Baby Born: ಪ್ರಕೃತಿಯಲ್ಲಿ ಹಲವಾರು ರೀತಿಯ ಅಸಹಜ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಒಪ್ಪಲಾಗದ ಬದಲಾವಣೆಗಳು ಜೀವಸಂಕುಲದಲ್ಲಿ ನಡೆದಾಗ ಆಶ್ಚರ್ಯ ಎನಿಸುವುದರಲ್ಲಿ ಎರಡು ಮಾತಿಲ್ಲ.
ಸಾಮಾನ್ಯವಾಗಿ ಮಗು ಹುಟ್ಟುವ (Baby Born) ಮೊದಲು 9 ತಿಂಗಳ ಕಾಲ ಅಂದರೆ 40 ವಾರಗಳ ಕಾಲ ತಾಯಿಯ (Mother) ಗರ್ಭದಲ್ಲಿ ಇರುತ್ತದೆ. ಆ 9 ತಿಂಗಳುಗಳ ಸಂದರ್ಭದಲ್ಲಿ, ಮಗುವಿನ ದೇಹದ ಅಂಗಾಗ ಮತ್ತು ಮಾನಸಿಕವಾಗಿಯೂ ಕ್ರಿಯಾತ್ಮಕ ಸಾಮರ್ಥ್ಯಗಳು ಅಭಿವೃದ್ಧಿಗೊಳ್ಳುತ್ತವೆ.
ಆದರೆ ಆಶ್ಚರ್ಯ ಎಂದರೆ ಇಲ್ಲೊಂದು 22 ವಾರಗಳಾಗಿರುವ ಕೇವಲ 350 ಗ್ರಾಂ. ಇರುವ ಹೆಣ್ಣು ಮಗುವೊಂದು (Baby Girl Born) ಜನಿಸಿದೆ. ಹೌದು, ಅದೃಷ್ಟವಶಾತ್ ಈಗ ಆ ಮಗು ಆರೋಗ್ಯವಾಗಿದೆ. ಯಾವುದೇ ಸಮಸ್ಯೆಗಳಿಲ್ಲದ ಸಾಮಾನ್ಯ ಮಗುವಿನಂತೆ ಇದು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಅಮೆರಿಕದ ಕನೆಕ್ಟಿಕಟ್‌ನ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯೊಬ್ಬರು ಆಗಮಿಸಿದ್ದರು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಫೆ.22ರಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗುವಿನ ತೂಕ ಕೇವಲ 12.4 ಔನ್ಸ್ ಅಥವಾ ಕೇವಲ 350 ಗ್ರಾಂ. ಆದರೆ ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ.
ವೈದ್ಯರು ಇದುವರೆಗೆ ಅಷ್ಟು ಚಿಕ್ಕ ಮಗುವನ್ನು ನೋಡಿರಲಿಲ್ಲ. ಆದ್ದರಿಂದ ನೋಡಿ ಬೆಚ್ಚಿಬಿದ್ದಿದ್ದಾರೆ. ಇನ್ನು ಈ ಮಗು ಅಂಗೈಗೆ ಹಿಡಿಸುವಷ್ಟು ಚಿಕ್ಕದಾಗಿತ್ತು ಮತ್ತು ಮಗು ಜನಿಸಿದಾಗ, ಅದು ನ್ಯುಮೋನಿಯಾದಿಂದ ಬಳಲುತ್ತಿತ್ತು, ಹಾಗಾಗಿ ತಾಯಿ ಮತ್ತು ಮಗು ಅತಂತ್ರ ಸ್ಥಿತಿಯಲ್ಲಿತ್ತು. ತಕ್ಷಣ ವೈದ್ಯರು ಚಿಕಿತ್ಸೆ ಆರಂಭಿಸಿದರು.
ಮೊದಮೊದಲು ಉಳಿಸುವುದು ಕಷ್ಟವಾಗಬಹುದು ಎಂದು ಅನಿಸಿದರೂ ವೈದ್ಯರು ಪರಿಸ್ಥಿತಿ ತಿಳಿಗೊಳಿಸಿ ಮಗುವನ್ನು ಚೆನ್ನಾಗಿ ನೋಡಿಕೊಂಡರು. ಸುಮಾರು 4 ತಿಂಗಳ ಚಿಕಿತ್ಸೆಯ ನಂತರ, ಮಗು ಈಗ ಉತ್ತಮವಾಗಿದೆ. ನಂತರ ಮಗುವನ್ನು ಮನೆಗೆ ಕಳುಹಿಸಲಾಗಿತ್ತು. ಈಗ ಮಗುವಿನ ತೂಕ 7.5 ಪೌಂಡ್ ಅಂದರೆ 3.40 ಕೆ.ಜಿ ಇದೆ.
ಸದ್ಯ ಚಿಕಿತ್ಸೆ ಮುಗಿಸಿ ಮಗು ಮನೆಗೆ ಹೋದಾಗ ಆಸ್ಪತ್ರೆಯ ಸಿಬ್ಬಂದಿಗಳೆಲ್ಲಾ ಸಂಭ್ರಮಾಚರಣೆ ಮಾಡಿ ಖುಷಿಪಟ್ಟರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗು ಚೇತರಿಸಿಕೊಂಡು ಮನೆಗೆ ಮರಳಿದ್ದನ್ನು ಕಂಡು ವೈದ್ಯರು ಸಹ ನಿರಾಳರಾದರು.
ವೈದ್ಯರ ಪ್ರಕಾರ, ಪೂರ್ಣ ಬೆಳವಣಿಗೆ ಇಲ್ಲದೆ ಜನಿಸಿದ ಮಕ್ಕಳನ್ನು ಅಕಾಲಿಕ ಶಿಶುಗಳು ಎಂದು ಕರೆಯಲಾಗುತ್ತದೆ. ಈ ರೀತಿ ಜನಿಸಿದ ಮಗು ಇತರ ಮಕ್ಕಳಿಗಿಂತ ಸ್ವಲ್ಪ ಕಡಿಮೆ ಅಭಿವೃದ್ಧಿ ಮತ್ತು ಜ್ಞಾನದ ಕೌಶಲ್ಯಗಳನ್ನು ಹೊಂದಿರುತ್ತದೆ. ಈ ರೀತಿಯಲ್ಲಿ ಜನಿಸಿದ ಮಗು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ. ಅವರ ಸಂಪೂರ್ಣ ದೇಹವು ಅಭಿವೃದ್ಧಿಯಾಗದಿದ್ದಾಗ ಶಿಶುಗಳು ಯಾವಾಗಲೂ ಅನಿಶ್ಚಿತ ಸ್ಥಿತಿಯಲ್ಲಿರುತ್ತಾರೆ. ಆದರೆ ಈ ಮಗು ಬದುಕಿದ್ದು ಪವಾಡವೇ ಎಂದು ಹೇಳಿದ್ದಾರೆ.
ಇದನ್ನು ಓದಿ: Woman marries Lord Shiva: ಸಾಕ್ಷಾತ್ ಶಿವನನ್ನೇ ಶಾಸ್ತ್ರೋಕ್ತವಾಗಿ, ಮದುವೆಯಾದ ಯುವತಿ, ವೈರಲ್ ಆಯ್ತು ಫೋಟೋಸ್!
