ಕಾಂಗ್ರೆಸ್ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮಹಿಳೆಯರು ಬಹುದೊಡ್ಡ ಶಕ್ತಿ ತುಂಬಿದ್ದಾರೆ. ಇದೀಗ ಮಹಿಳಾ ಮಣಿಗಳು ಶಕ್ತಿ ಯೋಜನೆಯ ಬರಪೂರ ಲಾಭವನ್ನು ಪಡೆದುಕೊಳ್ಳುತ್ತಿದ್ದು ಪ್ರಯಾಣ ಶುರು ಬಿಟ್ಟು ಯೋಜನೆಯನ್ನು ಯಶಸ್ವಿಗೊಳಿಸಿದ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಈ ಯೋಜನೆಯ ಫಲಶ್ರುತಿಯಾಗಿ ಬಡ ಆಟೋ ಡ್ರೈವರ್ ಗಳು ಕ್ಯಾಬ್ ಗಳು ವ್ಯಾಪಾರಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಈ ಆಟೋ ಮತ್ತು ಕ್ಯಾಬ್ ಚಾಲಕರು ಬೀದಿಗೆ ಇಳಿಯುವ ಸೂಚನೆ ನೀಡಿದ್ದಾರೆ.
ಹೌದು ಬರುವ ವಾರ ಬೆಂಗಳೂರು ಪೂರ್ತಿ ಸ್ತಬ್ದ್ಧವಾಗಲಿದೆ. ಕರ್ನಾಟಕದ ರಾಜಧಾನಿ ಐಟಿ ನಗರಿ, ಬೆಂಗಳೂರಿನ ಬ್ಯೂಟಿ ಹೆಚ್ಚಿಸುವ ಆಟೋಗಳು, ಕ್ಯಾಬ್ ಗಳು ಮತ್ತು ಇತರ ಜನ ಸಂಚಾರ ನಡೆಸುವ ಎಲ್ಲಾ ವಾಹನಗಳು ರಸ್ತೆಗೆ ಇಳಿಯದೆ ಸಂಪು ಹೂಡಲಿವೆ. ಹೌದು, ಬರುವ ಗುರುವಾರ ಜುಲೈ 27 ರಂದು ಆಟೋ ಕ್ಯಾಬ್ ಗಳು ಸ್ಟ್ರೈಕ್ ನಡೆಸಲಿದ್ದು ಬೆಂಗಳೂರು ಆ ದಿನ ಬಿಕೋ ಎನ್ನಲಿದೆ. ಇಡೀ ಜನಸಂಚಾರ ಅಸ್ತವ್ಯಸ್ತಗೊಳ್ಳುವ ಸಂಭವವಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ, ಈ ಪ್ರತಿಭಟನೆಗೆ ಆಟೋ ಮತ್ತು ಕ್ಯಾಬ್ ಚಾಲಕ ಮಾಲಕರ ಸಂಘದ ಪ್ರತಿಕ್ರಿಯೆಗೆ ಕಾಯಬೇಕಾಗುತ್ತದೆ. ಒಟ್ಟು ರಾಜ್ಯದ 23 ಸಾರಿಗೆ ಸಂಸ್ಥೆಗಳ ಸಂಘಗಳಿಂದ ಬೆಂಗಳೂರು ಬಂದ್ ಕರೆ ಬೆಂಬಲ ಸೂಚಿಸಲಾಗಿದೆ.
ಇದನ್ನು ಓದಿ: CM Siddaramaiah: ಸಿದ್ದರಾಮಯ್ಯ, ‘ ಹೊರಗೆ ಮಾತ್ರ ಬಸಪ್ಪ ಒಳಗೆ ವಿಷಪ್ಪ ‘- ಹೇಳಿದ್ದು ಯಾರು ಗೊತ್ತಪ್ಪ ?
