Shakti Yojane effect: ಟೋಲ್ ಕಟ್ಟಲು ದುಡ್ಡಿಲ್ಲದೆ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಕೆಎಸ್ಆರ್ಟಿಸಿ ಬಸ್ ವಾಪಸ್ !
ಟೋಲ್ ಕಟ್ಟಲು ದುಡ್ಡಿಲ್ಲದೆ ಕೆಎಸ್ಆರ್ಟಿಸಿ ಬಸ್ ಒಂದು ‘ಬಂದ ದಾರಿಗೆ ಸುಂಕ ಇಲ್ಲ’ ಎಂಬಂತೆ ವಾಪಸ್ ಬಂದ ಘಟನೆ ನಡೆದಿದೆ. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಕಟ್ಟಲಾಗದೇ KSRTC ಬಸ್ ಒನ್ ವೇಯಲ್ಲಿ ವಾಪಸ್ಸಾಗಿರುವ ಘಟನೆ ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ನಡೆದಿದೆ.
ಸಾರಿಗೆ ಬಸ್ ಮೈಸೂರಿನಿಂದ ಬೆಂಗಳೂರಿಗೆ ಹೊರಟ್ಟಿತ್ತು.ಕೆಎ 10 ಎಫ್, 0492 ನಂಬರ್‌ನ ಈ ಬಸ್ ಫಾಸ್ಟ್ ಟ್ಯಾಗ್ ಇಲ್ಲದ ಕಾರಣ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ಬಳಿಕ, ದುಪ್ಪಟ್ಟು ಹಣ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಹಣ ಕಟ್ಟದೇ ಬಸ್ ಚಾಲಕ ಹಾಗೂ ನಿರ್ವಾಹಕ ಒನ್ ವೇಯಲ್ಲೇ ಮೈಸೂರು ಕಡೆಗೆ ಮರಳಿದ್ದಾನೆ.
ಮರಳಿ ಬರಲು ಅಲ್ಲಿ ದಾರಿ ಇಲ್ಲದ ಕಾರಣ ಚಾಲಕನು ಟೋಲ್‍ನಿಂದ ಬಿಡದಿಯ ಹನುಮಂತನಗರದವರೆಗೂ ಸುಮಾರು 2 ಕೀ.ಮೀ ಬಸ್ ಒನ್ ವೇಯಲ್ಲೇ ಸಂಚರಿಸಿ, ಆ ಬಳಿಕ ಸರ್ವಿಸ್ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ. ಈ ಹೂವಿನ ಅಲಂಕಾರಗಳಿಂದ ಶೃಂಗಡಿಸಿದ್ದು ಅದು ಯಾವುದೋ ಶುಭ ಕಾರ್ಯಕ್ಕೆ ಹೊರಟಿರಬಹುದು ಎನ್ನಲಾಗಿದೆ.
ಇದೀಗ ಈ ಬಸ್ಸು ಒನ್‍ವೇಯಲ್ಲಿ ಸಂಚರಿಸುವ ದೃಶ್ಯವು ವಾಹನ ಸವಾರರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಾಗರೂಕತೆ ತೋರಿಸಿರುವ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿಧ್ವಂಸಕ, ಕೃತ್ಯ: 5 ಜನ ಅರೆಸ್ಟ್, ಸ್ಫೋಟಕ ವಶ !
