Home » Bank Selling Homes: ಆಫರ್ ಬೆಲೆಯಲ್ಲಿ ಮನೆ ಖರೀದಿಸೊ ಪ್ಲಾನ್ ಉಂಟಾ ? ನ್ಯಾಷನಲ್ ಬ್ಯಾಂಕ್ ಮಾಡುತ್ತೆ ನೇರ ಮಾರಾಟ !

Bank Selling Homes: ಆಫರ್ ಬೆಲೆಯಲ್ಲಿ ಮನೆ ಖರೀದಿಸೊ ಪ್ಲಾನ್ ಉಂಟಾ ? ನ್ಯಾಷನಲ್ ಬ್ಯಾಂಕ್ ಮಾಡುತ್ತೆ ನೇರ ಮಾರಾಟ !

0 comments
Bank Selling Homes

Punjab National Bank : ನಿವೇನಾದರೂ ಮನೆ, ಜಾಗ ಖರೀದಿಸುವ ಯೋಚನೆಯಲ್ಲಿದ್ದರೆ ನಿಮಗಿದೋ ಗುಡ್ ನ್ಯೂಸ್ ಇಲ್ಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಮಾರಾಟ ಮಾಡುತ್ತಿದೆ. ಹಾಗಾಗಿ ನೀವು ಅಗ್ಗದ ದರದಲ್ಲಿ ಮನೆ ಖರೀದಿಸಬಹುದು.

ಈ ಬಗ್ಗೆ ಟ್ವೀಟ್ ಮಾಡಿರುವ PNB, ಮೆಗಾ ಇ-ಹರಾಜು ಮೂಲಕ ನಿಮ್ಮ ಕನಸಿನ ಆಸ್ತಿಯನ್ನು ಖರೀದಿಸಬಹುದು. 12022 ಮನೆಗಳು, 2313 ಅಂಗಡಿಗಳು, 1171 ಕೈಗಾರಿಕಾ ಆಸ್ತಿಗಳು ಮತ್ತು 103 ಕೃಷಿ ಭೂಮಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ. ಇಂದು ಅಂದರೆ ಜುಲೈ 20 ರಂದು ಅಗ್ಗದ ದರದಲ್ಲಿ ಮನೆ ಖರೀದಿಸಲು ಬಿಡ್ ಮಾಡಬಹುದಾಗಿದೆ.

ಈ ಮೆಗಾ ಇ-ಹರಾಜನ್ನು SARFAESI ಕಾಯಿದೆ ಅಡಿಯಲ್ಲಿ ಮಾಡಲಾಗುತ್ತಿದೆ. ಬ್ಯಾಂಕ್ ನಿಂದ ಸಾಲ ಪಡೆದು ಮರುಪಾವತಿ ಮಾಡದವರ ಜಮೀನು ಅಥವಾ ನಿವೇಶನವನ್ನು ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುತ್ತದೆ. ಈ ರೀತಿಯ ಆಸ್ತಿಯನ್ನು ಬ್ಯಾಂಕ್‌ಗಳು ಕಾಲಕಾಲಕ್ಕೆ ಹರಾಜು ಮಾಡಿ, ಬ್ಯಾಂಕ್ ತನ್ನ ಬಾಕಿ ಮೊತ್ತವನ್ನು ಮರುಪಡೆಯುತ್ತದೆ. ಈ ಹರಾಜಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://ibapi.in/ ಗೆ ಭೇಟಿ ನೀಡಬಹುದಾಗಿದೆ.

 

ಇದನ್ನು ಓದಿ: Viral News: ಮದುವೆ ಮನೆಗೆ ಏಕಾಏಕಿ ನುಗ್ಗಿದ ಆನೆಗಳ ಹಿಂಡು, ಬೈಕ್‌’ನಲ್ಲಿ ವಧು ಕೂರಿಸಿಕೊಂಡು ಮದುಮಗ ಎಸ್ಕೇಪ್ ! 

You may also like

Leave a Comment