Home » Sitara Ghattamaneni: 11 ವರ್ಷದ ಈ ಹುಡುಗಿಯ ಮೊದಲ ಸಂಬಳ ಕೇಳಿದ್ರೆ ನೀವ್ ಉರ್ಕೊಳ್ಳದೆ ಇರಲು ಸಾಧ್ಯವೇ ಇಲ್ಲ !

Sitara Ghattamaneni: 11 ವರ್ಷದ ಈ ಹುಡುಗಿಯ ಮೊದಲ ಸಂಬಳ ಕೇಳಿದ್ರೆ ನೀವ್ ಉರ್ಕೊಳ್ಳದೆ ಇರಲು ಸಾಧ್ಯವೇ ಇಲ್ಲ !

0 comments
Sitara Ghattamaneni

Sitara Ghattamaneni: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಕೇವಲ 11 ವರ್ಷನೇ ವರ್ಷಕ್ಕೆ ಸಖತ್ ಫೇಮಸ್ ಆಗಿದ್ದಾರೆ. ಸಿತಾರಾ ಖ್ಯಾತ ಆಭರಣ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ಮಾಡೆಲಿಂಗ್ ಜಗತ್ತಿಗೆ ಚಿಕ್ಕ ವಯಸ್ಸಿನಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಈಕೆ ಈ ಆಭರಣ ಬ್ರಾಂಡ್‌ನ ಮಾಡೆಲ್ ಆಗಲು ಪಡೆದ ಸಂಭಾವನೆ ಎಷ್ಟು ಗೊತ್ತಾ? 11 ವರ್ಷದ ಈ ಹುಡುಗಿಯ ಮೊದಲ ಸಂಬಳ ಕೇಳಿದ್ರೆ ನೀವ್ ಉರ್ಕೊಳ್ಳದೆ ಇರಲು ಸಾಧ್ಯವೇ ಇಲ್ಲ !

ನಮ್ರತಾ ಶಿರೋಡ್ಕರ್ ಮತ್ತು ಸೌತ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಪುತ್ರಿ ಸಿತಾರಾ ಘಟ್ಟಮನೇನಿ ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ‘ಸ್ಟಾರ್ ಕಿಡ್’ ಸಿತಾರಾ ಕಾಣಿಸಿಕೊಂಡಿರುವ ಆಭರಣದ ಜಾಹೀರಾತುಗಳು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಪ್ರದರ್ಶನಗೊಂಡಿದೆ. ಇದಕ್ಕಾಗಿ ಸಿತಾರಾ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ವಿಶೇಷ ಏನಪ್ಪಾ ಅಂದ್ರೆ ಸಿತಾರ ಎಲ್ಲರಿಗೂ ಅಚ್ಚರಿ ಹಾಗೂ ಸಂತಸ ತರುವ ರೀತಿ ನಡೆದುಕೊಂಡಿದ್ದಾರೆ. ಹೌದು, ಈಕೆ ಸಂಭಾವನೆಯಾಗಿ ಪಡೆದ 1 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ. ಜಾಹೀರಾತಿನಿಂದ ಸಿಕ್ಕ ಹಣವನ್ನು ಚಾರಿಟಿಗೆ ದಾನ ಮಾಡುವ ಮೂಲಕ ಸಿತಾರಾ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ಚಿಕ್ಕ ವಯಸ್ಸಿನಲ್ಲೇ ಜಾಹೀರಾತಿಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಪಡೆದವರ ಸಾಲಿನಲ್ಲಿ ಸಿತಾರಾ ಮೊದಲ ಸ್ಥಾನದಲ್ಲಿದ್ದಾರೆ.

ಸೂಪರ್ ಸ್ಟಾರ್ ಮಹೇಶ್ ಅವರು ಕೂಡ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಎರಡು ಗ್ರಾಮಗಳನ್ನು ದತ್ತು ಪಡೆದುಕೊಂಡು, ಅವುಗಳ ಅಭಿವೃದ್ಧಿ ಮಾಡಿದ್ದರು. ಅಲ್ಲದೆ, ಹಲವಾರು ಬಡ ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಯನ್ನು ಕೂಡ ಮಹೇಶ್ ಬಾಬು ಮಾಡಿಸುತ್ತಿದ್ದಾರೆ. ಇದೀಗ ಅವರ ಮಗಳು ಕೂಡ ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಯೊಂದಕ್ಕೆ ದೇಣಿಗೆ ನೀಡಿದ್ದು, ಮೆಚ್ಚುಗೆಗೆ ಕಾರಣವಾಗಿದೆ.

 

ಇದನ್ನು ಓದಿ: Reverse Your Age: ಈ ಕಾಕ್ ಟೈಲ್ ಕುಡಿದ್ರೆ ಸಾಕು ಚಿರ ಯೌವನ ಖಚಿತ | ಹಾರ್ವರ್ಡ್ ಡಿಸ್ಕವರಿ ತಂದಿದೆ ಹೊಸ ಕೆಮಿಕಲ್ ಶೇಕ್ !

You may also like

Leave a Comment