Kichha Sudeep Controversy: ಕಳೆದ 15 ದಿನಗಳಿಂದ ಕಿಚ್ಚ ಸುದೀಪ್ ಹಾಗೂ ಎಂಎನ್ ಕುಮಾರ್ ನಡುವಿನ ಕಿತ್ತಾಟ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು (Kichha Sudeep Controversy). ದೇಶಾದ್ಯಂತ ಈ ವಿವಾದ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಸುದೀಪ್ ಹಣ ಪಡೆದು ಕಾಲ್ಶೀಟ್ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಕಿಚ್ಚ ನಿರ್ಮಾಪಕ ಕುಮಾರ್ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದರು.
ಸ್ಯಾಂಡಲ್ ವುಡ್ ನಾಯಕ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (M N Kumar) ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿ ನಂತರ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅಂಗಳಕ್ಕೆ ತಲುಪಿ ಮಾತುಕತೆ ಮೂಲಕ ಬಗೆಹರಿಸಲು ಇಬ್ಬರೂ ಪ್ರಯತ್ನಿಸಿದರು. ನಟ ಸುದೀಪ್ ಮತ್ತು ನಿರ್ಮಾಪಕ ಎಮ್ ಎನ್ ಕುಮಾರ್ ಜಟಾಪಟಿ ನಡುವೆ ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಸಪೋರ್ಟ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಕೋಟಿಗೊಬ್ಬ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು (Kichcha Sudeep) ಜುಲೈ 23ರಂದು ಸುದ್ದಿಗೋಷ್ಠಿ ನಡೆಸಿ ʻʻಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆʼʼ ಎಂದು ಚಂದ್ರಚೂಡ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಈ ಬೆನ್ನಲ್ಲೇ ಚಂದ್ರಚೂಡ್ ಇಂದು (ಜು.24) ಸುದ್ದಿಗೋಷ್ಠಿ ನಡೆಸಿ ʻʻನಾನು ಸೂರಪ್ಪ ಬಾಬು ಮೇಲೆ ಏನು ಆರೋಪ ಮಾಡಿದ್ದೇನೋ ಅದಕ್ಕೆ ಬದ್ಧನಾಗಿರುತ್ತೇನೆʼʼ ಎಂದು ಹೇಳುವ ಮೂಲಕ ಚಂದ್ರಚೂಡ್ ಸೂರಪ್ಪ ಬಾಬಗೆ ತಿರುಗೇಟು ನೀಡಿದ್ದಾರೆ.
ʻʻನಾನು ಸೂರಪ್ಪ ಬಾಬು ಮೇಲೆ ಏನು ಆರೋಪ ಮಾಡಿದ್ದೇನೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಈ ವ್ಯಕ್ತಿಗೆ ಎಲ್ಲವನ್ನೂ ಕೆದಕಬೇಕು. ಆತ ಸ್ಯಾಡಿಸ್ಟ್. ಈತ ಜೊತೆಯಲ್ಲಿದ್ದವರಿಗೇ ಈ ರೀತಿ ಮಾಡೊದಾ?. ಸುದೀಪ್ ಸರ್ ಗೆ ಸಮಸ್ಯೆ ಮಾಡೋದೆ ಇವರ ಗುರಿ. ಸಮಸ್ಯೆ ಇದ್ದಾಗ ಸುದೀಪ್ ಸರ್ ಹತ್ರ ಹೋಗಿ ಮಾತಾಡಬೇಕು. ಕೋಟಿಗೊಬ್ಬ 3 ಸಿನಿಮಾ ಮಾಡುವಾಗ ಸೂರಪ್ಪ ಬಾಬುಗೆ ಸುದೀಪ್ ಸರ್ ಎಷ್ಟು ಸಹಾಯ ಮಾಡಿದ್ದಾರೆ ಗೊತ್ತಾ?” ಎಂದು ಕಿಡಿ ಕಾರಿದ್ದಾರೆ.
