ಪುತ್ತೂರು: ಗ್ರಾಮ ಪಂಚಾಯತ್ ಸದಸ್ಯರ ತೆರವಾದ ಸ್ಥಾನಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ತಾಲೂಕಿನ ಆರ್ಯಾಪು, ನಿಡ್ಪಳ್ಳಿ ಕ್ಷೇತ್ರದಿಂದ ಈ ಬಾರಿ ಪುತ್ತಿಲ ಪರಿವಾರ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿದಿತ್ತು.ಮೊದಲ ಇನ್ನಿಂಗ್ಸ್ ನಲ್ಲೇ ಆರ್ಯಾಪು ಕ್ಷೇತ್ರದಿಂದ ಪುತ್ತಿಲ ಪರಿವಾರದ ಅಭ್ಯರ್ಥಿ ಗೆಲುವಿನ ನಗೆ ಬೀರಿದರೆ, ನಿಡ್ಪಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ನಿಡ್ಪಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪುತ್ತಿಲ ಪರಿವಾರದ ಅಭ್ಯರ್ಥಿ ವಿರೋಚಿತ ಸೋಲುಂಡರೂ ಮೊದಲ ಬಾರಿಗೆ ಪುತ್ತೂರಿನಲ್ಲಿ ಪುತ್ತಿಲ ಪರಿವಾರ ತನ್ನ ಖಾತೆಯನ್ನು ತೆರೆದಿದೆ.

ಮೊದಲ ಬಾರಿಗೆ ತಮ್ಮ ಅಭ್ಯರ್ಥಿಯ ಗೆಲುವಿನ ಖುಷಿಯಿಂದ ನಿನ್ನೆ ನಗರದಲ್ಲಿ ನಡೆದಿದ್ದ ವಿಜಯೋತ್ಸವಕ್ಕೆ ಯಾವುದೇ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಶಾಂತಿ ಭಂಗದ ಪ್ರಕರಣ ದಾಖಲಾಗಿದೆ.

