Home » Rahul Dravid: ಶೀ…!! ತನ್ನ ತಾಯಿಗೆ ಮುಖ ತೋರಿಸಲಾಗದ ಕೆಲಸ ಮಾಡಿದ್ದರು ರಾಹುಲ್ ದ್ರಾವಿಡ್, ಏನದು ಗೊತ್ತೇ ?

Rahul Dravid: ಶೀ…!! ತನ್ನ ತಾಯಿಗೆ ಮುಖ ತೋರಿಸಲಾಗದ ಕೆಲಸ ಮಾಡಿದ್ದರು ರಾಹುಲ್ ದ್ರಾವಿಡ್, ಏನದು ಗೊತ್ತೇ ?

4 comments
Rahul Dravid

Rahul Dravid: ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ರಾಹುಲ್‌ ದ್ರಾವಿಡ್‌ ಅವರನ್ನು ಜಂಟಲ್‌ಮನ್ ಕ್ರಿಕೆಟರ್ ಎಂದೇ ಕರೆಯಲಾಗುತ್ತದೆ. ತಮ್ಮ ಉತ್ತಮ ಸ್ವಭಾವದ ಮೂಲಕವೇ ಜನರನ್ನು ಹೆಚ್ಚು ಗಮನ ಸೆಳೆದಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯೇ ಇರಲಿ, ಮೈದಾನದೊಳಗಾಗಲಿ ಅಥವಾ ಮೈದಾನದಾಚೆಗಾಗಲಿ ದ್ರಾವಿಡ್‌ ತಾಳ್ಮೆ ಕಳೆದುಕೊಂಡವರಲ್ಲ.

ಓರ್ವ ಸ್ಟಾರ್ ಕ್ರಿಕೆಟಿಗ, ಬಿಸಿಸಿಐ ಎನ್ನುವ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಹೆಡ್‌ಕೋಚ್ ರಾಹುಲ್ ದ್ರಾವಿಡ್‌ (Rahul Dravid) , ಆಗಿದ್ದರೂ ಸಹಾ ರಾಹುಲ್ ಅತ್ಯಂತ ಸರಳ ಜೀವನ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ತಾವು ಮಾಡಿದ ಕೆಲವೊಂದು ವರ್ತನೆಯಿಂದ ತಮ್ಮ ತಾಯಿಗೂ ಮುಖ ತೋರಿಸಲು ನಾಚಿಕೆಪಟ್ಟ ಘಟನೆಯನ್ನು ದಾ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹಂಚಿಕೊಂಡಿದ್ದಾರೆ.

ಆಟದಲ್ಲಿ ಕೆಲವೊಮ್ಮೆ ರಾಹುಲ್ ದ್ರಾವಿಡ್‌ ಆಕ್ರಮಣಕಾರಿ ಪ್ರದರ್ಶನ ತೋರಿರಬಹುದು ಆದರೆ, ವ್ಯಕ್ತಿಗತವಾಗಿ ದ್ರಾವಿಡ್‌ ಆ ರೀತಿಯಿಲ್ಲ. ಆದರೆ ದ್ರಾವಿಡ್ ಒಮ್ಮೆ ರಸ್ತೆಯಲ್ಲಿ ಕಾರಿನೊಳಗೆ ಇದ್ದುಕೊಂಡು, ಅಕ್ಕಪಕ್ಕ ಜನರ ಮೇಲೆ ಕೂಗಾಡಿ, ಕಾರಿನ ಗಾಜು ಒಡೆದ ದೃಶ್ಯಾವಳಿಗಳನ್ನು ಅವರ ತಾಯಿಗೆ ನಂಬಲೂ ಸಾಧ್ಯವಾಗಿರಲಿಲ್ಲವಂತೆ..!

ಹೌದು, ರಾಹುಲ್ ದ್ರಾವಿಡ್, ಅಭಿನಯಿಸಿದ ಜಾಹಿರಾತೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಜಾಹಿರಾತಿಯಲ್ಲಿ ಯಾವಾಗಲೂ ಶಾಂತ ರೀತಿಯಲ್ಲಿರುವ ರಾಹುಲ್ ದ್ರಾವಿಡ್‌, ಅತ್ಯಂತ ಸಿಟ್ಟಾಗಿರುವಂತೆ ನಟಿಸಿದ್ದರು.

