Arecanut price: ಕಳೆದ ಕೆಲವು ವಾರಗಳಿಂದ ಅಡಿಕೆ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ರೈತರ ಮೊಗದಲ್ಲಿ ಕಳೆ ಮೂಡಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡು ರೈತರಿಗೆ ಆತಂಕ ಮನೆಮಾಡಿತ್ತು.
ಹೌದು, ಅಡಿಕೆ ದರ(Arecanut price) ಕಳೆದ ನಾಲ್ಕು ದಿನದಿಂದ ಕುಸಿತದಲ್ಲಿತ್ತು. ಆದರೀಗ ಸ್ವಲ್ಪ ಚೇತರಿಕೆ ಕಂಡಿದೆ. ಕಳೆದ ಒಂದು ತಿಂಗಳಿಂದ ಸತತ ಏರುಗತಿಯಲ್ಲಿದ್ದ ದರ ಡಿಢೀರ್ 2,600 ರೂ. ಇಳಿಕೆಯಾಗಿತ್ತು. ನಿನ್ನೆ ( ಜು.21) ದಿನ ದಾವಣಗೆರೆ ಜಿಲ್ಲೆಯಲ್ಲಿ ರಾಶಿ ಅಡಿಕೆ 55,512 ದರಕ್ಕೆ ಮಾರಾಟವಾಗಿದೆ. ಹಿಂದಿನ ದಿನ 55,099 ಮಾರಾಟವಾಗಿತ್ತು. ಈ ಮೂಲಕ ಇಂದಿನ ಮಾರುಕಟ್ಟೆಯಲ್ಲಿ 400 ರೂ. ಏರಿಕೆಯೊಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. 4 ದಿನದ ಹಿಂದೆ ಕ್ವಿಂಟಾಲ್ ಗೆ 57,399 ರೂ. ಇತ್ತು. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ 57 ಸಾವಿರ ಗಡಿ ದಾಟಿತ್ತು.
ಇಷ್ಟೇ ಅಲ್ಲದೆ ರಾಜ್ಯದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿ ಏರಿಕೆ ಕಂಡಿದ್ದ ಅಡಿಕೆ ಧಾರಣೆ ದಿಢೀರ್ ಕುಸಿತ ಕಂಡಿದೆ. ಬೇಡಿಕೆ ಕಡಿಮೆಯಾದ ಹಿನ್ನೆಲೆ ಅಡಿಕೆ ದರ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ 57 ಸಾವಿರ ಏರಿಕೆ ಕಂಡಿದ್ದ ಅಡಿಕೆ ದಿಢೀರ್ ಕುಸಿತ ದಾಖಲಿಸಿದೆ. ಹೀಗಾಗಿ ಜುಲೈ 21ರಂದು ಯಾವ ಮಾರುಕಟ್ಟೆಯಲ್ಲಿ ಅಡಿಕೆಗೆ ಎಷ್ಟು ಬೆಲೆ ಎಂಬುದನ್ನು ಕೆಳಗೆ ಕೊಡಲಾಗಿದೆ
• ಚನ್ನಗಿರಿ- ರಾಶಿ ಅಡಿಕೆ- 55,099 ರೂ.
• ದಾವಣಗೆರೆ -ರಾಶಿ ಅಡಿಕೆ – 52,869 ರೂ.
• ಹೊನ್ನಾಳಿ -ರಾಶಿ ಅಡಿಕೆ – 53,279 ರೂ.
• ಸಿದ್ದಾಪುರ -ರಾಶಿ ಅಡಿಕೆ – 52,139 ರೂ.
• ಶಿರಸಿ – ರಾಶಿ ಅಡಿಕೆ -51,018 ರೂ.
• ಯಲ್ಲಾಪುರ – ರಾಶಿ ಅಡಿಕೆ -53,500 ರೂ.
• ಬಂಟ್ವಾಳ – ಹಳೆದು-48,000 – 50,500 ರೂ.
• ಬಂಟ್ವಾಳ – ಕೋಕ- 12,500 – 25,000 ರೂ.
• ಮಂಗಳೂರು – ಹೊಸದು- 25,876 -31,000 ರೂ.
• ಪುತ್ತೂರು – ಕೋಕ 11,000 – 26,000 ರೂ.
• ಪುತ್ತೂರು- ಹೊಸದು 32,000 – 38,000 ರೂ.
• ಭದ್ರಾವತಿ -ರಾಶಿ ಅಡಿಕೆ -54,011 ರೂ.
• ಹೊಸನಗರ -ರಾಶಿ ಅಡಿಕೆ -45,770 ರೂ.
• ಸಾಗರ – ರಾಶಿ ಅಡಿಕೆ -53,529 ರೂ.
• ಶಿಕಾರಿಪುರ -ರಾಶಿ ಅಡಿಕೆ -45,900 ರೂ.
• ಶಿವಮೊಗ್ಗ -ರಾಶಿ ಅಡಿಕೆ -55,099 ರೂ.
• ತೀರ್ಥಹಳ್ಳಿ – ರಾಶಿ ಅಡಿಕೆ -54,699 ರೂ.
• ತುಮಕೂರು -ರಾಶಿ ಅಡಿಕೆ- 52,100 ರೂ.
