Home » Crime News: ಮಹಿಳೆಯ ಮನೆಯಲ್ಲಿ 1 ಲಕ್ಷ ಜಿರಳೆಗಳು, 118 ಮೊಲಗಳು ; ಕೊನೆಗೂ ಅರೆಸ್ಟ್ ಆದ ಖತರ್ನಾಕ್ ಲೇಡಿ !

Crime News: ಮಹಿಳೆಯ ಮನೆಯಲ್ಲಿ 1 ಲಕ್ಷ ಜಿರಳೆಗಳು, 118 ಮೊಲಗಳು ; ಕೊನೆಗೂ ಅರೆಸ್ಟ್ ಆದ ಖತರ್ನಾಕ್ ಲೇಡಿ !

0 comments
Crime News

Crime News: ಮಹಿಳೋರ್ವಳು ತನ್ನನ್ನು ಪ್ರಾಣಿ ಪ್ರೇಮಿ ಎಂದು ಹೇಳಿಕೊಳ್ಳುತ್ತಾ ಮನೆಯಲ್ಲಿ 118 ಮೊಲಗಳು, 150 ಪಕ್ಷಿಗಳು, ಏಳು ಆಮೆಗಳು, ಮೂರು ಹಾವುಗಳು ಮತ್ತು 15 ಬೆಕ್ಕುಗಳೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಜಿರಳೆಗಳನ್ನು ಸಾಕಿದ್ದಳು. ಸದ್ಯ ಈ ಮಹಿಳೆಯನ್ನು ಪೊಲೀಸರು ಅರೆಸ್ಟ್ (Crime News) ಮಾಡಿದ್ದಾರೆ.

ಮಹಿಳೆ ಅಮೆರಿಕದ ನಗರದ ನಿವಾಸಿ. ಈಕೆಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಂತೆ. ಅದಕ್ಕಾಗಿ ಸ್ನೇಹಿತರು ಆಕೆಯನ್ನು ‘ಸ್ನೋ ವೈಟ್’ ಎಂದು ಕರೆಯುತ್ತಿದ್ದರು. ಅಲ್ಲದೆ, ಮಹಿಳೆ ತನ್ನನ್ನು ತಾನು ಸಾಮಾಜಿಕ ಕಾರ್ಯಕರ್ತೆ ಎಂದು ಕರೆದುಕೊಳ್ಳುತ್ತಿದ್ದಳು. ನಂತರದಲ್ಲಿ ಆಕೆ ತನ್ನ ಮನೆಯಲ್ಲಿ ಪ್ರಾಣಿಗಳನ್ನು ಸಾಕಲು ಆರಂಭಿಸಿದಳು. ಎಷ್ಟು ಸಾಕಿದಳೆಂದರೆ ಲಕ್ಷಕ್ಕೂ ಹೆಚ್ಚು. ಈಕೆ ಹಲವಾರು ತಿಂಗಳಿನಿಂದ ಈ ಜೀವಿಗಳನ್ನು ಸಂಗ್ರಹಿಸಿ ಕೊನೆಗೆ ಜಿರಳೆಗಳು ಒಂದು ಲಕ್ಷ ದಾಟಿದೆ.

ಇನ್ನೂ ಕೆಲವು ಜನರು ಸಹ ಆಕೆಯ ಮನೆಯಲ್ಲಿ ಅವಲಂಬಿತರಾಗಿ ವಾಸಿಸುತ್ತಿದ್ದಾರೆ. ಆದರೆ ಸಮಯ ಕಳೆದಂತೆ ಮಹಿಳೆಯ ಮನೆಯಲ್ಲಿ
ಸ್ಥಳವಿರಲಿಲ್ಲ. ಮನೆ ಗಲೀಜಾಗಿ ಮನೆಯಿಂದ ದುರ್ವಾಸನೆ ಬರಲಾರಂಭಿಸಿತು. ಇದನ್ನು ಗಮನಿಸಿದವರು ಪೊಲೀಸರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪೊಲೀಸ್ ತಂಡ ತನಿಖೆ ಆರಂಭಿಸಿದಾಗ ಎಲ್ಲರೂ ದಿಗ್ಭ್ರಮೆಗೊಂಡರು. ಯಾಕಂದ್ರೆ ಆಕೆಯ ಮನೆಯಲ್ಲಿ ಕೇವಲ ಜಿರಳೆ ಇದೆ ಎಂದು ಭಾವಿಸಿದ್ದವರಿಗೆ ಶಾಕ್ ಆಗಿದೆ. ಮಹಿಳೆಯ ಮನೆಯಲ್ಲಿ 118 ಮೊಲಗಳು, 150 ಪಕ್ಷಿಗಳು, ಏಳು ಆಮೆಗಳು, ಮೂರು ಹಾವುಗಳು ಮತ್ತು 15 ಬೆಕ್ಕುಗಳೊಂದಿಗೆ ಒಂದು ಲಕ್ಷಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ.

ಮಹಿಳೆ ಪ್ರಾಣಿಗಳನ್ನು ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಮನೆಯಲ್ಲಿ ಗಾಳಿ ತುಂಬಾ ಹಾನಿಕಾರಕವಾಗಿದ್ದು, ಯಾರೂ ಒಳಗೆ ಹೆಚ್ಚು ಕಾಲ ಇರುವಂತಿರಲಿಲ್ಲ. ಮಹಿಳೆಯ ಈ ಕಾರ್ಯಕ್ಕೆ ಆಕೆಯನ್ನು ಬಂಧಿಸಲಾಯಿತು. ಆದರೆ, ಆಕೆಯ ಸ್ನೇಹಿತರು ಆಕೆ ಪ್ರಾಣಿ ಪ್ರೇಮಿ ಎಂದು ಸಮರ್ಥಿಸಿಕೊಂಡಿದ್ದಾರೆ. ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಇದನ್ನು ಓದಿ: Daily horoscope: ಈ ರಾಶಿಯವರ ಕೈಗೊಂಡ ಕೆಲಸ ಮಧ್ಯದಲ್ಲಿ ನಿಲ್ಲುತ್ತೆ! 

You may also like

Leave a Comment