“ಸೂರಪ್ಪ ಬಾಬು ಸುದೀಪ್ ಅವರ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ಸುದೀಪ್ ಸರ್ ಕಾಲ್ ಶೀಟ್ ತಗೊಂಡರೆ 50 ಕೋಟಿ ರೂ. ಬ್ಯೂಸಿನೆಸ್ ಆಗುತ್ತದೆ. ಕೋಟಿಗೊಬ್ಬ 3 ರಿಲೀಸ್ ಆಗುವುದಕ್ಕೆ ಸುದೀಪ್ ಕಾರಣ ಎಂದು ಹೇಳುತ್ತಾರೆ. ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡುತ್ತಾನೆ. ಸುದೀಪ್ ಸರ್ ಹತ್ರ ಹೋಗಿ ಮಾತಾಡಬೇಕು ತಾನೆ? ಸುದ್ದಿ ಮಾಡಿ ಸಾಕು ಎಂದು ಎಮ್ ಎನ್ ಕುಮಾರ್ ಹೇಳುತ್ತಾರೆ. ಇಂತವರು ಶಿಖಂಡಿ ಎನ್ನದೆ ಏನೆನ್ನಬೇಕು? ಮೊದಲು ಸೂರಪ್ಪ ಬಾಬು ತಾಕತ್ ಇದ್ದರೆ ಮನೆ ಅಡ್ರಸ್ ಕೊಡಲಿ. ವಂಚಕ ಸೂರಪ್ಪ ಬಾಬು ಅವರು ಕಾರ್ಮಿಕರಿಗೆ ಎಷ್ಟು ವಂಚನೆ ಮಾಡಿದ್ದಾರೆ ಗೊತ್ತಾ? ನನ್ನ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ” ಎಂದು ಹೇಳಿದರು.
“ಅಲ್ಲದೆ, ಈ ಹಿಂದೆ ಸೂರಪ್ಪ ಬಾಬು ಸ್ಟಾರ್ ನಟನ ಬಗ್ಗೆ ಕುಡಿದ ಅಮಲಿನಲ್ಲಿ ಮಾತನಾಡಿದ್ದಾರೆ. ತಲೆ ಬೆಳ್ಳಗಾಗಿಲ್ಲ ಅದಾಗಲೇ ಕಂಡೋರ ವಿರುದ್ಧ ಷಡ್ಯಂತ್ರ ಹೂಡುತ್ತಿದ್ದಾರೆ. ಇವರನ್ನು ಸುದೀಪ್ ಸರ್ ಕ್ಷಮಿಸಬಹುದು. ಆದರೆ ನಾನಂತು ಕ್ಷಮಿಸೋದಿಲ್ಲ. ಈ ಪ್ರಕರಣದಿಂದ ಸುದೀಪ್ ಅವರು ತುಂಬಾನೇ ನೊಂದುಕೊಂಡಿದ್ದಾರೆ. ಕೋರ್ಟ್ಗೆ ಹೋದಾಗ ತುಂಬಾ ಬೇಜಾರಾಗಿದ್ದರು. ಸದ್ಯ ಈಗ ಈ ಸಮಸ್ಯೆ ಬಗೆಹರಿತಿದೆ. ಶಿವಣ್ಣ, ರವಿ ಸರ್ ಬಂದು ಬಗೆ ಹರಿಸುತ್ತಿದ್ದಾರೆ. ಹೇಡಿ ಸೂರಪ್ಪ ಬಾಬು,
ನಿಮಗೆ ಸಹಾಯ ಮಾಡಿದವರಿಗೇ ವಂಚಿಸುತ್ತೀರಾ ಅಂದರೆ ನಿಮ್ಮ ಲಜ್ಜೆಗೇಡಿತನ ಇದುʼʼ ಎಂದು ಹೇಳಿದರು.
ಇದನ್ನು ಓದಿ: Karnataka government: ರಾಜ್ಯ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್ – ಅನ್ನಭಾಗ್ಯದ ಅಕ್ಕಿಗೂ ಕೋಕ್ ?!
