗೆ ಹೆನಾನ್ ಪ್ರಾಂತ್ಯದ ಜಿಯಾಜುವೋ ನಗರದ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿದೆ.
