Mysore: ಪ್ರಿಯಕರ ಕೈಕೊಟ್ಟು ಬೇರೊಬ್ಬಳ ಕೈ ಹಿಡಿದು ಸುತ್ತಾಡಿದ ಎಂದು ಮನನೊಂದು ಯುವತಿಯೋರ್ವಳು ಇಲಿ ಪಾಷಾಣ ಸೇವಿಸಿ ಅತ್ಮಹತ್ಯೆ (Sucide) ಮಾಡಿಕೊಂಡಿರುವ ಘಟನೆ ಮೈಸೂರಿನ (Mysore) ಕೆ.ಆರ್. ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಸರ್ಗ(20) ಎಂದು ಗುರುತಿಸಲಾಗಿದೆ.
ನಿಸರ್ಗ ಕೆ. ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಈಕೆ ಕಳೆದ 4 ವರ್ಷದಿಂದ ಸುಹಾಸ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನೂ ನಿಸರ್ಗಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಹಲವು ಕಡೆ ಸುತ್ತಾಡಿಕೊಂಡು ಚೆನ್ನಾಗಿಯೇ ಇದ್ದರು. ಆದರೆ, ಇವರಿಬ್ಬರ ಮಧ್ಯೆ
ಅನನ್ಯ ಎಂಬ ಯುವತಿಯ ಪ್ರವೇಶವಾಗಿದ್ದು, ಸುಹಾಸ್ ಅನನ್ಯನೆಡೆಗೆ ವಾಲಿದ್ದಾನೆ. ನಿಸರ್ಗಳಿಗೆ ಮೋಸ ಮಾಡಿ ಸುಹಾಸ್ ಅನನ್ಯಳನ್ನು ಪ್ರೀತಿಸಿದ. ಅನನ್ಯ-ಸುಹಾಸ್ ನಿಸರ್ಗಳ ಕಣ್ಣ ಮುಂದೆಯೇ ಒಟ್ಟಿಗೆ ಸುತ್ತುತ್ತಿದ್ದರು.
ಇದರಿಂದ ಮನನೊಂದು ನಿಸರ್ಗ ತಮ್ಮ ಪ್ರೀತಿಯ ವಿಚಾರವನ್ನು ಅನನ್ಯಳ ತಂದೆ ಗೋಪಾಲಕೃಷ್ಣ ಹಾಗೂ ಸುಹಾಸ್ ರೆಡ್ಡಿ ತಂದೆ ಬಾಬುರೆಡ್ಡಿ, ತಾಯಿ ರೂಪ ಅವರಿಗೂ ತಿಳಿಸಿದ್ದಾಳೆ. ಆದರೆ, ಇವರೆಲ್ಲಾ ಸಮಾಧಾನದ ಮಾತು ಹೇಳುವ ಬದಲು ಯುವತಿಗೇ ಮನಬಂದಂತೆ ಅವಮಾನ ಮಾಡಿ ಬೈದು ಕಳಿಸಿದರು.
ಎಲ್ಲರೂ ಬೈದರು ಹಾಗೂ ಪ್ರೀತಿಸಿದ ಯುವಕನೂ ಕೈಕೊಟ್ಟ ಎಂದು ಮನನೊಂದ ನಿಸರ್ಗ ಸಾವಿನ ಕದ ತಟ್ಟಿದ್ದಾಳೆ. ಮನೆಯಲ್ಲಿದ್ದ ಇಲಿಪಾಷಾಣವನ್ನು ಸೇವಿಸಿದ್ದಾಳೆ. ಹಾಗೂ ಭಯದಿಂದ ಮನೆಯಲ್ಲಿ ಈ ವಿಚಾರವನ್ನು ಯಾರಿಗೂ ಹೇಳದೆ ಡೆತ್ನೋಟ್ ಬರೆದಿಟ್ಟಳು.
ನನ್ನ ಸಾವಿಗೆ ಸುಹಾಸ್ ರೆಡ್ಡಿ, ಅನನ್ಯ, ಗೋಪಾಲಕೃಷ್ಣ, ಬಾಬು ರೆಡ್ಡಿ, ರೂಪ ಅವರು ಕಾರಣ ಎಂದು ನಿಸರ್ಗ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಇಲಿಪಾಷಾಣ ಸೇವಿಸಿದ ಹಿನ್ನೆಲೆ ನಿಸರ್ಗಳಿಗೆ ವಾಂತಿ ಬೇದಿ ಶುರುವಾಯಿತು. ಈ ಬಗ್ಗೆ ತಿಳಿಯದ ಪಾಲಕರು ಆಕೆಯನ್ನು ಕೆ.ಆರ್. ನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದರು. ಆದರೆ, ಗುಣವಾಗದ ಹಿನ್ನೆಲೆಯಲ್ಲಿ ಜುಲೈ 11ರಂದು ಮತ್ತೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದಿದ್ದರು. ಜುಲೈ 12ರಂದು ನಿಸರ್ಗಗೆ ಹೊಟ್ಟೆ ನೋವು ಜಾಸ್ತಿಯಾಗಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಜುಲೈ 13ರಂದೂ ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಜುಲೈ 14ರಂದು ದಾಖಲಿಸಲಾಯಿತು. ಯುವತಿಯನ್ನು ಪರೀಕ್ಷೆ ಮಾಡಿದ ವೈದ್ಯರು ಈಕೆ ಇಲಿಪಾಷಾಣ ಕುಡಿದಿರಬಹುದು ಎಂದು ತಿಳಿಸಿದರು.
ಇದರಿಂದ ಆಘಾತಗೊಂಡ ಪೋಷಕರು ಈ ಬಗ್ಗೆ ನಿಸರ್ಗಳನ್ನು ವಿಚಾರಿಸಿದಾಗ ವಿಷ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಎಲ್ಲಾ ವಿಚಾರವನ್ನು ಹೇಳಿದಳು. ಕೊನೆಗೆ ಜುಲೈ 20 ರಂದು ಮದ್ಯಾಹ್ನ 3 ಗಂಟೆ ಚಿಕಿತ್ಸೆ ಫಲಕಾರಿಯಾಗದೇ ನಿಸರ್ಗ ಮೃತಪಟ್ಟಿದ್ದಾಳೆ. ನಿಸರ್ಗ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಸುಹಾಸ್ ರೆಡ್ಡಿ ಎಸ್ಕೇಪ್ ಆಗಿದ್ದಾನೆ.
ಜುಲೈ 20 ರಂದು ನಿಸರ್ಗ ಪಾಲಕರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಸುಹಾಸ್ ರೆಡ್ಡಿ, ಅನ್ಯನ ಪೋಷಕರು ಸೇರಿದಂತೆ 5 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಲೆಮರಿಸಿಕೊಂಡಿರುವ ಸುಹಾಸ್ ರೆಡ್ಡಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Chandigarh : ತನ್ನ ಠಾಣೆಯ ವಿರುದ್ಧವೇ ತಿರುಗಿಬಿದ್ದ ಪೇದೆ: ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ, ಹೈಡ್ರಾಮ !
