2
R Ashok: ಲೋಕಸಭೆ ಚುನಾವಣೆ ಎದುರಿಸಲು ಈಗಾಗಲೇ ಪಕ್ಷದಲ್ಲಿ ಹಲವಾರು ತಂತ್ರ ಮಹಾತಂತ್ರ ನಡೆಯುತ್ತಿವೆ. ಈ ಕುರಿತಾಗಿ ಮಾಜಿ ಸಚಿವ ಆರ್.ಅಶೋಕ್ (R Ashok) ಅವರು ವಿಪಕ್ಷ ನಾಯಕರ ಮಹಾಮೈತ್ರಿಕೂಟ ಸಭೆ ಕುರಿತು ಟೀಕೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ವಿಪಕ್ಷಗಳ ನಾಯಕರು ಎರಡು ದಿನ ಸಭೆ ನಡೆಸೋದು ಕೇವಲ ಫೋಟೋ ಶೋಗೆ, ಎಲ್ಲರೂ ಕೈ ಮೇಲೆತ್ತಿ ಫೋಟೋಗೆ ಪೋಸ್ ಕೊಡ್ತಾರೆ ಅಷ್ಟೇ.
2 ದಿನ ಫೋಟೋ ಶೂಟ್ ಬಿಟ್ರೆ ಏನೂ ಆಗಲ್ಲ ಎಂದು ಹೇಳಿದ್ದಾರೆ.
ಅದಲ್ಲದೆ ವಿಪಕ್ಷಗಳ ನಾಯಕರಿಗೆ ಯಾರಿಗೂ ಒಂದು ಸಿದ್ಧಾಂತಗಳೇ ಇಲ್ಲ. ರಾಜ್ಯಗಳಲ್ಲಿ ಒಬ್ಬರಿಗೊಬ್ಬರು ಬಡಿದಾಡುತ್ತಿದ್ದಾರೆ. 2 ದಿನ ಫೋಟೋ ಶೋ ಬಿಟ್ರೆ ಏನೂ ಆಗಲ್ಲ.
ವಿಪಕ್ಷನಾಯಕರಿಗೆ ಪ್ರಧಾನಿ ಮೋದಿ ಅವರೇ ಟಾರ್ಗೆಟ್, ದೇಶದ ಅಭಿವೃದ್ಧಿ ವಿಪಕ್ಷ ನಾಯಕರಿಗೆ ಬೇಕಾಗಿಲ್ಲ. ಪ್ರಧಾನಿ ಮೋದಿ ಈ ದೇಶದ ಅಭಿವೃದ್ಧಿ ಪರವಾಗಿದೆ, ದೇಶದ ಜನರು ಮೋದಿ ಅವರ ಜೊತೆಗಿದ್ದಾರೆ ಎಂಬುದಷ್ಟೇ ಅವರ ನಿಲುವು ಎಂದಿದ್ದಾರೆ.