ಕಾರಿನಲ್ಲಿ ಕುಳಿತು ಜಾಹಿರಾತಿನಲ್ಲಿ ನಟಿಸುವ ವೇಳೆ ರಾಹುಲ್ ದ್ರಾವಿಡ್‌, ಅಕ್ಕಪಕ್ಕದಲ್ಲಿರುವವರ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿ ಕೂಗಾಡುತ್ತಿದ್ದರು. ಇದಷ್ಟೇ ಅಲ್ಲದೇ ಕಾರಿನ ಗಾಜನ್ನು ಒಡೆದು ಹಾಕಿ ನಾನು ಇಂದಿರಾನಗರದ ಗೂಂಡಾ ಎಂದು ದ್ರಾವಿಡ್ ಕೂಗಾಡುತ್ತಾರೆ.

ಇದನ್ನು ನೋಡಿದ ರಾಹುಲ್ ದ್ರಾವಿಡ್ ಅವರ ತಾಯಿ, ದ್ರಾವಿಡ್ ನಟಿಸಿದ ಜಾಹಿರಾತು ಮೆಚ್ಚಿಕೊಂಡಿರಲಿಲ್ಲ ಎನ್ನುವ ಸತ್ಯವನ್ನು ಸ್ವತಃ ಟೀಂ ಇಂಡಿಯಾ ಹೆಡ್‌ಕೋಚ್ ಬಾಯ್ಬಿಟ್ಟಿದ್ದಾರೆ.

“ನನ್ನಮ್ಮ ನಾನು ಇಂದಿರಾನಗರದ ಗೂಂಡಾ ಜಾಹಿರಾತಿನ ಬಗ್ಗೆ ಸಹಮತಿ ಹೊಂದಿರಲಿಲ್ಲ. ನಾನು ಕಾರಿನ ಗಾಜು ಒಡೆಯುವ ದೃಶ್ಯಗಳು ಅವರಿಗೆ ಇಷ್ಟವಾಗಿರಲಿಲ್ಲ. ಈ ಘಟನೆಯು ನನ್ನ ಜೀವನದ ಅತ್ಯಂತ ನಾಚಕೀಯ ಘಟನೆಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.

ಈ ಜಾಹಿರಾತು ಮುಂಬೈನ ರಸ್ತೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಈ ಕುರಿತಂತೆ, “ಜನಗಳ ನಡುವೆ ಮುಂಬೈನ ರಸ್ತೆಯಲ್ಲಿ ಈ ರೀತಿ ಅರಚಾಡಿದ್ದು, ಸ್ವತಃ ನನಗೆ ಒಂದು ರೀತಿ ನಾಚಿಕೆಯಾಗುವಂತೆ ಮಾಡಿತು. ನನ್ನ ಅಕ್ಕಪಕ್ಕದಲ್ಲಿರುವ ಜನರಿಗೆ ನಾನು ನಟನೆ ಮಾಡುತ್ತಿದ್ದೇನೆ ಎಂದು ಗೊತ್ತಿತ್ತು. ಆದರೂ ಕೂಡಾ ನನಗೆ ಅದು ಸರಿ ಎನಿಸಲಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಒಟ್ಟಿನಲ್ಲಿ “ಅಮ್ಮ ನಿಜವಾಗಿಯೂ ಮನವರಿಕೆ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಆ ಗಾಜನ್ನು ಒಡೆದು ಹಾಕಬಾರದಿತ್ತು ಎಂದು ಆಕೆ ಈಗಲೂ ನಂಬಿದ್ದಾಳೆ,’’ ಎಂದು ದ್ರಾವಿಡ್ ಹೇಳಿದ್ದಾರೆ.

ಇದನ್ನೂ ಓದಿ: D K Shivkumar: ಮುಂದಿನ 2.5 ವರ್ಷ ಡಿಕೆಶಿ ಮುಖ್ಯಮಂತ್ರಿ ಇಲ್ಲ ! ದೇಶಪಾಂಡೆ ಹೇಳಿಕೆ ಬೆನ್ನಲ್ಲೇ ಒಪ್ಪಿಕೊಂಡ್ರಾ ಡಿಕೆಶಿ ?!

You may also like

Leave a Comment